ರಾಷ್ಟ್ರೀಯ ಆಕಾಂಕ್ಷೆ, ಪ್ರಾದೇಶಿಕ ನಿರೀಕ್ಷೆಗೆ ಒತ್ತು
ನೂತನ ಸಂಸದರಿಗೆ ನರೇಂದ್ರ ಮೋದಿ ಕಿವಿಮಾತು ;ಸೆನೆಟ್ ಹಾಲ್‌ನಲ್ಲಿ 45 ನಿಮಿಷಗಳ ಭಾಷಣ
Team Udayavani, May 26, 2019, 6:00 AM IST
ಹೊಸದಿಲ್ಲಿ: ಸೆನೆಟ್ ಹಾಲ್‌ನಲ್ಲಿ ಶನಿವಾರ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ಸಂಸದೀಯ ಪಕ್ಷದ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಅನಂತರದಲ್ಲಿ, ನೂತನ ಸಂಸದರನ್ನು ಉದ್ದೇ ಶಿಸಿ ಮಾತನಾಡಿದ ಮೋದಿ, ರಾಷ್ಟ್ರೀಯ ಮಹತ್ವಾ ಕಾಂಕ್ಷೆ, ಪ್ರಾದೇಶಿಕ ನಿರೀಕ್ಷೆ (ನಾರಾ)ಗೆ ಒತ್ತು ನೀಡುವ ಬಗ್ಗೆ ಪ್ರಸ್ತಾ ಪಿಸಿದ್ದಾರೆ. ಅಷ್ಟೇ ಅಲ್ಲ, ಸುಮಾರು 45 ನಿಮಿಷ ಮಾತ ನಾಡಿದ ಅವರು ಹೊಸದಾಗಿ ಆಯ್ಕೆಯಾದ ಸಂಸದರಿಗೆ ಕೆಲವು ಕಿವಿಮಾತುಗಳನ್ನೂ ಹೇಳಿದ್ದಾರೆ.
ಅಲ್ಪಸಂಖ್ಯಾತರು ಮತ ಬ್ಯಾಂಕ್ ರಾಜಕಾರಣ ಮಾಡು ವವರಿಂದಾಗಿ ಭೀತಿಯಲ್ಲಿ ಬದುಕುವಂತಾಗಿದೆ. ಈ ಬಾರಿಯ ಚುನಾವಣೆಯು ಜನರನ್ನು ಒಟ್ಟುಗೂಡಿಸುವ ಚುನಾವಣೆ ಯಾಗಿತ್ತು ಮತ್ತು ಜನರನ್ನು ಬೇರ್ಪಡಿಸುವ ಗೋಡೆಯನ್ನು ಒಡೆಯುವ ಯತ್ನವಾಗಿತ್ತು. ರಾಜಕೀಯದಿಂದ ಗೋಡೆ ನಿರ್ಮಾಣವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ಚುನಾವಣೆ ಜನರನ್ನು ಒಟ್ಟಾಗಿಸಿದೆ ಎಂದಿದ್ದಾರೆ. ನಾವು ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಬಳಿಕ ಇನ್ನು ಸಬ್‌ಕಾ ವಿಶ್ವಾಸ್ ಗಳಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ.
