ರಾಷ್ಟ್ರೀಯ ಶಿಕ್ಷಣ ನೀತಿ 2020: ಶಾಲಾ ಕಲಿಕೆಗೆ ಹೊಸ ಕಾಯಕಲ್ಪ
Team Udayavani, Jul 31, 2020, 7:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬುಧವಾರ ಪ್ರಕಟವಾದ 2020ರ ರಾಷ್ಟ್ರೀಯ ಶಿಕ್ಷಣ ನೀತಿಯದ್ದೆ ಈಗ ಎಲ್ಲೆಡೆ ಚರ್ಚೆ. ದೇಶದ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸುವ ಈ ಕ್ರಾಂತಿಕಾರಿ ನೀತಿಯಲ್ಲಿ ಏನಿದೆ ಎಂಬ ಕುತೂಹಲ ವಿದ್ಯಾರ್ಥಿಗಳಿಂದ ಹಿಡಿದು ಶಿಕ್ಷಣ ತಜ್ಞರ ವರೆಗೂ ಇದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ನೀತಿಯ ಸೀಳುನೋಟವನ್ನು ‘ಉದಯವಾಣಿ’ ಇಲ್ಲಿ ನೀಡುತ್ತಿದೆ. ಮೊದಲ ಹಂತದಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣದ ಭವಿಷ್ಯದ ಕುರಿತು ಇಲ್ಲಿ ಮಾಹಿತಿ ಇದೆ.
7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇಲ್ಲ
ಹೊಸ ಶಿಕ್ಷಣ ನೀತಿಯ ಪ್ರಕಾರ, ಇನ್ನು 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಎಂಬುದು ಇರುವುದಿಲ್ಲ. 3, 5 ಹಾಗೂ 8ನೇ ತರಗತಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ಪರೀಕ್ಷೆ ನಡೆಸುತ್ತವೆ. ಆದರೆ, 10 ಮತ್ತು 12ನೇ ತರಗತಿಗೆ ಸಂಬಂಧಿಸಿದ ಮಂಡಳಿಯಿಂದಲೇ ಪರೀಕ್ಷೆಗಳು ಈಗಿರುವಂತೆಯೇ ಮುಂದುವರಿಯುತ್ತವೆ. ಮಂಡಳಿಯಿಂದ ಕೈಗೊಳ್ಳುವ ಪರೀಕ್ಷೆಯೂ ಸರಳವಾಗಿರಲಿದ್ದು, ವಿದ್ಯಾರ್ಥಿಯು ತಾನು ಕಲಿತಿದ್ದನ್ನು ಅನ್ವಯಿಸುವ ಗುಣವನ್ನು ಹೆಚ್ಚು ಒರೆಗೆ ಹಚ್ಚಲಾಗುತ್ತದೆ. ಹಾಗಾಗಿಯೇ, ಮಂಡಳಿ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆಯು ಇನ್ನು ‘ಬಹು ಆಯ್ಕೆ’ ಹಾಗೂ “ದೀರ್ಘ ಬರಹ’ ಈ ಎರಡೂ ಮಾದರಿಯಲ್ಲಿ ಇರಲಿದೆ.
