ಮೋದಿ ಚರಿಷ್ಮಾಕ್ಕೆ ಹೆದರಿ ‘ಆಯುಷ್ಮಾನ್ ಭಾರತ್ ಬೇಡ’ವೆಂದ ಪಟ್ನಾಯಕ್
Team Udayavani, Jan 29, 2019, 11:24 AM IST
ಕುಲಿಯಾ: ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಅಮಿತ್ ಶಾ ಅವರು ನವೀನ್ ಪಟ್ನಾಯಕ್ ನೇತೃತ್ವದ ಆಡಳಿತಾರೂಢ ಬಿಜು ಜನತಾದಳ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿವಿಧ ಯೋಜನೆಗಳಡಿಯಲ್ಲಿ ಕೇಂದ್ರ ಸರಕಾರದಿಂದ ಒಡಿಶಾಗೆ ಸಾಕಷ್ಟು ಹಣ ಬರುತ್ತಿದ್ದರೂ ಅವುಗಳನ್ನು ರಾಜ್ಯದ ಫಲಾನುಭವಿಗಳಿಗೆ ತಲುಪಿಸುವಲ್ಲಿ ಒಡಿಶಾ ಸರಕಾರ ವಿಫಲವಾಗಿದೆ ಎಂದು ಶಾ ಕಿಡಿಕಾರಿದ್ದಾರೆ.
ರಾಜ್ಯ ಸರಕಾರದ ಸೀಮಿತ ಮನಸ್ಥಿತಿಯಿಂದಾಗಿ ಕೇಂದ್ರ ಸರಕಾರದ ಯೋಜನೆಗಳು ಇಲ್ಲಿನ ಬಡಕುಟುಂಬಗಳಿಗೆ ಸಿಗದಂತಾಗಿದೆ ಎಂದವರು ಹೇಳಿದರು. ನರೇಂದ್ರ ಮೋದಿಯವರ ಚರಿಷ್ಮಾ ಒಡಿಶಾದಲ್ಲಿ ಹೆಚ್ಚಾಗಬಹುದು ಎಂಬ ಒಂದೇ ಒಂದು ಕಾರಣಕ್ಕಾಗಿ ಪಟ್ನಾಯಕ್ ಸರಕಾರವು ಆಯುಷ್ಮಾನ್ ಭಾರತ ಯೋಜನೆಗೆ ಸೇರ್ಪಡೆಗೊಳ್ಳಲು ನಿರಾಕರಿಸಿದೆ ಎಂಬ ವಿಷಯವನ್ನು ಶಾ ಅವರು ಸಭೆಯಲ್ಲಿ ಬಹಿರಂಗಗೊಳಿಸಿದರು. ಒಡಿಶಾದ ಜನರೆಲ್ಲರೂ ಶ್ರಮಜೀವಿಗಳು ಮತ್ತು ಈ ರಾಜ್ಯವೂ ಪ್ರಾಕೃತಿಕ ಸಂಪನ್ಮೂಲಗಳಿಂದ ಸಂಪದ್ಭರಿತವಾಗಿದೆ ಆದರೂ ರಾಜ್ಯವು ಹಿಂದುಳಿಯಲು ರಾಜ್ಯಸರಕಾರದ ನಿರಾಸಕ್ತಿಯೇ ಕಾರಣ ಎಂದವರು ದೂರಿದರು.
ಬುಡಕಟ್ಟು ಸುಮದಾಯ ಸಹಿತ ಎಲ್ಲಾ ವರ್ಗಗಳ ಜನಸಮುದಾಯಕ್ಕೆ ಬೇಕಾಗುವಂತಹ ಯೋಜನೆಗಳನ್ನು ಜಾರಿಗೊಳಿಸಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ‘ಮೋದಿಜಿಯವರ ನೇತೃತ್ವದಲ್ಲಿ ನಾವು ನವ ಒಡಿಶಾ ರೂಪುಗೊಳ್ಳುವಂತೆ ಮಾಡುತ್ತೇವೆ. ನಿರುದ್ಯೋಗ ರಹಿತ, ಉತ್ತಮ ಆರೋಗ್ಯ ಸೇವೆಗಳನ್ನು ಒಳಗೊಂಡಿರುವ ಮತ್ತು ಎಲ್ಲರೂ ಬಡತನ ರೇಖೆಗಿಂತ ಮೇಲಿರುವ ಆದರ್ಶ ಒಡಿಶಾ ನಿರ್ಮಾಣ ನಮ್ಮ ಧ್ಯೇಯವಾಗಿದೆ..’ ಎಂದು ಶಾ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.