ತಾರೆಯರಿಂದ ಕೈಮಗ್ಗ ಚಾಲೆಂಜ್ ಸ್ವೀಕಾರ
Team Udayavani, Aug 8, 2020, 7:33 AM IST
ಹೊಸದಿಲ್ಲಿ: ಭಾರತೀಯ ಬ್ರ್ಯಾಂಡ್‌ಗಳಿಗೆ ಉತ್ತೇಜನ ನೀಡುವ ಸಲುವಾಗಿ ಕೈಮಗ್ಗ ದಿನದ ನಿಮಿತ್ತ ಕೈಮಗ್ಗ ಸೀರೆ- ಉಡುಪು ಧರಿಸಿ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ನೀಡಿದ ಕರೆಯನ್ನು ದೇಶದ ಹಲವು ತಾರೆಯರು ಸ್ವೀಕರಿಸಿದ್ದಾರೆ.
ಕೈಮಗ್ಗ ಸೀರೆ- ಉಡುಪು ಧರಿಸಿ, ವೋಕಲ್ 4 ಹ್ಯಾಂಡ್ ಮೇಡ್ ಹ್ಯಾಷ್‌ಟ್ಯಾಗ್ ಸೃಷ್ಟಿಸಿ ಫೋಟೊಗಳನ್ನು ಹಂಚಿಕೊಳ್ಳುವಂತೆ ಸವಾಲು ಹಾಕಿದ್ದರು. ಈ ಸವಾಲನ್ನು ಬಾಲಿವುಡ್ ನಟಿಯರು ಸೇರಿದಂತೆ ಹಲವರು ಸ್ವೀಕರಿಸಿದ್ದಾರೆ. ಕಂಗನಾ ರಣಾವತ್, ವಿದ್ಯಾ ಬಾಲನ್, ಪ್ರಿಯಾಂಕಾ ಚೋಪ್ರಾ, ಝಾನ್ವಿ ಕಪೂರ್, ಶಕುಂತಲಾ ದೇವಿ ಸೇರಿದಂತೆ ಹಲವು ತಾರೆಗಳು ಕೈಮಗ್ಗದ ಉಡುಪು ಗಳನ್ನು ಧರಿಸಿ, ಚಿತ್ರಗಳನ್ನು ಹಂಚಿ ಕೊಂಡಿದ್ದಾರೆ.
ಕಾಂಜೀವರಂನಲ್ಲಿ ವಿದ್ಯಾ: ಕಾಂಜೀ ವರಂ ಸೀರೆ ಧರಿಸಿ ಚಿತ್ರ ಹಂಚಿ ಕೊಂಡಿದ್ದ ವಿದ್ಯಾ ಬಾಲನ್, ಇಂಥ ಸಂದಿಗ್ಧ ಕಾಲ ದಲ್ಲಿ ದೇಶದ ಕೈಮಗ್ಗ ದಲ್ಲಿ ಸೀರೆ, ವಸ್ತ್ರ ತಯಾರಕರ ಕೈಹಿಡಿಯೋಣ. ಅವರು ಸಿದ್ಧಪಡಿ ಸಿದ ಸುಂದರ ಉಡುಪುಗಳನ್ನು ನಿತ್ಯದ ಜೀವನದಲ್ಲಿ ಧರಿಸೋಣ ಎಂದು ಕರೆಕೊಟ್ಟಿದ್ದಾರೆ.
ಆಗಸ್ಟ್ 7ರ ರಾಷ್ಟ್ರೀಯ ಕೈಮಗ್ಗ ದಿನವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಟ್ವಿಟರಿನಲ್ಲಿ ಆಚರಿಸಿ ದ್ದಾರೆ. ನಮ್ಮ ಹಿರಿಮೆಯ ಕೈಮಗ್ಗ ಮತ್ತು ಕರಕುಶಲ ರಂಗಕ್ಕೆ ಕೊಡುಗೆ ನೀಡುತ್ತಿ ರುವ ಎಲ್ಲರಿಗೂ ನನ್ನ ನಮನಗಳು. ನಮ್ಮ ದೇಶದ ಸ್ಥಳೀಯ ಕರಕುಶಲ ಉತ್ಪನ್ನಗಳನ್ನು ಸಂರಕ್ಷಿಸಲು ನೀವೆಲ್ಲ ಶ್ಲಾಘನೀಯ ಪ್ರಯತ್ನ ಮಾಡುತ್ತಿದ್ದೀರಿ ಎಂದು ಹೇಳಿರುವ ಪ್ರಧಾನಿ, ಕೈಯಿಂದ ತಯಾರಿಸಿದ ಉತ್ಪನ್ನಗಳಿಗೆ ಧ್ವನಿಯಾಗ ಬೇಕು ಎಂದು ಕರೆಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Goa: ಕ್ಯಾಲಂಗುಟ್ ಬೀಚ್ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.