ವರ್ಷಕ್ಕೆ ಎರಡು ಬಾರಿ ಪರೀಕ್ಷೆ
ಈಗ ಚಾಲ್ತಿಯಲ್ಲಿರುವಂತೆ 10 ಮತ್ತು 12ನೇ ತರಗತಿಗಳಿಗೆ ಮಂಡಳಿ ಪರೀಕ್ಷೆಗಳು ಹೊಸ ಶಿಕ್ಷಣ ನೀತಿಯ ಅನುಸಾರವೂ ಜಾರಿಯಲ್ಲಿರುತ್ತವೆ. ಆದರೆ, ಉಳಿದ ತರಗತಿಗಳಿಗೆ ವರ್ಷಕ್ಕೆ ಎರಡು ಬಾರಿ ಮಂಡಳಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಅವುಗಳಲ್ಲೊಂದು ಆಯಾ ಶೈಕ್ಷಣಿಕ ವರ್ಷದ ಅಂತಿಮ ಪರೀಕ್ಷೆಯಾದರೆ, ಮತ್ತೂಂದು ಪೂರ್ವಭಾವಿ ಪರೀಕ್ಷೆಯಾಗಿರುತ್ತದೆ. ಇನ್ನು, ಮಂಡಳಿಗಳ ಪಠ್ಯಕ್ರಮ ಎರಡು ಭಾಷೆಗಳಲ್ಲಿರಲಿದೆ. ಒಂದು ಪ್ರಾದೇಶಿಕ ಭಾಷೆ ಹಾಗೂ ಮತ್ತೂಂದು ಇಂಗ್ಲಿಷ್ ನಲ್ಲಿ ಇರಲಿದೆ. ವಿದ್ಯಾ ರ್ಥಿಯು ತನ್ನಿಷ್ಟದ ಕಲಿಕಾ ಮಾಧ್ಯಮವನ್ನು (ಪ್ರಾದೇಶಿಕ ಭಾಷೆ ಅಥವಾ ಇಂಗ್ಲಿಷ್) ಆಯ್ಕೆ ಮಾಡಿಕೊಳ್ಳಬಹುದು.
ಪಾರಖ್ ಎಂಬ ಅಳತೆಗೋಲು
ಶಿಕ್ಷಕರ ಬೋಧನಾ ಗುಣಮಟ್ಟವನ್ನು ಅಳೆಯಲು, ಪರ್ಫಾಮನ್ಸ್ ಅಸೆಸ್‌ಮೆಂಟ್, ರಿವ್ಯೂ ಆ್ಯಂಡ್ ಅನಾಲಿಸಿಸ್ ಆಫ್ ನಾಲೆಡ್ಜ್ ಆಫ್ ಹೋಲಿಸ್ಟಿಕ್ ಡೆವಲಪ್‌ಮೆಂಟ್ (ಪಿಎಆರ್‌ಎಕೆಎಚ್-ಪಾರಖ್) ಸೂಕ್ತವಾದ ಮೌಲ್ಯಮಾಪನ ಪದ್ಧತಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ, ಸ್ಟೇಟ್ ಅಚೀವ್‌ಮೆಂಟ್ ಸರ್ವೇ (ಎಸ್‌ಎಎಸ್), ನ್ಯಾಶನಲ್ ಅಚೀವ್‌ಮೆಂಟ್ ಸರ್ವೇ (ಎನ್‌ಎಎಸ್) ಎಂಬ ಎರಡು ಮಾದರಿಯ ಸಮೀಕ್ಷೆಗಳನ್ನು ಜಾರಿಗೊಳಿಸಲಾಗುತ್ತದೆ.
ಜೀವನ ಕಲೆ ಬೋಧನೆಗೆ ಒತ್ತು
ಮಕ್ಕಳಿಗೆ ಶೈಕ್ಷಣಿಕ ವಿಷಯಗಳ ಬೋಧನೆಗೆ ಜೀವನವನ್ನು ಸಮರ್ಥವಾಗಿ ಎದುರಿಸುವ ಕೌಶಲಗಳ ಬೋಧನೆಯೂ ಜಾರಿಗೊಳ್ಳಲಿದೆ. ಪ್ರತಿ ವರ್ಷವೂ ಇಂಥ ವಿಷಯಗಳ ಬೋಧನೆ ಇರಬೇಕೆಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ, ಕ್ರೀಡೆ, ವೃತ್ತಿಪರ, ಕಲೆ, ವಾಣಿಜ್ಯ, ವಿಜ್ಞಾನದಂಥ ವಿಷಯಗಳಿಗೆ ಸಂಬಂಧಿಸಿದ ಹೆಚ್ಚುವರಿ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ.
