ಮಧ್ಯಪ್ರದೇಶ: 10 ಅಡಿ ಕೆಳಕ್ಕೆ ಬಿದ್ದ ಮಾಜಿ ಸಿಎಂ ಕಮಲ್ ನಾಥ್ ಪ್ರಯಾಣಿಸುತ್ತಿದ್ದ ಲಿಫ್ಟ್
Team Udayavani, Feb 22, 2021, 8:53 AM IST
ಇಂದೋರ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಪ್ರಯಾಣಿಸುತ್ತಿದ್ದ ಲಿಫ್ಟ್, ತಾಂತ್ರಿಕ ದೋಷದಿಂದ ಕೆಟ್ಟು, 10 ಅಡಿ ಕೆಳಕ್ಕೆ ಬಿದ್ದ ಘಟನೆ ಭಾನುವಾರ (ಫೆ.21) ನಡೆದಿದೆ. ಅದೃಷ್ಟವಶಾತ್ ಲಿಫ್ಟ್ ನಲ್ಲಿದ್ದ ಕಮಲ್ ನಾಥ್ ಹಾಗೂ ಇತರ ಕಾಂಗ್ರೆಸ್ ನಾಯಕರು ಅಲ್ಪದರಲ್ಲೇ ಪಾರಾಗಿದ್ದಾರೆ.
ಘಟನೆಯ ವಿವರ: ಕಮಲ್ ನಾತ್ ಮತ್ತು ಇತರ ಕಾಂಗ್ರೆಸ್ ನಾಯಕರು, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮಂತ್ರಿ ರಾಮೇಶ್ವರ್ ಪಟೆಲ್ ಅವರನ್ನು ಭೇಟಿ ಮಾಡಲು ಇಂದೋರ್ ಗೆ ತೆರಳಿದ್ದರು. ಖಾಸಗಿ ಆಸ್ಪತ್ರೆ ತಲುಪಿದ ಬಳಿಕ ಎಲ್ಲಾ ನಾಯಕರು ಲಿಫ್ಟ್ ಏರಿದ್ದರು. ಆದರೇ ಕೆಲ ಸಮಯದಲ್ಲೇ ಲಿಫ್ಟ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ತೊಡಗಿದೆ. ಮೆಲ್ಮುಖವಾಗಿ ಚಲಿಸುವ ಬದಲು 10 ಅಡಿ ಕೆಳ ಭಾಗಕ್ಕೆ ಬಿದ್ದಿದೆ.
ಇದನ್ನೂ ಓದಿ: ಜನರು ಮಾಸ್ಕ್ ಧರಿಸದಿದ್ದರೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ: ಉದ್ಧವ್ ಠಾಕ್ರೆ ಎಚ್ಚರಿಕೆ
ಕೂಡಲೇ ಕಮಲ್ ನಾಥ್ ಭದ್ರತಾ ವ್ಯಕ್ತಿಗಳು ಲಿಫ್ಟ್ ಕೆಟ್ಟು ನಿಂತ ಸ್ಥಳಕ್ಕೆ ಧಾವಿಸಿದ್ದಾರೆ. ಆದರೇ ಲಿಫ್ಟ್ ಬಾಗಿಲು ಕೂಡ ಬಂದ್ ಆಗಿದ್ದವು. ಕೂಡಲೇ ಲಿಫ್ಟ್ ಇಂಜಿನಿಯರ್ ಗೆ ಮಾಹಿತಿ ನೀಡಿ ಲಿಫ್ಟ್ ಬಾಗಿಲು ಒಡೆಯಲಾಗಿದೆ. ಅದೃಷ್ವಶಾತ್ ಕಮಲ್ ನಾಥ್ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತನಿಖೆಗೆ ಆದೇಶ: ಈ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕಮಲ್ ನಾಥ್ ಆರೋಗ್ಯ ವಿಚಾರಿಸಿ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಎರಡನೇ ಅಲೆ ಆತಂಕ: ಅಸಡ್ಡೆ ಬೇಡ
इंदौर के निजी अस्पताल में लिफ्ट में सवार पूर्व मुख्यमंत्री श्री @OfficeOfKNath जी और अन्य साथियों के गिरने की जानकारी मिली।
फोन पर उनका कुशलक्षेम पूछा। ईश्वर की कृपा से सभी सकुशल हैं।
इंदौर कलेक्टर को इस दुर्घटना की जांच के आदेश दिये हैं।
— Shivraj Singh Chouhan (@ChouhanShivraj) February 21, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.