Odisha: ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಪಡೆದ ನವೀನ್ ಪಟ್ನಾಯಕ್ ರ ಮಾಜಿ ಆಪ್ತ ಕಾರ್ಯದರ್ಶಿ
Team Udayavani, Oct 24, 2023, 11:05 AM IST
ಹೊಸದಿಲ್ಲಿ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ವಿ.ಕೆ ಪಾಂಡಿಯನ್ ಅವರು ಇದೀಗ ಕ್ಯಾಬಿನೆಟ್ ದರ್ಜೆ ಸ್ಥಾನ ಪಡೆದಿದ್ದಾರೆ. 2000ನೇ ಸಾಲಿನ ಒಡಿಶಾ ಬ್ಯಾಚ್ ನ ಐಎಎಸ್ ಅಧಿಕಾರಿಯಾದ ಅವರು ಒಂದು ದಿನದ ಹಿಂದೆಯಷ್ಟೇ ಆಪ್ತ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರಿಗೆ ಪಟ್ನಾಯಕ್ ಅವರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವ ದರ್ಜೆ ನೀಡಲಾಗಿದೆ.
ಒಡಿಶಾದ ಸಾಮಾನ್ಯ ಆಡಳಿತ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ಹೊರಡಿಸಿದ ಆದೇಶದಲ್ಲಿ ಐಎಎಸ್ ಅಧಿಕಾರಿ ವಿ.ಕೆ ಪಾಂಡಿಯನ್ ಅವರನ್ನು ರಾಜ್ಯ ಸರ್ಕಾರದ 5T (ಪರಿವರ್ತನೆ ಉಪಕ್ರಮಗಳು) ಮತ್ತು ನಬಿನ್ ಒಡಿಶಾ ಯೋಜನೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದೆ. ಅವರು ಕ್ಯಾಬಿನೆಟ್ ಸಚಿವ ಶ್ರೇಣಿಯನ್ನು ಹೊಂದಿರುತ್ತಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ, ಪಾಂಡಿಯನ್ ಪಕ್ಷಕ್ಕೆ ಸೇರಬಹುದು ಮತ್ತು ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರಿಗೆ ದೊಡ್ಡ ಹೊಣೆಯನ್ನು ನೀಡಬಹುದು ಎಂದು ಸುದ್ದಿಯಾಗಿತ್ತು.
2000ನೇ ಸಾಲಿನ ಒಡಿಶಾ ಬ್ಯಾಚ್ ನ ಐಎಎಸ್ ಅಧಿಕಾರಿಯಾದ ವಿ.ಕೆ ಪಾಂಡಿಯನ್ 2002ರಲ್ಲಿ ಧರ್ಮಗಢ್ ಉಪ ಕಲೆಕ್ಟರ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ಅವರನ್ನು 2005 ರಲ್ಲಿ ಮಯೂರ್‌ಭಂಜ್ ನ ಜಿಲ್ಲಾದಿಕಾರಿಯಾಗಿ ನೇಮಿಸಲಾಯಿತು, ಮತ್ತು ನಂತರ 2007 ರಲ್ಲಿ ಅವರನ್ನು ಗಂಜಾಂನ ಕಲೆಕ್ಟರ್ ಆಗಿ ನೇಮಿಸಲಾಯಿತು. ಗಂಜಾಂನಲ್ಲಿ ಅವರ ಪೋಸ್ಟಿಂಗ್ ಸಮಯದಲ್ಲಿ ಅವರು ಮುಖ್ಯಮಂತ್ರಿಯ ವಿಶ್ವಾಸಾರ್ಹ ಅಧಿಕಾರಿಯಾದರು. 2011 ರಲ್ಲಿ ಮುಖ್ಯಮಂತ್ರಿಗಳ ಕಛೇರಿ ಸೇರಿದ ಪಾಂಡಿಯನ್ ಅವರು ನಂತರ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.