ಅಣೆಕಟ್ಟು ಸುರಕ್ಷತೆಗೆ ಪ್ರಾಧಿಕಾರ
Team Udayavani, Jun 16, 2018, 8:30 AM IST
ದೇಶದಲ್ಲಿರುವ ಅಣೆಕಟ್ಟುಗಳ ಸುರಕ್ಷತೆ ಮತ್ತು ನಿರ್ವಹಣೆಗಾಗಿ ಕೇಂದ್ರ ಸರಕಾರ ಅಣೆಕಟ್ಟುಗಳ ಸುರಕ್ಷಾ ವಿಧೇಯಕ 2018ಕ್ಕೆ ಅನುಮೋದನೆ ನೀಡಿದೆ. 1979ರಲ್ಲಿ ಗುಜರಾತ್ ನಲ್ಲಿ ನಿರ್ಮಾಣಗೊಂಡಿದ್ದ ಮಚು ಅಣೆಕಟ್ಟು ಪ್ರವಾಹದಿಂದಾಗಿ ಒಡೆದು 2 ಸಾವಿರ ಮಂದಿ ಅಸುನೀಗಿ, 12,700 ಮನೆಗಳು ನಾಶಗೊಂಡ ಬಳಿಕ ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಸಮಗ್ರ ಕಾಯ್ದೆಬೇಕೆಂದು ಮನಗಾಣಲಾಗಿತ್ತು. ಸದ್ಯ ಅದಕ್ಕೆ ಸಂಬಂಧಿಸಿದ ವಿಧೇಯಕಕ್ಕೆ ಅನುಮೋದನೆ ಸಿಕ್ಕಿದ್ದು, ಜುಲೈಯಲ್ಲಿ ನಡೆಯಲಿರುವ ಸಂಸತ್ ನ ಮುಂಗಾರು ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ.
ವಿಧೇಯಕದ ಪ್ರಮುಖ ಅಂಶಗಳೇನು?
– ಅಣೆಕಟ್ಟುಗಳ ನಿರ್ವಹಣೆಗಾಗಿ ಸಲಹೆ ಸೂಚನೆ ನೀಡಲು ರಾಷ್ಟ್ರೀಯ ಸಮಿತಿ ರಚನೆ
– ಸುರಕ್ಷತೆ, ನಿಯಮಗಳ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಅಣೆಕಟ್ಟು ಸುರಕ್ಷಾ ಪ್ರಾಧಿಕಾರ ಸ್ಥಾಪನೆ
– ವಿವಿಧ ರಾಜ್ಯಗಳ ವ್ಯಾಪ್ತಿಯಲ್ಲಿರುವ ಅಣೆಕಟ್ಟುಗಳ ನಿರ್ವಹಣೆಗೆ ಸಮಿತಿ ರಚನೆ
– ಈ ರೀತಿಯ ಕ್ರಮದಿಂದ ದೇಶದ ಜನರ ಜೀವ ರಕ್ಷಣೆ, ಆಸ್ತಿ, ಪ್ರಾಣಿಗಳ ರಕ್ಷಣೆಗೆ ಸೂಕ್ತ ಪ್ರಾಧಿಕಾರ ಸ್ಥಾಪನೆ.
– ಸಮಿತಿ, ಪ್ರಾಧಿಕಾರದ ಕೆಲಸ- ಕರ್ತವ್ಯ
– ಅಣೆಕಟ್ಟುಗಳ ಕಡ್ಡಾಯ ಪರಿಶೀಲನೆ, ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯ ನಿರ್ವಹಣೆ
– ದೇಶದಲ್ಲಿರುವ ಎಲ್ಲಾ ಅಣೆಕಟ್ಟುಗಳು ಸುಸ್ಥಿತಿಯಲ್ಲಿ ಇವೆಯೇ ಎಂದು ಪರಿಶೀಲನೆ
ರಾಜ್ಯವಾರು ಸಂಖ್ಯೆ
ಮಹಾರಾಷ್ಟ್ರ: 2, 354
ಮಧ್ಯಪ್ರದೇಶ: 906
ಗುಜರಾತ್: 632
ಛತ್ತೀಸ್‌ಗಡ: 258
ಕರ್ನಾಟಕ: 231
ದೇಶದಲ್ಲಿರುವ ದೊಡ್ಡ ಅಣೆಕಟ್ಟುಗಳು: 5,701
ಸದ್ಯ ಉಪಯೋಗದಲ್ಲಿ ಇರುವವುಗಳ ಸಂಖ್ಯೆ: 5, 254
ನಿರ್ಮಾಣ ಹಂತದಲ್ಲಿರುವವು: 447
ದೇಶದಲ್ಲಿ ಸಂಭವಿಸಿದ ದುರಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.