ದಾಳಿಕೋರರಿಂದ ಧ್ವಂಸಗೊಂಡ ದೇವಾಲಯಗಳ ಪುನರ್ ನಿರ್ಮಾಣ: ರಾಷ್ಟ್ರವ್ಯಾಪಿ ಅಭಿಯಾನ
Team Udayavani, Jun 13, 2022, 4:38 PM IST
ಪಣಜಿ: ರಾಷ್ಟ್ರಮಟ್ಟದಲ್ಲಿ ರಾಮಮಂದಿರ, ಕಾಶಿ, ಮಥುರಾ ಮತ್ತು ಭೋಜ ಶಾಲಾ ಮಾತ್ರವಲ್ಲದೆ ಸಾವಿರಾರು ದೇವಾಲಯಗಳನ್ನು ಮೊಘಲರು, ಪೋರ್ಚುಗೀಸರು ಮುಂತಾದ ದಾಳಿಕೋರರು ಕೆಡವಿದ್ದಾರೆ ಎಂದು ನ್ಯಾಯವಾದಿಗಳು ಹೇಳಿದರು.
ಭಾರತ ಸ್ವತಂತ್ರವಾಯಿತು; ಆದರೆ ಹಿಂದೂಗಳ ಪುರಾತನ ಧಾರ್ಮಿಕ ಸ್ಥಳಗಳು ವಿದೇಶಿ ಗುಲಾಮಗಿರಿಯಲ್ಲಿ ಉಳಿಯಿತು. ಇದರಿಂದಾಗಿ ದಾಳಿಕೋರರಿಂದ ಧ್ವಂಸಗೊಂಡ ದೇವಾಲಯಗಳ ಪುನರ್ ನಿರ್ಮಾಣಕ್ಕಾಗಿ ಎಲ್ಲಾ ದೇವಾಲಯದ ಸಂಘಟನೆಗಳು, ಭಕ್ತರು, ಅರ್ಚಕರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ಪರವಾಗಿ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸುವ ಸಂಕಲ್ಪ ಮಾಡಲಾಯಿತು.
ಗೋವಾದಲ್ಲಿ ಧ್ವಂಸಗೊಂಡ ದೇವಾಲಯಗಳ ಬಗ್ಗೆ ಪುರಾವೆಗಳು ಸಿಕ್ಕಿದ್ದಲ್ಲಿ ಆ ಕುರಿತು ನ್ಯಾಯಾಂಗ ಹೋರಾಟ ಮಾಡಲಾಗುವುದು ಎಂದು ಗೋವಾದಲ್ಲಿ ನಡೆಯುತ್ತಿರುವ 10ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನದಂದು ನ್ಯಾಯವಾದಿಗಳು ನಿರ್ಧಾರ ಕೈಗೊಂಡರು.
ಈ ಹೋರಾಟಕ್ಕೆ ಗೋಮಾಂತಕದ ಜನತೆಯು ತಮ್ಮಲ್ಲಿ ಲಭ್ಯವಿರುವ ಪುರಾವೆಗಳನ್ನು ಹಿಂದೂ ಜನಜಾಗೃತಿ ಸಮಿತಿಗೆ ಒದಗಿಸುವಂತೆ ಶ್ರೀ ರಾಮನಾಥ ದೇವಾಲಯದ ವಿದ್ಯಾಧಿರಾಜ ಸಂಭಾಂಗಣ(ಫೋಂಡಾ, ಗೋವಾ)ದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ನ್ಯಾಯವಾದಿ ವಿಷ್ಣು ಜೈನ್ ಮಾತನಾಡುತ್ತಾ, ದೇವಸ್ಥಾನಗಳ ಪುನರ್ ನಿರ್ಮಾಣದ ಈ ಅಭಿಯಾನದಲ್ಲಿ ಈ ಕೆಳಗಿನ ಸೂತ್ರಗಳು ನಮ್ಮ ಸಂಶೋಧನೆಯ ಕೇಂದ್ರಬಿಂದುವಾಗಿರುತ್ತವೆ. ಇದರಲ್ಲಿ ವಿವಾದಿತ ಸ್ಥಳದ ಪೌರಾಣಿಕ ಮಹತ್ವ, ನಾಶ ಮಾಡಿರುವ ಐತಿಹಾಸಿಕ ಪುರಾವೆಗಳು, ಖಟ್ಲೆಯ ಇತಿಹಾಸ, ಸಾಕ್ಷ್ಯ ಮತ್ತು ಕಾನೂನುರೀತ್ಯ ಆಧಾರ ಇತ್ಯಾದಿಗಳ ಅಧ್ಯಯನ ಮಾಡಲಾಗುವುದು ಎಂದರು.
