ತೆರೆಗೆ ಸರಿದ ವೈದ್ಯ ಮಂಡಳಿ
ರಾಜ್ಯಸಭೆಯಲ್ಲಿ ಮಹತ್ವದ ಎನ್‌ಎಂಸಿ ವಿಧೇಯಕಕ್ಕೆ ಒಪ್ಪಿಗೆ
Team Udayavani, Aug 2, 2019, 5:04 AM IST
ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕದ ವಿರುದ್ಧ ವೈದ್ಯ ಸಮುದಾಯ ದೇಶವ್ಯಾಪಿ ಮುಷ್ಕರ ನಡೆಸಿದ ಮಾರನೇ ದಿನವೇ ಅಂದರೆ ಗುರುವಾರ ರಾಜ್ಯಸಭೆಯಲ್ಲಿ ಈ ವಿಧೇಯಕಕ್ಕೆ ಅನುಮೋದನೆ ಸಿಕ್ಕಿದೆ. ಈ ಮೂಲಕ ಸಂಸತ್‌ನಲ್ಲಿ ಬಹುನಿರೀಕ್ಷಿತ ವಿಧೇಯಕ ಅಂಗೀಕಾರಗೊಂಡಂತೆ ಆಗಿದೆ.
ಇದುವರೆಗೆ ಇದ್ದ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಸ್ಥಾನದಲ್ಲಿ ಇನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಬರಲಿದೆ. ಜು.29ರಂದು ಅದು ಲೋಕಸಭೆಯಲ್ಲಿ ಅನುಮೋದನೆಗೊಂಡಿತ್ತು.
ಕೇಂದ್ರದ ನಿರ್ಧಾರವನ್ನು ಎಐಎಡಿಎಂಕೆ ಆಕ್ಷೇಪಿಸಿ ಸದನದಿಂದ ಹೊರ ನಡೆಯಿತು. ಬಳಿಕ ಧ್ವನಿಮತದಿಂದ ಅದಕ್ಕೆ ಅನುಮೋದನೆ ನೀಡಲಾಯಿತು. ಚರ್ಚೆಗೆ ಉತ್ತರಿಸಿ ಮಾತನಾಡಿದ ಕೇಂದ್ರ ಸಚಿವ ಹರ್ಷವರ್ಧನ್, ಈ ವಿಧೇಯಕ ದೇಶದಲ್ಲಿ ‘ಮಾಟ ಮಂತ್ರಗಳಿಗೆ ಪ್ರೋತ್ಸಾಹ ನೀಡುವುದಿಲ್ಲ’ ಎಂದರು. ವಿಧೇಯಕದಿಂದ ವೈದ್ಯ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪಡೆಯಲು ಅನುಕೂಲವಾಗಲಿದೆ. 80 ಸಾವಿರ ವೈದ್ಯ ಸೀಟುಗಳ ಪೈಕಿ 40 ಸಾವಿರ ಸರ್ಕಾರಿ ಸಂಸ್ಥೆಗಳ ವ್ಯಾಪ್ತಿಯಲ್ಲಿದೆ. ಜತೆಗೆ ಶುಲ್ಕದ ಮೇಲೆ ಕೂಡ ನಿಯಂತ್ರಣ ಸಾಧಿಸಲಾಗುತ್ತದೆ. ಎಂಸಿಐ ಅವಧಿಯಲ್ಲಿ ಶುಲ್ಕದ ಮೇಲೆ ನಿಯಂತ್ರಣ ಇರಲಿಲ್ಲ. ಖಾಸಗಿ ಕಾಲೇಜುಗಳ ವ್ಯಾಪ್ತಿಯಲ್ಲಿರುವ 40 ಸಾವಿರ ವೈದ್ಯ ಸೀಟುಗಳ ಮೇಲೆ ರಾಜ್ಯ ಸರ್ಕಾರಗಳು ನಿಯಂತ್ರಣ ಹೇರಲು ಅವಕಾಶ ಉಂಟು. ಆಯೋಗದಲ್ಲಿ ಇರಲಿರುವ 25 ಮಂದಿ ಸದಸ್ಯರ ಪೈಕಿ 11 ಮಂದಿ ರಾಜ್ಯಗಳ ಪ್ರತಿನಿಧಿಗಳೇ ಆಗಿರುತ್ತಾರೆ ಮತ್ತು ವೈದ್ಯರೇ ಇರಲಿದ್ದಾರೆ. ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿ ಇರಲಿದೆ ಎಂದಿದ್ದಾರೆ. ಈ ವಿಧೇಯಕ ಅಂಗೀಕಾರವಾದ್ದರಿಂದ 63 ವರ್ಷಗಳ ಭಾರತೀಯ ವೈದ್ಯಕೀಯ ಮಂಡಳಿ ಇತಿಹಾಸದ ಪುಟ ಸೇರಿದಂತಾಗಿದೆ.