ವರ್ಷದಲ್ಲಿ 10 ದಿನ ಬ್ಯಾಗ್‌ಲೆಸ್ ಡೇ
ಶಾಲೆಗಳಲ್ಲಿ ವರ್ಷದಲ್ಲಿ ಯಾವುದಾದರೂ ಹತ್ತು ದಿನ, ಶಾಲೆಗೆ ಬ್ಯಾಗ್‌ಗಳನ್ನು ತಗೆದು ಕೊಂಡು ಹೋಗಬೇಕಿಲ್ಲ. ಆ ದಿನಗಳಲ್ಲಿ ಕಲಿಕೆಗೆ ಪೂರಕವಾಗುವ ಪ್ರಾಯೋಗಿಕ ತರಬೇತಿಗೆ ಅನುವು ಮಾಡಿಕೊಡಲಾಗುತ್ತದೆ. ಹೆಚ್ಚಿನಾಂಶ, ಆ ದಿನಗಳನ್ನು ಶೈಕ್ಷಣಿಕ ಪ್ರವಾಸಗಳಂತೆ ಬಳಸಿಕೊಳ್ಳಲು ಅವಕಾಶವಿದೆ.
5+3+3+4
ಪ್ರಾಥಮಿಕ ಶಿಕ್ಷಣದ ವ್ಯಾಖ್ಯಾನ ಬದಲು ಮಾಡಲಾಗಿದೆ. ಈವರೆಗೆ ಇದ್ದ 10+2 (10ನೇ ತರಗತಿ + ಎರಡು ವರ್ಷ ಪಿಯು) ಪದ್ಧತಿ ಕೈಬಿಟ್ಟು, ಅದನ್ನು 5+3+3+4 ಎಂದು ಬದಲಾಯಿಸಲಾಗಿದೆ. ಅಂದರೆ, ಪ್ರತಿ ಯೊಬ್ಬ ವಿದ್ಯಾರ್ಥಿಗೆ ಸಹಜವಾಗಿ 6ರಿಂದ 16 ವರ್ಷದಲ್ಲಿ ಪಡೆ ಯುವ 10+2ರ ಅರ್ಹತೆಯನ್ನು ಬದಲಾಯಿಸಲಾಗಿದೆ.
5: ಮೊದಲ ಐದು ವರ್ಷಗಳ ಅಭ್ಯಾಸ ವನ್ನು (ಅಂಗನವಾಡಿ ಅಥವಾ ಪ್ರಿ – ನರ್ಸರಿಯ 1 ವರ್ಷ, ಎಲ್‌ಕೆಜಿ- ಯುಕೆಜಿಯ 2 ವರ್ಷ, 1 ಮತ್ತು 2ನೇ ತರಗತಿಯ 2 ವರ್ಷ). ಇದನ್ನು ಅಡಿಪಾಯ ಹಂತದ ಶಿಕ್ಷಣ ಎಂದು ಕರೆಯಲಾಗುತ್ತದೆ. ಈವರೆಗೆ ಅಂಗನವಾಡಿ ಅಥವಾ ಪ್ರೀ ನರ್ಸರಿ, ನರ್ಸರಿಗಳು ಐಚ್ಛಿಕ ಎನಿಸಿದ್ದವು. ಪಾಲಕರು ತಮ್ಮ ಮಕ್ಕಳನ್ನು ಪ್ರೀ-ನರ್ಸರಿ, ನರ್ಸರಿಗೆ ಕಳುಹಿಸದೇ ವಯೋಮಿತಿ ಆಧಾರದ ಮೇರೆಗೆ 1ನೇ ತರಗತಿಗೆ ನೇರವಾಗಿ ಸೇರಿಸಬಹುದಾಗಿತ್ತು. ಆದರೆ ಹೊಸ ಶಿಕ್ಷಣ ನೀತಿಯ ಪ್ರಕಾರ, ಅಂಗನವಾಡಿ / ಪ್ರೀ ನರ್ಸರಿ, ನರ್ಸರಿ (ಎಲ್‌ಕೆಜಿ-ಯುಕೆಜಿ) ಕಡ್ಡಾಯವಾಗಲಿದೆ.
