ಅಂಬೇಡ್ಕರ್ ಪ್ರಗತಿ ಕೆಲವರಿಗೆ ಬೇಕಿರಲಿಲ್ಲ
Team Udayavani, Mar 26, 2018, 10:20 AM IST
ಹೊಸದಿಲ್ಲಿ: ಭೀಮರಾವ್ ಅಂಬೇಡ್ಕರ್ ಅವರನ್ನು ಅನೇಕರು ಗೇಲಿ ಮಾಡಿದ್ದರು. ಹಿಂದುಳಿದ ಕುಟುಂಬದ ಪುತ್ರನು ಅಭಿವೃದ್ಧಿ ಹೊಂದಬಾರದು ಎಂದು ಸಾಕಷ್ಟು ಪ್ರಯತ್ನವನ್ನೂ ಕೆಲವರು ಮಾಡಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಏಕೆಂದರೆ, ಇಂದಿನ ನವಭಾರತವು ಬಡವರು ಮತ್ತು ಹಿಂದುಳಿದವರಿಗೆ ಸೇರಿದ್ದು ಎಂದು ಪ್ರಧಾನಿ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಯಶಸ್ಸು ಸಾಧಿಸಬೇಕೆಂದರೆ, ಶ್ರೀಮಂತ ಕುಟುಂಬದಲ್ಲೇ ಜನಿಸಬೇಕಿಲ್ಲ. ಬಡ ಕುಟುಂಬದಲ್ಲಿ ಹುಟ್ಟಿದವನಿಗೂ ಕನಸನ್ನು ಈಡೇರಿಸಲು ಸಾಧ್ಯ ಎಂಬುದನ್ನು ಅಂಬೇಡ್ಕರ್ ತೋರಿಸಿಕೊಟ್ಟರು. ಅಂಬೇಡ್ಕರ್ ಅವರ ಈ ತತ್ವಕ್ಕೆ ನಾನೇ ಸ್ವತಃ ಉದಾಹರಣೆ. ಪ್ರಸ್ತುತ ಭಾರತವು ಅಂಬೇಡ್ಕರ್‌ರ ಕನಸಿನ ಭಾರತವಾಗಿದೆ. ಇದು ಬಡ ಮತ್ತು ಹಿಂದುಳಿದವರ ಭಾರತವಾಗಿದೆ ಎಂದಿದ್ದಾರೆ ಮೋದಿ.
ರೈತರ ಏಳಿಗೆಗೆ ಬದ್ಧ: ನಮ್ಮ ಸರಕಾರ ಬಜೆಟ್‌ನಲ್ಲಿ ರೈತರಿಗೆ ಲಾಭವಾಗುವ ಹಲವು ಕ್ರಮಗಳನ್ನು ಘೋಷಿಸಿದೆ. ಇನ್ನು ಬೆಂಬಲಬೆಲೆ ನಿಗದಿಗೊಳಿಸುವ ವೇಳೆ ಎಲ್ಲ ರೀತಿಯ ವೆಚ್ಚಗಳನ್ನೂ ಪರಿಗಣಿಸಲಾಗುತ್ತದೆ. ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆ ನಿಗದಿ ಪಡಿಸಲು ನಿರ್ಧರಿಸಿದ್ದೇವೆ. ಇದರಲ್ಲಿ ಕಾರ್ಮಿಕರ ವೆಚ್ಚ, ಪ್ರಾಣಿಗಳ ಬಳಕೆಗಾದ ವೆಚ್ಚ, ಬಾಡಿಗೆಗೆ ಪಡೆದ ಯಂತ್ರಗಳು, ಬಿತ್ತನೆ ಬೀಜಗಳ ದರ, ರಸಗೊಬ್ಬರ, ನೀರಾವರಿ ವೆಚ್ಚ, ರಾಜ್ಯಗಳಿಗೆ ಸಲ್ಲಿಸುವ ಕಂದಾಯ ಹೀಗೆ ಎಲ್ಲ ವೆಚ್ಚಗಳನ್ನೂ ಸೇರಿಸುತ್ತೇವೆ. ಒಟ್ಟಿನಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದೂ ಮೋದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.