ಹೊಸ ಸಂಸದರಿಗೆ ಕಿವಿಮಾತು: ಸಂಸದರು ಮಾತನಾಡುವ ಮುನ್ನ ಯೋಚಿಸಬೇಕು. ವಾಸ್ತವಾಂಶವನ್ನು ಪರಿಶೀಲಿಸಿ ಕೊಳ್ಳಬೇಕು. ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆ ಯಿಂದಿರಿ. ಅನಗತ್ಯ ಹೇಳಿಕೆಗಳನ್ನು ನೀಡಬಾರದು. ವಿವಿಧ ವಿಷಯಗಳ ಕುರಿತು ಮಾತನಾಡುವಂತೆ ಮಾಧ್ಯಮಗಳು ಕೇಳುತ್ತವೆ. ಮಾಧ್ಯಮದ ಮಿತ್ರರೊಂದಿಗೆ ಆಫ್ ದಿ ರೆಕಾರ್ಡ್ ಮಾತುಕತೆ ಎಂಬುದು ಇರುವುದಿಲ್ಲ, ಎಚ್ಚರಿಕೆಯಿಂದಿರಿ. ಹೊಸ ಸಚಿವರ ಪಟ್ಟಿಯ ಬಗ್ಗೆ ಮಾಧ್ಯಮಗಳಲ್ಲಿ ಹೆಸರುಗಳು ಹರಿದಾಡುತ್ತಿವೆ. ಅವುಗಳನ್ನು ನಂಬಬೇಡಿ. ದಿನಪತ್ರಿಕೆಯ ಪುಟ ಗಳಿಂದ ಯಾರೂ ಮಂತ್ರಿಯಾಗುವುದಿಲ್ಲ. ನಾನು ಯಾವುದೇ ಸಂಸದರಿಗೆ ತಾರತಮ್ಯ ಮಾಡುವುದಿಲ್ಲ ಮತ್ತು ಯಾರನ್ನೂ ಓಲೈಸುವುದೂ ಇಲ್ಲ ಎಂದಿದ್ದಾರೆ.
ನಾವು ಕೇವಲ ನಮಗೆ ಮತ ಹಾಕಿದವರನ್ನಷ್ಟೇ ಅಲ್ಲ, ನಮಗೆ ಮತ ಹಾಕದವರ ಮನಸನ್ನೂ ಗೆಲ್ಲಬೇಕಿದೆ ಎಂಬುದು ನೆನಪಿರಲಿ ಎಂದು ಸಂಸದರಿಗೆ ಮೋದಿ ಸೂಚಿಸಿದ್ದಾರೆ. ಸಂಸದರು ಅಹಂ ಅನ್ನು ದೂರವಿಡಬೇಕು. ತಮ್ಮ ಮೂಲವನ್ನು ಮರೆಯಬಾರದು. ಅಧಿಕಾರ ಮತ್ತು ಜನಪ್ರಿಯತೆಯಲ್ಲಿ ಕೊಚ್ಚಿಹೋಗಬಾರದು ಎಂದೂ ಹೇಳಿದ್ದಾರೆ.
ಸಂವಿಧಾನಕ್ಕೆ ನಮನ
ಸಂಸದೀಯ ಪಕ್ಷದ ನಾಯಕನನ್ನಾಗಿ ಮೋದಿಯನ್ನು ಆಯ್ಕೆ ಮಾಡಿದ ಅನಂತರ ನೂತನ ಸಂಸದರನ್ನು ಉದ್ದೇಶಿಸಿ ಮಾತನಾಡುವಂತೆ ಮೋದಿಯನ್ನು ಆಹ್ವಾನಿಸಿದಾಗ, ಮೊದಲು ಸಂವಿಧಾನದ ಪ್ರತಿಗಳಿಗೆ ಹಣೆಯಿಟ್ಟು ಮೋದಿ ನಮಸ್ಕರಿಸಿದ್ದಾರೆ. ನಂತರ ಅವರು ಮಾತನಾಡಿದ್ದು, ನಾನು ಸಂವಿಧಾನಕ್ಕೆ ನಮಸ್ಕರಿಸಿ ಮಾತನಾಡುತ್ತಿದ್ದೇನೆ. ಜನಪ್ರತಿನಿಧಿಗಳಿಗೆ ಯಾವುದೇ ಲಕ್ಷ್ಮಣ ರೇಖೆ ಇರುವುದಿಲ್ಲ. ನಮ್ಮೊಂದಿಗೆ ಇರುವ ಮತ್ತು ಮುಂದೊಂದು ದಿನ ನಮ್ಮೊಂದಿಗೆ ಇರುವ ಜನರನ್ನೂ ನಾವು ಸಮಾನವಾಗಿ ಕಾಣಬೇಕಿದೆ ಎಂದಿದ್ದಾರೆ.