ಪ್ರೀ ನರ್ಸರಿ, ಎಲ್‌ಕೆಜಿ, ಯುಕೆಜಿ, 1ನೇ ತರಗತಿ, 2ನೇ ತರಗತಿಗಳು ಈಗ ಅಡಿಪಾಯ ಶಿಕ್ಷಣ ಎಂದು ಹೆಸರಿಸಲ್ಪಟ್ಟಿರುವುದರಿಂದ ಆ ಐದೂ ವರ್ಷಗಳನ್ನು ಮಗು ಕಡ್ಡಾಯವಾಗಿ ಪೂರ್ಣಗೊಳಿಸಲೇಬೇಕು. ಅಂದರೆ, ಮಗುವಿಗೆ 3 ವರ್ಷವಾದ ಕೂಡಲೇ ಪ್ರೀ ನರ್ಸರಿಗೆ ಹಾಕಿದರೆ, ಅದಕ್ಕೆ 6 ವರ್ಷವಾಗುತ್ತಿದ್ದಂತೆ 1ನೇ ತರಗತಿಗೆ ಬರುವಂತೆ ಯೋಜಿಸಿ ಮಕ್ಕಳ ದಾಖಲಾತಿಗೆ ಪೋಷಕರು ಮುಂದಾಗಬೇಕಿದೆ.
3: ಅನಂತರ ಮೂರು ವರ್ಷದ ಶಿಕ್ಷಣವನ್ನು (3ರಿಂದ 5ನೇ ತರಗತಿ) ಪೂರ್ವಭಾವಿ ಶಿಕ್ಷಣ ಎಂದು ಪರಿಗಣಿಸಲಾಗುತ್ತದೆ.
3: ಅದಾದ ಅನಂತರದ ಮೂರು ವರ್ಷದ ಶಿಕ್ಷಣವನ್ನು (6ರಿಂದ 8ನೇ ತರಗತಿವರೆಗೆ) ಮಾಧ್ಯಮಿಕ ಶಿಕ್ಷಣ ಎಂದೂ ಕರೆಯಲಾಗುತ್ತದೆ. ಇಲ್ಲಿಂದ ವೃತ್ತಿಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
4: ಇದು 8ನೇ ತರಗತಿಯ ಅನಂತರದ ನಾಲ್ಕು ವರ್ಷ (8ರಿಂದ 12ನೇ ತರಗತಿ) ಶಿಕ್ಷಣವನ್ನು ಪ್ರೌಢ ಶಿಕ್ಷಣವೆಂದೂ ಪರಿಗಣಿಸಲಾಗುತ್ತದೆ. ಈಗಿನಂತೆ, ಯಾವುದೇ ವಿದ್ಯಾರ್ಥಿ ಪ್ರೌಢ ಶಿಕ್ಷಣದ ಅನಂತರ ಪದವಿ ಪೂರ್ವ ಶಿಕ್ಷಣ (ಪಿಯುಸಿ) 2 ವರ್ಷ ಪಡೆದು ಅನಂತರ ಪದವಿ ಶಿಕ್ಷಣದ ಹಂತಕ್ಕೆ ಮುಟ್ಟುತ್ತಾನೆ. ಆದರೆ ಇನ್ನು ಮುಂದೆ ಪಿಯುಸಿ ಎಂದು ಪ್ರತ್ಯೇಕವಾಗಿರುವುದಿಲ್ಲ.