ಚರ್ಚಿಸದೆ ವಿಧೇಯಕಗಳ ಮಂಡನೆ: ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಜತೆಗೆ ಚರ್ಚೆ ನಡೆಸದೆ ವಿಧೇಯಕಗಳನ್ನು ಮಂಡಿಸುತ್ತಿದೆ ಎಂದು ಆರೋಪಿಸಲಾಗಿದೆ. ಅದನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿರಸ್ಕರಿಸಿದ್ದಾರೆ. ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಲೇ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಟಿಎಂಸಿಯ ಸುಗತಾ ರಾಯ್, ಡಿಎಂಕೆಯ ಕನಿಮೋಳಿ ಪ್ರತಿಪಕ್ಷಗಳ ಗಮನಕ್ಕೆ ತಾರದೆ ವಿಧೇಯಕಗಳನ್ನು ಮಂಡಿಸಿ ಅನುಮೋದಿಸುತ್ತಿದೆ ಎಂದು ದೂರಿದರು. ಅದನ್ನು ತಿರಸ್ಕರಿಸಿದ ಸಚಿವ ಜೋಶಿ, ಸದನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದಿದ್ದಾರೆ.
ಕಾಗದ ರಹಿತವಾಗಿರಬೇಕು ಲೋಕಸಭೆ: ಲೋಕಸಭೆಯಲ್ಲಿ ಕಾಗದ ಬಳಕೆ ಸಂಪೂರ್ಣವಾಗಿ ನಿಲ್ಲಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಹಲವಾರು ಕೋಟಿ ರೂ.ಗಳನ್ನು ಉಳಿತಾಯ ಮಾಡಬಹುದು ಎಂದು ಹೇಳಿದ್ದಾರೆ.
ಸಂಸತ್ ಕಲಾಪವನ್ನು ವಿಸ್ತರಿಸುವ ಬಗ್ಗೆ ಕೇಂದ್ರ ಸರಕಾರ ಯೋಚನೆ ಮಾಡುತ್ತಿದೆ. ವಿಧಾನಸಭೆಗಳಿಗೆ ಮಾದರಿಯಾಗಿ ಲೋಕಸಭೆ ಇರಬೇಕು. ಸಂಸದರು ಕೂಡ ಮದುವೆ ಸೇರಿ ದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗ ಬೇಕಾಗುತ್ತದೆ. ಸದನದ ಕಲಾಪ ವಿಸ್ತರಿಸಬೇಕು ಎನ್ನುವುದಕ್ಕೆ ಸರಿಯಾದ ಕಾರಣ ನೀಡಿ.
ಮುಲಾಯಂ ಸಿಂಗ್ ಯಾದವ್, ಎಸ್‌ಪಿ ಸಂಸದ
ಮುಲಾಯಂಜಿ ಅವರೇ, ನೀವು ಹಿರಿಯ ಸದಸ್ಯರಿದ್ದೀರಿ. ಪ್ರಮುಖ ಮಸೂದೆಗಳು ಮಂಡನೆಯಾಗಿ ಚರ್ಚೆಯಾಗಿ ಅಂಗೀಕಾರವಾಗಬೇಕಾಗಿದೆ.ಅದರಿಂದ ಜನರಿಗೆ ಅನುಕೂಲವಾಗಬೇಕಾಗಿದೆ. ಹೀಗಾಗಿ ನಿಮ್ಮ ಅಭಿಪ್ರಾಯ ಒಪ್ಪಲಾಗುವುದಿಲ್ಲ.
ಅರ್ಜುನ್ ರಾಮ್ ಮೇಘಾಲ್, ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ
27 ಲೋಕಸಭೆಯಲ್ಲಿ ಇದುವರೆಗೆ ಅಂಗೀಕಾರವಾದ ಮಸೂದೆಗಳು
23 ರಾಜ್ಯಸಭೆಯಲ್ಲಿ ಇದುವರೆಗೆ ಅಂಗೀಕಾರವಾದ ಮಸೂದೆಗಳು
19 ಎರಡೂ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ
ರಾಜಸ್ಥಾನದಲ್ಲಿ ಮತ್ತೊಂದು ಬೋರ್ ವೆಲ್ ದುರಂತ… 150 ಅಡಿ ಆಳದಲ್ಲಿ ಸಿಲುಕಿದ 3 ವರ್ಷದ ಬಾಲಕಿ
Speeding Truck : ಟ್ರಕ್ ನಡಿ ಸಿಲುಕಿದ ಬೈಕ್ ಸವಾರರನ್ನು 1ಕಿ.ಮೀ ದೂರ ಎಳೆದೊಯ್ದ ಚಾಲಕ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.