ಸಂಶೋಧನೆಯ ಕೊನೆಯಲ್ಲಿ ದೇವಾಲಯಗಳನ್ನು ಕೆಡವಲಾಗಿದೆ ಎಂದು ಸಾಬೀತಾದರೆ ನಾವು ಅವುಗಳ ಜೀರ್ಣೋದ್ಧಾರಕ್ಕಾಗಿ ನ್ಯಾಯಾಂಗ ಹೋರಾಟವನ್ನು ಪ್ರಾರಂಭಿಸುತ್ತೇವೆ. ಪ್ರಸ್ತುತ ಅನೇಕ ವಿವಾದಿತ ಸ್ಥಳಗಳು ಪುರಾತತ್ವ ಸಮೀಕ್ಷೆ ಇಲಾಖೆಯ ನಿಯಂತ್ರಣದಲ್ಲಿವೆ, ಇದು ಖಾತೆಗಳ ಕಾಯಿದೆ, 1958 ರ ಸೆಕ್ಷನ್ 16 ರ ವಿರುದ್ಧ ಕಾರ್ಯನಿರ್ವಹಿಸುತ್ತಿದೆ. ಓರ್ವ ನಿಜವಾದ ಹಿಂದೂವಾಗಿ, ನಾವು ಅಂತಹ ದೇವಾಲಯಗಳನ್ನು ಪುನರ್ನಿರ್ಮಿಸುವ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪುನರ್‌ಸ್ಥಾಪಿಸಲು ಪ್ರತಿಜ್ಞೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಭಾರತ ಮಾತಾ ಕೀ ಜೈ ಸಂಘಟನೆಯ ಗೋವಾ ರಾಜ್ಯ ಸಂಚಾಲಕ ಸುಭಾಷ ವೇಲಿಂಗ್ಕರ ಮಾತನಾಡುತ್ತಾ, ಪೋರ್ಚುಗೀಸರ ಆಳ್ವಿಕೆಯಲ್ಲಿ 1 ಸಾವಿರ ಕ್ಕೂ ಹೆಚ್ಚು ದೇವಾಲಯಗಳನ್ನು ಧ್ವಂಸ ಮಾಡಲಾಯಿತು. ಇವುಗಳಲ್ಲಿ ಎರಡು ದೇವಾಲಯಗಳು ಚರ್ಚ್‌ನ ದಾಳಿಯಿಂದ ಉಳಿದುಕೊಂಡಿವೆ, ಅದರಲ್ಲಿ ಒಂದು ವರೇಣ್ಯಪುರಿ (ವೆರ್ಣಾ) ಮತ್ತು ಇನ್ನೊಂದು ಶ್ರೀ ವಿಜಯದುರ್ಗಾ ದೇವಿಯ ದೇವಾಲಯವಾಗಿದೆ ಎಂದರು.
ಈ ದೇವಸ್ಥಾನಗಳನ್ನು ರಾಜ್ಯ ಪುರಾತತ್ವ ಇಲಾಖೆ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದ್ದರೂ ಚರ್ಚ್‌ಗಳು ದೇವಾಲಯದ ಭೂಮಿಯನ್ನು ಕಬಳಿಸುವ ಷಡ್ಯಂತ್ರ ನಡೆಸುತ್ತಿದೆ. ಈ ದಾಳಿಯ ವಿರುದ್ಧ ಹಿಂದೂ ಭಕ್ತರು ಒಗ್ಗೂಡಿ ಹೋರಾಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್, ವಾರಣಾಸಿಯಲ್ಲಿನ ನ್ಯಾಯವಾದಿ ಮದನ ಮೋಹನ ಯಾದವ್, ಗೋವಾದ ‘ಭಾರತ ಮಾತಾ ಕೀ ಜೈʼಸಂಘಟನೆಯ ಸಂಚಾಲಕರಾದ ಸುಭಾಷ ವೆಲಿಂಗ್ಕರ್, ಗೋವಾ ಮಂದಿರ ಮಹಾಸಂಘದ ಕಾರ್ಯದರ್ಶಿ ಜಯೇಶ ಥಳಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚೆನ್ನೈ ಲೈಂಗಿಕ ಕಿರುಕುಳ ಕೇಸ್: ಎಸ್‌ಐಟಿ ತನಿಖೆಗೆ ಹೈಕೋರ್ಟ್ ಆದೇಶ
Pinarayi Vijayan: ಸಿಂಗ್ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.