ಮಹಾಬಲಿಪುರಂನಲ್ಲಿ ಮೋದಿ–ಕ್ಸಿ ಭೇಟಿ : ಉಭಯ ನಾಯಕರಿಂದ ನೃತ್ಯಕಾರ್ಯಕ್ರಮ ವೀಕ್ಷಣೆ


Team Udayavani, Oct 11, 2019, 5:51 PM IST

Xi-Jinping-Dance-730

ಚೆನ್ನೈ: ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿರುವ ಇಲ್ಲಿನ ಕರಾವಳಿ ಪಟ್ಟಣ ಮಹಾಬಲಿಪುರಂನಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಝಿನ್ ಪಿಂಗ್ ನಡುವೆ ನಡೆಯಲಿರುವ ಅನೌಪಚಾರಿಕ ಭೇಟಿಗೆ ಸಿದ್ಧತೆಗಳೆಲ್ಲಾ ಪೂರ್ಣಗೊಂಡಿವೆ.

ಈಗಾಗಲೇ ಏಷ್ಯಾದ ಎರಡು ಬಲಿಷ್ಟ ದೇಶಗಳ ನಾಯಕರ ಮುಖಾಮುಖಿಗೆ ವೇದಿಕೆ ಸಿದ್ಧಗೊಂಡಿದೆ. ದ್ವಿಪಕ್ಷೀಯ ಬಾಂಧವ್ಯಗಳನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಎರಡೂ ದೇಶಗಳ ಅಧಿಕಾರಿಗಳ ನಿಯೋಗದ ಸಭೆಯೂ ಇಲ್ಲಿ ನಡೆಯಲಿದೆ.

ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಝಿನ್ ಪಿಂಗ್ ಅವರು ಇಂದು ಸಾಯಂಕಾಲ ಜೊತೆಯಾಗಿ ಇಲ್ಲಿನ ಯನೆಸ್ಕೋ ವಿಶ್ವಪಾರಂಪರಿಕ ತಾಣಗಳಿಗೆ ಜೊತೆಯಾಗಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷರು ಸಾದಾ ಉಡುಪಿನಲ್ಲಿ ಗಮನ ಸೆಳೆದರೆ ಪ್ರಧಾನಿ ಮೋದಿ ಅವರು ತಮಿಳುನಾಡಿನ ಸಾಂಪ್ರದಾಯಿಕ ಉಡುಗೆಯಾದ ಬಿಳಿ ಪಂಚೆ, ಬಿಳಿ ಅಂಗಿ ಮತ್ತು ಶಾಲು ತೊಟ್ಟುಕೊಂಡು ಗಮನ ಸೆಳೆದರು.

ಈ ಇಬ್ಬರೂ ನಾಯಕರ ಅನೌಪಚಾರಿಕ ಭೇಟಿಯ ವೇಳೆ ಭಯೋತ್ಪಾದನೆ, ವ್ಯಾಪಾರ ಮತ್ತು ಗಡಿ ಸಮರ ಸಂಬಂಧಿಸಿದ ಹಲವು ವಿಚಾರಗಳು ಚರ್ಚೆಯಾಗುವ ನಿರೀಕ್ಷೆ ಇದೆ. ಆದರೆ ಇದೊಂದು ಅನೌಪಚಾರಿಕ ಭೇಟಿಯಾಗಿರುವ ಹಿನ್ನಲೆಯಲ್ಲಿ ಇಲ್ಲಿ ಯಾವುದೇ ರೀತಿಯ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕುವುದಿಲ್ಲ. ಆದರೆ ಭಾರತ ಮತ್ತು ಚೀನಾ ದೇಶಗಳ ನಡುವಿನ ಬಾಂಧವ್ಯ ಮತ್ತು ವ್ಯಾಪಾರ ಅವಕಾಶಗಳನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ನಾಯಕರ ಈ ಅನೌಪಚಾರಿಕ ಭೇಟಿ ಒಂದಿ ವೇದಿಕೆಯಾಗಲಿದೆ ಎಂಬ ಅಬಿಪ್ರಾಯ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷರ ಮಹಾಬಲಿಪುರಂ ಭೇಟಿಯ LIVE Updates ಇಲ್ಲಿದೆ:

– ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಕಲಾವಿದರೊಂದಿಗೆ ಗ್ರೂಪ್ ಫೊಟೋಗೆ ಪೋಸ್ ನೀಡಿದ ಉಭಯ ನಾಯಕರು.

– ಉಭಯ ನಾಯಕರು ಕಲಾಕ್ಷೇತ್ರ ಫೌಂಡೇಶನ್ ನ ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮವನ್ನು ಆಸ್ವಾದಿಸುತ್ತಿದ್ದಾರೆ.