ಮೋದಿ ನುಡಿಮುತ್ತು
ದೇಶ ಕಠಿಣ ಪರಿಶ್ರಮ, ಪ್ರಾಮಾಣಿಕತೆಯಲ್ಲಿ ನಂಬಿಕೆ ಇಟ್ಟಿದೆ. ಆ ನಂಬಿಕೆಯನ್ನು ನಾವು ಉಳಿಸಿಕೊಳ್ಳಬೇಕು
ಸಾಮಾಜಿಕ ಸಮಾನತೆಗೆ ಈ ಚುನಾವಣೆ ಒಂದು ಕ್ರಾಂತಿಯಾಗಿದೆ. ಆಡಳಿತ ಪರ ಅಲೆ ಎದ್ದು ಕಾಣುತ್ತಿದೆ.
ಮಹಿಳೆಯರು ಈ ಬಾರಿ ಮಹತ್ವದ ಪಾತ್ರ ವಹಿಸಿದ್ದಾರೆ. ಪುರುಷರಷ್ಟೇ ಮಹಿಳೆಯರೂ ಮತ ಹಾಕಿದ್ದಾರೆ
ಎನ್‌ಡಿಎಯಲ್ಲಿರುವ ಎನರ್ಜಿ(ಶಕ್ತಿ) ಮತ್ತು ಸಿನರ್ಜಿ(ಒಡಂಬಡಿಕೆ)ಯಿಂದ ನಾವು ಸಶಕ್ತರಾಗಿದ್ದೇವೆ
ಇಂದು ಮೋದಿಯೇ ಮೋದಿಗೆ ಸವಾಲೊಡ್ಡಿ 2014ರ ದಾಖಲೆ ಮುರಿದಿದ್ದಾನೆ.
ನಮ್ಮ ಸೇವಾಭಾವವನ್ನು ಜನರು ಮೆಚ್ಚಿದ್ದಾರೆ. ಜನರಿಗೆ ನೆರವಾಗಲು ನಾವು ಎಂದಿಗೂ ಸಿದ್ಧವಿರಬೇಕು.
ನಾವು ಈಗ ನವಭಾರತ ನಿರ್ಮಾಣದ ಹೊಸ ಪಯಣ ಆರಂಭಿಸಬೇಕು
ಸಂಸದರು ವಿಐಪಿ ಸಂಸ್ಕೃತಿಯನ್ನು ಕೈಬಿಡಬೇಕು. ಜನರ ಜೊತೆ ಸರದಿಯಲ್ಲಿ ನಿಲ್ಲಬೇಕು.
ಸ್ವತ್ಛ ಭಾರತವು ಕ್ರಾಂತಿಯಾಗಬಹುದಾದರೆ, ಶ್ರೀಮಂತ ಭಾರತವೂ ಯಾಕೆ ಕ್ರಾಂತಿಯಾಗದು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಳಿಸಿದ ಮತದಷ್ಟೇ 2014 ಹಾಗೂ 2019ರಲ್ಲಿ ನಾವು ಗಳಿಸಿದ ಮತದ ಅಂತರವಾಗಿದೆ.
