ನಾಸಾದ ಆ್ಯಪ್ ಸ್ಪರ್ಧೆ: ಗೆದ್ದ ಆರ್ಯನ್
Team Udayavani, Jan 11, 2021, 8:20 AM IST
ನ್ಯೂಯಾರ್ಕ್: ಬಾಹ್ಯಾಕಾಶ ಪರಿಶೋಧನೆ ಸಂಬಂಧಿತವಾಗಿ ನಾಸಾ ಆಹ್ವಾನಿಸಿದ್ದ ಆ್ಯಪ್ ರಚನೆಯ ಚಾಲೆಂಜ್‌ನಲ್ಲಿ ಭಾರತದ ಹರ್ಯಾಣ ಹೈಸ್ಕೂಲ್ ವಿದ್ಯಾರ್ಥಿ ಆರ್ಯನ್ ಜೈನ್ ವಿಜೇತರಾಗಿದ್ದಾರೆ. ಆರ್ಯನ್, ಯುಎಸ್‌ನ 6 ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಸೇರಿ “ಆರ್ಟೆಮಿಸ್ ನೆಕ್ಸ್ಟ್- ಜೆನ್ ಸ್ಟೆಮ್- ಮೂನ್ ಟು ಮಾರ್ಸ್’ ಆ್ಯಪ್ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರ್ಯನ್, ಗುರುಗ್ರಾಮದ ಸನ್‌ಸಿಟಿ ಸ್ಕೂಲ್‌ನ ವಿದ್ಯಾರ್ಥಿ.
ಚಂದ್ರನ ದಕ್ಷಿಣ ಧ್ರುವವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಾಹ್ಯಾಕಾಶ ಪರಿಶೋಧನ ಕಾರ್ಯಾಚರಣೆಯಲ್ಲಿನ ತಾಂತ್ರಿಕ ಸಮಸ್ಯೆ ಪತ್ತೆಹಚ್ಚುವ, ಪರಿಹಾರ ನೀಡುವ ವಿಚಾರದಲ್ಲಿ ಆ್ಯಪ್ ಸಿದ್ಧಪಡಿಸುವಂತೆ ನಾಸಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಿತ್ತು. ಆರ್ಯನ್ ತಂಡ C# ಪ್ರೋಗ್ರಾಂನೊಂದಿಗೆ ಕ್ರಾಸ್- ಪ್ಲಾಟ್‌ಫಾರಂ ಗೇಮ್ ಎಂಜಿನ್ ಯುನೈಟ್ ಬಳಸಿ ಆ್ಯಪ್ ಸಿದ್ಧಪಡಿಸಿದೆ. 2024ರಲ್ಲಿ ನಾಸಾ ಗಗನಯಾತ್ರಿಕರೊಂದಿಗೆ, ಪುರುಷ ಮತ್ತು ಮಹಿಳೆಯನ್ನು ಚಂದ್ರನಲ್ಲಿಗೆ ಕಳುಹಿಸುತ್ತಿದೆ. ಈ ಯೋಜನೆಯಲ್ಲಿ ವಿದ್ಯಾರ್ಥಿಗಳನ್ನು ಆ್ಯಪ್ ಸ್ಪರ್ಧೆ ಮೂಲಕ ಭಾಗಿಮಾಡಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.