– ಮಹಾಬಲಿಪುರಂನ ಸಮುದ್ರ ತೀರದಲ್ಲಿರುವ ದೇವಾಲಯದ ಸುಂದರ ಪರಿಸರದಲ್ಲಿ ಮೋದಿ ಮತ್ತು ಝಿನ್ ಪಿಂಗ್ ಮಾತುಕತೆ.
Tamil Nadu: Prime Minister Narendra Modi and Chinese President Xi Jinping at the Shore Temple in Mahabalipuram. pic.twitter.com/uEh2oxEuNk


– ಮಹಾಬಲಿಪುರಂನಲ್ಲಿರುವ ಈ ಸ್ಮಾರಕಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿದೆ. ಕೋರಮಂಡಲ ಸಮುದ್ರ ತೀರ ಪ್ರದೇಶದಲ್ಲಿರುವ ಈ ದೇವಾಲಯಗಳ ಸಮೂಹವನ್ನು ಪಲ್ಲವ ರಾಜವಂಶಸ್ಥರು 7 ಮತ್ತು 8ನೇ ಶತಮಾನದಲ್ಲಿ ನೈಸರ್ಗಿಕ ಬಂಡೆಗಳನ್ನು ಕೊರೆದು ಕಟ್ಟಿಸಿರುವ ಇತಿಹಾಸವಿದೆ.
#WATCH The group of Monuments in Mahabalipuram, a UNESCO World Heritage site. This group of sanctuaries, founded by the Pallava kings, was carved out of rock along the Coromandel coast in the 7th and 8th centuries. #TamilNadu pic.twitter.com/hFCFnzMDcL


– ಮೋದಿ ಮತ್ತು ಝಿನ್ ಪಿಂಗ್ ಅವರು ಇಂದು ಮೂರು ಗಂಟೆಗಳನ್ನು ಜೊತೆಯಾಗಿ ಕಳೆಯಲಿದ್ದು ಒಟ್ಟಾರೆ ಈ ಉಭಯ ನಾಯಕರ ಎರಡು ದಿನಗಳ ಭೇಟಿಯಲ್ಲಿ ಇವರಿಬ್ಬರು ಆರು ಗಂಟೆಗಳನ್ನು ಜೊತೆಯಲ್ಲಿ ಕಳೆಯಲಿದ್ದಾರೆ.

– ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಮಹಾಬಲಿಪುರಂ ದೇವಸ್ಥಾನದ ಆವರಣದಲ್ಲಿ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದರು.


– ಸುತ್ತಾಟದ ಬಳಿಕ ಪಂಚ ರಥಗಳ ಬಳಿ ಉಭಯ ನಾಯಕರು ಕುಳಿತು ಮಾತುಕತೆಯನ್ನು ನಡೆಸಿದರು.ಈ ಸಂದರ್ಭದಲ್ಲಿ ಮೋದಿ ಮತ್ತು ಚೀನಾ ಅಧ್ಯಕ್ಷರು ಸೀಯಾಳ ನೀರಿನ ರುಚಿ ಸವಿದದ್ದು ವಿಶೇಷವಾಗಿತ್ತು.
Tamil Nadu: Prime Minister Narendra Modi with Chinese President Xi Jinping at Panch Rathas in Mahabalipuram. pic.twitter.com/z3WvL89PLx


– ಮಹಾಬಲಿಪುರಂನಲ್ಲಿರುವ ಯುನೆಸ್ಕೋ ವಿಶ್ವಪಾರಂಪರಿಕ ತಾಣವಾಗಿರುವ ಗುಹಾ ದೇವಾಲಯದ ಆವರಣದಲ್ಲಿ ಪ್ರಧಾನಿ ಮೋದಿ ಮತ್ತು ಝಿನ್ ಪಿಂಗ್ ಅವರು ಉಭಯಕುಶಲೋಪರಿ ನಡೆಸಿದರು.


– ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷರನ್ನು ಮಹಾಬಲಿಪುರಂಗೆ ಆತ್ಮೀಯವಾಗಿ ಸ್ವಾಗತಿಸಿದರು.

– ಚೀನಾ ಅಧ್ಯಕ್ಷರ ಜೊತೆ 100 ಜನ ಸದಸ್ಯರ ನಿಯೋಗ ಆಗಮಿಸಿದ್ದು ಈ ನಿಯೋಗದಲ್ಲಿ ಚೀನಾದ ವಿದೇಶಾಂಗ ಸಚಿವರು ಮತ್ತು ಸ್ಟೇಟ್ ಕೌನ್ಸಿಲರ್ ಸಹ ಇದ್ದಾರೆ. ಈ ನಿಯೋಗವು ಪ್ರಧಾನಿ ಮೋದಿ ಅವರ ಜೊತೆ ಎರಡು ದಿನಗಳ ಕಾಲ ಅನೌಪಚಾರಿಕ ಮಾತುಕತೆಯನ್ನು ನಡೆಸಲಿದೆ.

– ಈ ಇಬ್ಬರು ನಾಯಕರು ಇದಕ್ಕೂ ಮೊದಲು 2018ರ ಎಪ್ರಿಲ್ 27 ಮತ್ತು 28ರಂದು ಚೀನಾದ ವುಹಾನ್ ನಲ್ಲಿ ಮೊದಲನೇ ಅನೌಪಚಾರಿಕ ಭೇಟಿ ನಡೆದಿತ್ತು.

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-mn

Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

saavu

New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.