China Border; ಸಮಗ್ರತೆ ರಕ್ಷಿಸಲು ಮೋದಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ: ಮನಮೋಹನ್ ಸಿಂಗ್
Team Udayavani, Sep 8, 2023, 12:49 PM IST
ನವದೆಹಲಿ: ಭಾರತವು “ತನ್ನ ಸಾರ್ವಭೌಮ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುವಲ್ಲಿ ಸರಿಯಾದ ಕೆಲಸವನ್ನು ಮಾಡಿದೆ ಮತ್ತು ಶಾಂತಿಗಾಗಿ ಮನವಿ ಮಾಡಿದೆ” ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಮೆಗಾ ಜಿ20 ಸಭೆಯ ಮೊದಲು ದಿ ಇಂಡಿಯನ್ ಎಕ್ಸ್‌ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವರು ದೇಶೀಯ ರಾಜಕೀಯಕ್ಕಾಗಿ ವಿದೇಶಾಂಗ ನೀತಿಯನ್ನು ಬಳಸುವ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಭಾರತದ ಜಿ20 ಅಧ್ಯಕ್ಷ ಸ್ಥಾನದ ಕುರಿತು ಮಾತನಾಡುತ್ತಾ, ಡಾ ಸಿಂಗ್ ಅವರ ಸಮಯಕ್ಕಿಂತ ದೇಶೀಯ ರಾಜಕೀಯಕ್ಕೆ ವಿದೇಶಾಂಗ ನೀತಿಯು ಹೆಚ್ಚು ಮಹತ್ವದ್ದಾಗಿದೆ ಎಂದು ಹೇಳಿದರು. ರಾಜತಾಂತ್ರಿಕತೆಯನ್ನು ಪಕ್ಷ ರಾಜಕಾರಣಕ್ಕೆ ಬಳಸಿಕೊಳ್ಳುವಲ್ಲಿ ಸಂಯಮ ಕಾಯ್ದುಕೊಳ್ಳುವುದು ಮುಖ್ಯ ಎಂದರು.
ರಷ್ಯಾ- ಉಕ್ರೇನ್ ಯುದ್ದದ ವಿಚಾರದಲ್ಲಿ ಕಠಿಣ ರಾಜತಾಂತ್ರಿಕ ಸ್ಥಾನವನ್ನು ಭಾರತ ಸರ್ಕಾರ ನಿಭಾಯಿಸಿದ ರೀತಿಗೆ ಮನಮೋಹನ್ ಸಿಂಗ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Shah Rukh Khan; ಬಾಲಿವುಡ್ ದಾಖಲೆ ಅಳಿಸಿದ ‘ಜವಾನ್’; ಒಂದೇ ದಿನದಲ್ಲಿ 150 ಕೋಟಿ ಕಲೆಕ್ಷನ್
“ಯಾವಾಗ ಎರಡು ಅಥವಾ ಹೆಚ್ಚು ರಾಷ್ಟ್ರಗಳು ಸಂಘರ್ಷದಲ್ಲಿ ತೊಡಗುತ್ತವೆಯೋ ಆಗ ಯಾರ ಪರವಾಗಿ ಇರಬೇಕು ಎಂದು ಉಳಿದ ರಾಷ್ಟ್ರಗಳಿಗೆ ಸಂದಿಗ್ಧತೆ ಎದುರಾಗುತ್ತದೆ. ಭಾರತವು ನಮ್ಮ ಸಾರ್ವಭೌಮತ್ವ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಮೊದಲ ಸ್ಥಾನವನ್ನು ನೀಡುವುದರ ಜೊತೆಗೆ ಶಾಂತಿಗಾಗಿ ಮನವಿ ಮಾಡುವಲ್ಲಿ ಸರಿಯಾದ ಕೆಲಸವನ್ನು ಮಾಡಿದೆ ಎಂದು ನಾನು ನಂಬುತ್ತೇನೆ. ಜಿ20 ಅನ್ನು ಭದ್ರತೆಗೆ ಸಂಬಂಧಿಸಿದ ಘರ್ಷಣೆಗಳನ್ನು ಇತ್ಯರ್ಥಪಡಿಸುವ ವೇದಿಕೆಯಾಗಿ ಎಂದಿಗೂ ಕಲ್ಪಿಸಲಾಗಿಲ್ಲ. ಜಾಗತಿಕ ವ್ಯಾಪಾರದಲ್ಲಿನ ಹವಾಮಾನ, ಅಸಮಾನತೆ ಮತ್ತು ವಿಶ್ವಾಸದ ಸವಾಲುಗಳನ್ನು ನಿಭಾಯಿಸಲು ಭದ್ರತಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನೀತಿ ಸಮನ್ವಯದತ್ತ ಗಮನ ಹರಿಸುವುದು ಜಿ20 ಗೆ ಮುಖ್ಯವಾಗಿದೆ”ಎಂದು ಅವರು ಹೇಳಿದರು.
ಚೀನಾ ಬಾಂಧವ್ಯ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶೃಂಗಸಭೆಯಿಂದ ಹೊರಗುಳಿದಿರುವ ಕುರಿತು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಾದೇಶಿಕ ಮತ್ತು ಸಾರ್ವಭೌಮ ಸಮಗ್ರತೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ, ಆದರೆ ಸರ್ಕಾರಕ್ಕೆ ಯಾವುದೇ ಸಲಹೆ ನೀಡಲು ಇಷ್ಟಪಡುವುದಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.