6 ರಿಂದ 8ರ ವರೆಗೆ ಲೋಕಜ್ಞಾನದ ಶಿಕ್ಷಣ
ಕಲಿಕೆಯ ಎಲ್ಲಾ ಹಂತಗಳಲ್ಲೂ ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಒದಗಿಸಲಾಗುತ್ತದೆ. ಅದರಡಿ, 6ನೇ ತರಗತಿಯಿಂದ 8ನೇ ತರಗತಿಯವರೆಗೆ ತರಬೇತಿ ಆಧಾರಿತ ಗ್ರೇಡ್ ವ್ಯವಸ್ಥೆ (ಕೋಡಿಂಗ್) ಜಾರಿ ಗೊಳ್ಳ ಲಿದೆ. ವೃತ್ತಿಪರ ವಿಚಾರದಲ್ಲಿ ದೂರ ಶಿಕ್ಷಣಕ್ಕೂ ಉತ್ತೇಜನ ಕಲ್ಪಿಸಲಾಗುತ್ತದೆ. 2025ರ ಹೊತ್ತಿಗೆ, ಕನಿಷ್ಟ ಶೇ. 50ರಷ್ಟು ಮಕ್ಕಳು ವೃತ್ತಿಪರವಾಗಿ ತರಬೇತಿ ಹೊಂದುವಂತೆ ಕ್ರಮ ಕೈಗೊಳ್ಳಲಾಗುತ್ತದೆ.
ಅದಲ್ಲದೆ, ಕೌಶಲಾಭಿವೃದ್ಧಿಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದು, ನ್ಯಾಶನಲ್ ಸ್ಕಿಲ್ಸ್ ಕ್ವಾಲಿಫಿಕೇಶನ್ಸ್ ಫ್ರೇಂವರ್ಕ್ ನಂಥ ಕಾರ್ಯಕ್ರಮಗಳನ್ನು ಅಳವಡಿಸಲಾಗುತ್ತದೆ. ಅಲ್ಲದೆ, ಬಡಗಿ, ತೋಟಗಾರಿಕೆ, ಕುಂಬಾರಿಕೆ, ಕರಕುಶಲ ವಸ್ತುಗಳು ಸೇರಿದಂತೆ 10 ವೃತ್ತಿಪರ ಕಲೆಗಳನ್ನು ಕಲಿಸಲಾಗುತ್ತದೆ. ಅದಲ್ಲದೆ, ಮಕ್ಕಳಿಗೆ ಲೋಕ ಜ್ಞಾನ ಅಥವಾ ಪ್ರಾಪಂಚಿಕ ವ್ಯವಹಾರ ಜ್ಞಾನವನ್ನು ನೀಡುವ ‘ಲೋಕ ವಿದ್ಯಾ’ ಎಂಬ ಶೈಕ್ಷಣಿಕ ಪರಿಕಲ್ಪನೆ ಭಾರತದಲ್ಲಿಯೇ ಉಗಮವಾಗಿದ್ದು, ಅದನ್ನು ಈಗ ಶಾಲಾ ಪಠ್ಯಕ್ರಮದಲ್ಲಿಯೂ ಅಳವಡಿಸಲಾಗುತ್ತದೆ. ವೈಜ್ಞಾನಿಕ-ಗಣಿತ ಶಾಸ್ತ್ರ ಚಿಂತನೆಗಳನ್ನು ಪ್ರೋತ್ಸಾಹಿಸಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಪಿಯುಸಿ ಇಲ್ಲ; ಪ್ರೌಢಶಿಕ್ಷಣದಲ್ಲಿ ಇಷ್ಟವಾದದ್ದನ್ನು ಕಲಿಯಿರಿ
ಹೊಸ ಶಿಕ್ಷಣ ನೀತಿಯಲ್ಲಿ, ಪದವಿಪೂರ್ವ ಶಿಕ್ಷಣಕ್ಕೆ ತಿಲಾಂಜಲಿ ನೀಡಲಿರುವುದರಿಂದ ವಿದ್ಯಾರ್ಥಿಗಳು, ಪದವಿ ಪೂರ್ವದಲ್ಲಿ ಸಾಮಾನ್ಯ ವಾಗಿ ವಿಜ್ಞಾನ, ವಾಣಿಜ್ಯ, ಕಲೆ ವಿಭಾಗಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಗೋಜು ಇರುವುದಿಲ್ಲ. ಈ ವಿಷಯಗಳನ್ನು ಇನ್ನು ಪ್ರೌಢ ಶಿಕ್ಷಣ ಹಂತದಲ್ಲೇ ಕಲಿಸಲು ಒತ್ತು