ಬ್ಯಾನರ್‌ಗೆ ಪರ್ಮಿಶನ್ ಕೊಡಿ
ತ.ನಾ.ಸರಕಾರದಿಂದ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ
Team Udayavani, Oct 3, 2019, 6:41 AM IST
ಚೆನ್ನೈ: ಚೀನದ ವುಹಾನ್‌ನಲ್ಲಿ 2018 ರಲ್ಲಿ ನಡೆದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಎರಡನೇ ಹಂತದ ಅನೌಪಚಾರಿಕ ಸಭೆ ಅ. 11-13ರ ವರೆಗೆ ಮಹಾಬಲಿಪುರಂನಲ್ಲಿ ನಡೆಯಲಿದೆ. ಅದಕ್ಕೆ ಪೂರಕವಾಗಿ ತಮಿಳು ನಾಡು ಸರಕಾರ ಸ್ವಾಗತ ಕಮಾನು, ಫ್ಲೆಕ್ಸ್ ಹಾಕಲು ಅನುಮತಿ ನೀಡುವಂತೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ. ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ.
ಕೆಲ ದಿನಗಳ ಹಿಂದೆ ಎಐಎಡಿಎಂಕೆ ಸ್ಥಳೀಯ ನಾಯಕರೊಬ್ಬರ ಪರ ಹಾಕಲಾಗಿದ್ದ ಪ್ಲೆಕ್ಸ್ ಬಿದ್ದು ಮಹಿಳಾ ಟೆಕ್ಕಿ ಅಸುನೀಗಿದ್ದರು. ಈ ಪ್ರಕರಣ ವಿವಾದಕ್ಕೆ ಒಳಗಾದ ಬಳಿಕ ಸರಕಾರ ಕೋರ್ಟ್ ಮೊರೆ ಹೋಗಿದೆ. ನಗರಾಭಿವೃದ್ಧಿ ಆಯುಕ್ತ ಕೆ. ಭಾಸ್ಕರನ್ ಅರ್ಜಿ ಸಲ್ಲಿಸಿದ್ದು “ಎರಡು ರಾಷ್ಟ್ರಗಳ ನಾಯಕರು ಭೇಟಿಗಾಗಿ ಆಗಮಿಸುತ್ತಿದ್ದಾರೆ. ಸಂಪ್ರದಾಯ ಪ್ರಕಾರ ವಿದೇಶಾಂಗ ಸಚಿವಾಲಯ ಬ್ಯಾನರ್‌ಗಳನ್ನು ಕಟ್ಟಿ ಸ್ವಾಗತ ಮಾಡಬೇಕಿದೆ. ಅದರ ಜತೆಗೆ ರಾಜ್ಯ ಸರಕಾರದ ಹೊಣೆಯೂ ಇದೆ. ಹೀಗಾಗಿ, ಬ್ಯಾನರ್‌ಗಳಿಗೆ ಅನುಮತಿ ನೀಡಬೇಕು’ ಎಂದು ಅರಿಕೆ ಮಾಡಿಕೊಳ್ಳ ಲಾಗಿದೆ. ಅದರಿಂದ ಸಾರ್ವಜನಿಕರಿಗೆ ತೊಂದ ರೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದೂ ಸರಕಾರ ಹೇಳಿಕೊಂಡಿದೆ.
ಸಿಎಂ ಪರಿಶೀಲನೆ
ಈ ನಡುವೆ ಮಹಾ ಬಲಿಪುರಂನಲ್ಲಿ ನಡೆಯಲಿರುವ ಅನೌಪ ಚಾರಿಕ ಸಭೆಯ ಬಗೆಗಿನ ಸಿದ್ಧತೆಗಳನ್ನು ತಮಿಳುನಾಡು ಸಿಎಂ ಕೆ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಬುಧವಾರ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.