1000 ದಿನಕ್ಕೆ ಮೋದಿ ಅಜೆಂಡಾ
ಎನ್‌ಡಿಎ ಸರಕಾರದ ಎರಡನೇ ಅಧ್ಯಾಯ ಕೇವಲ 100 ದಿನದ ಅಜೆಂಡಾ ಹೊಂದಿರು ವುದಿಲ್ಲ. ಬದಲಿಗೆ 1000 ದಿನದ ಅಜೆಂಡಾ ವನ್ನು ಪ್ರಧಾನಿ ನರೇಂದ್ರ ಮೋದಿ ಯೋಜಿ ಸಿದ್ದಾರೆ ಎನ್ನಲಾಗಿದೆ. ಭಾರತ ಸ್ವತಂತ್ರಗೊಂಡ 75ನೇ ವರ್ಷಾ ಚರಣೆ ನಡೆ ಯುವ 2022ರ ವರೆಗೂ ಈ ಅಜೆಂಡಾ ಮುಂದುವರಿಯಲಿದೆ.
ಈ ಅಜೆಂಡಾದಲ್ಲಿ ಹಲವು ಯೋಜನೆ ಗಳಿವೆ. ಕೃಷಿಯಲ್ಲಿ ಮಹಿಳೆಯರ ಸಬಲೀ ಕರಣದಿಂದ ಮಾನವ ಸಹಿತ ಗಗನ ಯಾನವೂ ಇದರಲ್ಲಿ ಸೇರಿದೆ. ಅಷ್ಟೇ ಅಲ್ಲ, ತನ್ನ ಎರಡನೇ ಅವಧಿಯಲ್ಲಿ ಹೊಸ ಭಾರತ ವನ್ನು ನಿರ್ಮಿಸುವ ಭರವಸೆ ಯನ್ನೂ ಮೋದಿ ರೂಪಿಸಿದ್ದಾರೆ ಎನ್ನಲಾ ಗಿದೆ. ಈ ಬಗ್ಗೆ ಸಚಿವಾಲಯ ಮತ್ತು ಇಲಾಖೆ ಗಳ ಮುಖ್ಯಸ್ಥರಿಗೆ ಸೂಚಿಸಲಾ ಗಿದ್ದು, ಅವರು ಶೀಘ್ರದಲ್ಲೇ ಈ ಬಗ್ಗೆ ಅಂತಿಮ ಪ್ರಸ್ತಾವನೆ ಸಲ್ಲಿಸಲಿದ್ದಾರೆ ಎನ್ನ ಲಾಗಿದೆ. ಸರಕಾರ ರಚನೆಯಾದ ಮೊದಲ ದಿನದಿಂದಲೇ ಕೆಲಸ ಆರಂಭಿ ಸಲು ನಿರ್ಧ ರಿಸ ಲಾಗಿದ್ದು, ಅಧಿಕಾರಿಗಳಿಗೆ ಈ ಸಂಬಂಧ ಸೂಚನೆಯನ್ನೂ ನೀಡ ಲಾಗಿದೆ. ಈಗಾಗಲೇ ನೀಡಲಾದ ಭರ ವಸೆಗಳನ್ನು ಪೂರೈಸುವಲ್ಲಿ ಗಂಭೀರವಾಗಿ ತೊಡಗಿಸಿ ಕೊಳ್ಳ ಬೇಕು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ.
ಪ್ರಮುಖ ಸ್ಕೀಮ್‌ಗಳು
2022 ರಲ್ಲಿ ರೈತರ ಆದಾಯ ದುಪ್ಪಟ್ಟುಗೊಳಿಸುವುದು
40 ಸಾವಿರ ಮೆ.ವ್ಯಾ ಛಾವಣಿ ಸೌರ ವಿದ್ಯುತ್ ಯೋಜನೆ
ಎಲ್ಲರಿಗೂ ಸೂರು10 ಗಿಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ
ಮಹಿಳೆಯರ ಸಬಲೀಕರಣ ಭಾರತದ ಮೊದಲ ಮಾನವ ಸಹಿತ ಗಗನಯಾನ ಇಎಸ್‌ಐ ಯೋಜನೆಯಡಿಯಲ್ಲಿ 2022 ರ ವೇಳೆಗೆ 10 ಲಕ್ಷ ಕಾರ್ಮಿಕರನ್ನು ಒಳಗೊಳ್ಳುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.