ನೀಡಲಾಗುತ್ತದೆ. ಅಂದರೆ, ಎರಡು ವರ್ಷಗಳ ಪದವಿಪೂರ್ವ ಶಿಕ್ಷಣದಲ್ಲಿ ಕಲಿಯಬೇಕಿದ್ದನ್ನು ಪ್ರೌಢಶಿಕ್ಷಣ ಹಂತದಲ್ಲಿ ನಾಲ್ಕು ವರ್ಷಗಳಲ್ಲಿ ಕಲಿಸಲಾಗುತ್ತದೆ. ಅಲ್ಲಿ, ವಿದ್ಯಾರ್ಥಿಗಳ ಮುಂದೆ ಬಹು ಆಯ್ಕೆಗಳಿರುತ್ತವೆ. ಅಲ್ಲಿ, ಕಾಂಬಿನೇಷನ್ ಆಫ್ ಸಬ್ಜೆಕ್ಟ್ ಅಡಿಯಲ್ಲಿ ವಿದ್ಯಾರ್ಥಿಯು ವಿಜ್ಞಾನ, ಕಲೆ, ವಾಣಿಜ್ಯ- ಈ ಮೂರೂ ವಿಭಾಗಗಳಲ್ಲಿ ತಮಗಿಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಭ್ಯಸಿಸಬಹುದು.
ಅದರ ಜತೆಗೆ, ಶೈಕ್ಷಣಿಕ ವಿದ್ಯಾಭ್ಯಾಸದ ಜತೆಯಲ್ಲೇ ಸಂಗೀತ, ಕಲೆ, ಸಾಹಿತ್ಯ, ತತ್ವಶಾಸ್ತ್ರ ಮುಂತಾದ ವಿಷಯಗಳ ಬೋಧನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಅದಲ್ಲದೆ, ನೃತ್ಯ, ರಂಗಭೂಮಿ, ಗಣಿತ ಶಾಸ್ತ್ರ, ಸಂಖ್ಯಾಶಾಸ್ತ್ರ, ಪ್ಯೂರ್ ಆ್ಯಂಡ್ ಅಪ್ಲೆ„ಯ್ಡ ಸೈನ್ಸ್, ಸಮಾಜ ಶಾಸ್ತ್ರ, ಅರ್ಥ ಶಾಸ್ತ್ರ, ಕ್ರೀಡೆ, ಭಾಷಾಂತರ ಹಾಗೂ ಗ್ರಹಿಕೆ ಸೇರಿದಂತೆ ಅನೇಕ ವಿಷಯಗಳನ್ನು ವಿದ್ಯಾರ್ಥಿಗಳು ಅಭ್ಯಸಿಸಬ ಹುದು. ಅವೆೆಲ್ಲವನ್ನೂ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಸಾಧನೆಗಳೆಂದೇ ಪರಿಗಣಿಸಲಾಗುತ್ತದೆ.
ಎಲ್ಲಿದ್ದರೂ ಕನ್ನಡ ಕಲಿಯಬಹುದು
ಇ-ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದ್ದು, ಮಂಡಳಿಗಳ ಶಿಕ್ಷಣದ ಸಂಪೂರ್ಣ ಪಠ್ಯ ಹಿಂದಿ, ಇಂಗ್ಲಿಷ್ ಮಾತ್ರ ವಲ್ಲದೆ, ಕನ್ನಡ, ತಮಿಳು, ಬಂಗಾಲಿ ಸೇರಿ ಸುಮಾರು 8 ಪ್ರಾಂತೀಯ ಭಾಷೆಗಳಲ್ಲಿ ವಿದ್ಯಾರ್ಥಿಗಳ ಕೈಗೆ ಸಿಗಲಿದೆ. ಆನ್‌ಲೈನ್ ಮೂಲಕ ಆ ಪಠ್ಯಗಳನ್ನು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಗಳಲ್ಲೇ ಕಲಿಕೆ ಮುಂದುವರಿಸಬ ಹುದು. ಅಲ್ಲದೆ, 5ನೇ ತರಗತಿ ವರೆಗೆ ವಿದ್ಯಾರ್ಥಿಯ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂಬ ನಿಯಮ ಮಾಡಿರುವುದು ಪ್ರಶಂಸೆ ಪಡೆದಿದೆ.
