ಮೋದಿ ಕೈ ಬೀಸಿದ್ದೂ ವಿವಾದ!
Team Udayavani, Dec 15, 2017, 6:00 AM IST
ಅಹಮದಾಬಾದ್/ನವದೆಹಲಿ: ಗುಜರಾತ್‌ನ ಕೊನೆಯ ಹಂತದ ಮತದಾನದ ದಿನವಾದ ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿದ ನಂತರ, ನೂರು ಮೀಟರ್ ನಡೆದು ಹೋಗಿದ್ದು ವಿವಾದಕ್ಕೀಡಾಗಿದೆ. ಅಹಮದಾಬಾದ್‌ನ ಸಾಬರಮತಿ ವಿಧಾನಸಭೆ ಕ್ಷೇತ್ರಕ್ಕೆ ಒಳಪಟ್ಟ ರನಿಪ್ ಪ್ರದೇಶದಲ್ಲಿ ಮತದಾನ ಮಾಡಿದ್ದಾರೆ. ಜನಸಾಮಾನ್ಯರಂತೆ ಕ್ಯೂನಲ್ಲಿ ನಿಂತಾಗ ಅವರು ಜನಸಾಮಾನ್ಯರೊಂದಿಗೆ ಮಾತನಾಡಿದರು. ಅಷ್ಟೇ ಅಲ್ಲ, ಮತ ಹಾಕಿದ ನಂತರ ಶಾಯಿ ಗುರುತಿನ ಬೆರಳನ್ನು ಮಾಧ್ಯಮಗಳಿಗೆ ತೋರಿಸಿದರು. ನಂತರ ವಾಪಸಾಗುವಾಗ ಸ್ವಲ್ಪ ದೂರ ನಡೆದು, ಕಾರು ಹತ್ತುವಾಗ ಜನರಿಗೆ ಕೈಬಿಸಿದರು. ಈ ವೇಳೆ ಮತ ಚಲಾವಣೆಗೆ ಆಗಮಿಸಿದ ಜನರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಮತಗಟ್ಟೆಗೆ ಸ್ವಲ್ಪವೇ ದೂರದಲ್ಲಿರುವ ಸೋದರ ಸೋಮಭಾಯಿ ಮನೆಗೂ ಮೋದಿ ಭೇಟಿ ನೀಡಿದ್ದರು.
ಆದರೆ ಕಾರಿನ ಫೂಟ್‌ಬೋರ್ಡ್ ಮೇಲೆ ನಿಂತು ಜನರೆಡೆಗೆ ಕೈಬೀಸಿದ ಮೋದಿ ಕ್ರಮಕ್ಕೆ ಕಾಂಗ್ರೆಸ್ ಆಕ್ಷೇಪಿಸಿದೆ. ಮತಗ ಟ್ಟೆಯಲ್ಲಿ ಮೋದಿ ರೋಡ್‌ಶೋ ನಡೆಸಿ, ನೀತಿ ಸಂಹಿತೆ ಉಲ್ಲಂ ಸಿದ್ದಾರೆ ಎಂದು ಕಾಂಗ್ರೆಸ್ ಆಕ್ಷೇಪಿಸಿದೆ. ಅಲ್ಲದೆ ಚುನಾವಣಾ ಆಯೋಗವು ಮೋದಿಯ ಕೈಗೊಂಬೆಯಾಗಿದ್ದು, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಕಡಿಮೆಗೊಳಿಸಿದಂತಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ. ದೂರಿನ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗುವುದು ಎಂದು ಆಯೋಗ ಹೇಳಿದೆ.
ಈ ಬಗ್ಗೆ ಬಿಜೆಪಿಯ ಜಿ ವಿ ಎಲ್ ನರಸಿಂಹರಾವ್ ಪ್ರತಿಕ್ರಿಯಿಸಿದ್ದು, “”ಗುಜರಾತ್ ರಾಜ್ಯಸಭೆಯಲ್ಲಿ ಅಹ್ಮದ್ ಪಟೇಲ್‌ರನ್ನು ವಿಜೇತರನ್ನಾಗಿ ಘೋಷಿಸಿದಾಗ ಚುನಾವಣಾ ಆಯೋಗವನ್ನು ಮೆಚ್ಚಿಕೊಂಡಿದ್ದೀರಿ. ಈಗೇಕೆ ಕಿಡಿಕಾರುತ್ತಿದ್ದೀರಿ. ನಿಮಗೆ ಬೇಕಾದಂತೆ ಆಯೋಗ ವರ್ತಿಸಬೇಕೆ” ಎಂದಿದ್ದಾರೆ.
ಪ್ರಮುಖರ ಹಕ್ಕು ಚಲಾವಣೆ
ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಅರುಣ್ ಜೇಟಿÉ, ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಭರತ್ ಸೋಲಂಕಿ, ಪಾಟಿದಾರರ ನಾಯಕ ಹಾರ್ದಿಕ್ ಪಟೇಲ್, ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಮಾಜಿ ಸಿಎಂ ಆನಂದಿಬೆನ್ ಪಟೇಲ್ ಪ್ರಮುಖರಾಗಿದ್ದಾರೆ.
ವಡೋದರಾದಲ್ಲಿ ಗಲಾಟೆ
ಮೆಹಸಾನ ಮತ್ತು ವಡೋದರಾ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆದಿರುವುದನ್ನು ಹೊರತುಪಡಿಸಿ ರಾಜ್ಯಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ. ಮೆಹಸಾನದ ಹಸನ್‌ಪುರ ಗ್ರಾಮದಲ್ಲಿ ಎರು ಪಕ್ಷಗಳ ಗುಂಪುಗಳು ಮಾರಾಮಾರಿ ನಡೆಸಿದ್ದು ಮೂವರಿಗೆ ಗಾಯಗಳಾಗಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೆ ರೀತಿ ವಡೋದರಾದ ವಂಕಾನೇರ್ ಗ್ರಾಮದಲ್ಲೂ ಗುಂಪಿನ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಇವಿಎಂಗೆ ಬ್ಲೂಟೂತ್ ಸಂಪರ್ಕ ಆರೋಪ
ಐದು ಮತಗಟ್ಟೆಗಳಲ್ಲಿ ಮತಯಂತ್ರಗಳು ಬಾಹ್ಯ ಸಾಧನಕ್ಕೆ ಸಂಪರ್ಕ ಹೊಂದಿವೆ ಎಂದು ದೂರು ಕೇಳಿಬಂದಿತ್ತಾದರೂ, ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ ನಂತರ ಇದಕ್ಕೆ ಯಾವುದೇ ಸಾಕ್ಷಿ ಕಂಡುಬಂದಿಲ್ಲ.
ಮತಯಂತ್ರಗಳನ್ನು ಬ್ಲೂಟೂತ್‌ಗೆ ಸಂಪರ್ಕಿಸಲಾಗಿದೆ ಎಂದು ಪಟಾನ್, ಖೇಡಾ, ಮೆಹಸಾನಾ ಹಾಗೂ ಘಟೊÉàಡಿಯಾದಲ್ಲಿ ದೂರು ಕೇಳಿಬಂದಿತ್ತು. ಇನ್ನು ಅರವಳ್ಳಿ ಮತ್ತು ಪಂಚಮಹಲ್ ಜಿಲ್ಲೆಯ ಕೆಲವಡೆ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳಲ್ಲಿ ದೋಷ ಕಂಡುಬಂದಿದ್ದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.