ಧ್ಯೇಯೋದ್ದೇಶ
ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಕಲಿಕೆಗೆ ಉತ್ತೇಜಿಸುವುದು ಅಡಿಪಾಯ ಹಂತದ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ಬಹು ವಿಷಯ ಬೋಧನೆ, ಗುಣಮಟ್ಟದ ಕಲಿಕೆಗೆ ಆದ್ಯತೆ 21ನೇ ಶತಮಾನಕ್ಕೆ ತಕ್ಕಂತೆ ಹೊಸ ಕಲಿಕೆಗಳಿಗೆ ಅವಕಾಶ
ಇತರ ಸೌಲಭ್ಯಗಳು
ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆ ಶಾಲಾ ಬ್ಯಾಗ್‌ಗಳ ತೂಕ ಇಳಿಕೆ ಪೌಷ್ಟಿಕ ಆಹಾರ, ಆರೋಗ್ಯದ ಬಗ್ಗೆ ಬೋಧನೆ ತಜ್ಞರಿಂದ ಮಕ್ಕಳ ಸಮಾಲೋಚನೆ ದಿವ್ಯಾಂಗ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ಎಲ್ಲ ವಿದ್ಯಾರ್ಥಿಗಳ ಸಹಭಾಗಿತ್ವ ಹಾಗೂ ಕಾಳಜಿಗೆ ಆದ್ಯತೆ ಉತ್ತಮ ಶಿಕ್ಷಣಕ್ಕಾಗಿ, ನ್ಯಾಷನಲ್ ಕರಿಕ್ಯುಲರ್ ಆ್ಯಂಡ್ ಪೆಡಗೋಜಿಕಲ್ ಫ್ರೇಂವರ್ಕ್ ಫಾರ್ ಅರ್ಲಿ ಚೈಲ್ಡ್‌ಹುಡ್ ಎಜುಕೇಷನ್ (ಎನ್‌ಸಿಪಿಎಫ್ಇಸಿಇ) ಎಂಬ ಕರಡನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮಂಡಳಿ (ಎನ್‌ಸಿಇಆರ್‌ಟಿ) ಸಿದ್ಧಪಡಿಸಲಿದೆ.
ಮೌಲ್ಯಮಾಪನ ಹೇಗೆ?
ಆಯಾ ಶೈಕ್ಷಣಿಕ ತರಗತಿಗಳಲ್ಲಿ ನೀಡಲಾಗುವ ಪ್ರಗತಿ ಪತ್ರಗಳು (ರಿಪೋರ್ಟ್ ಕಾರ್ಡ್ ಅಥವಾ ಮಾಕ್ಸ್‌ಕಾರ್ಡ್) ಇನ್ನು ಕೃತಕ ಬುದ್ಧಿಮತ್ತೆ ಆಧಾರದಡಿ ರೂಪುಗೊಳ್ಳಲಿವೆ. ವಿದ್ಯಾರ್ಥಿಯ ಆಯಾ ತರಗತಿಗಳ ಪ್ರಗತಿಯನ್ನು ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಅದನ್ನು ಅವಲೋಕಿಸಲು ಅವಕಾಶವಿರಲಿದೆ. ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯು ಇನ್ನು ವಿದ್ಯುನ್ಮಾನ ತಂತ್ರಜ್ಞಾನದಲ್ಲಿ ದಾಖಲಾಗಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.