ನಾನು ರಾಹುಲ್ ಗಾಂಧಿಯ ಸೈನಿಕ: ಕೈ ಗೆಲುವಿನ ಸಂಭ್ರಮದಲ್ಲಿ ಸಿಧು
Team Udayavani, Mar 11, 2017, 12:37 PM IST
ಅಮೃತ ಸರ : ಪಂಜಾಬ್‌ನಲ್ಲಿ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದ ಎನ್‌ಡಿಎ ಸರ್ಕಾರದ ಕುರಿತಾಗಿನ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಅಸ್ಥಿತ್ವವನ್ನು ಉಳಿಸಲು ಸಹಕಾರಿಯಾಗಿದ್ದು, ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದೆ.
ಗೆಲುವಿನ ಸಂಭ್ರಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಿಜೇತ ಅಭ್ಯರ್ಥಿ ನವಜೋತ್‌ಸಿಂಗ್ ಸಿಧು ‘ಇದು ಕಾಂಗ್ರೆಸ್‌ನ ಅಸ್ಥಿತ್ವದ ಪ್ರಶ್ನೆಯಾಗಿತ್ತು, ನಮ್ಮ ಪೇಟದ ಅಸ್ಥಿತ್ವದ ಪ್ರಶ್ನೆಯಾಗಿತ್ತು. ಗೆಲುವು ಪಂಜಾಬ್‌ನ ಕಾಂಗ್ರೆಸ್‌ನದ್ದು, ರಾಹುಲ್ ಗಾಂಧಿ, ಅಮರಿಂದರ್ ಸಿಂಗ್ ಅವರ ನಾಯಕತ್ವಕ್ಕೆ ಸಂದ ಜಯವಾಗಿದೆ’ ಎಂದರು.
‘ಸಂಭ್ರಮಾಚರಣೆ ಈಗ ನಡೆಸುವುದಲ್ಲ 6 ತಿಂಗಳ ಬಳಿಕ ನಮ್ಮ ಸರ್ಕಾರದ ಕೆಲಸಗಳನ್ನು ನಿರ್ಣಯಿಸಿ ಆ ಬಳಿಕ ಸಂಭ್ರಮಾಚರಣೆ ನಡೆಸುವ’ ಎಂದರು.
ಎಂದಿನಂತೆ ಮಾತಿನ ಮೂಲಕ ಮೋಡಿ ಮಾಡಿದ ಸಿಧು’ ನಮ್ಮ ನೀತಿ, ನಿಯತ್ತಿಗೆ ಗೆಲುವಾಗಿದೆ. ಕೆಲವರು (ಕೇಜ್ರಿವಾಲ್ ಹೆಸರು ಉಲ್ಲೇಖ ಮಾಡಿ) ಅವರಿಗಾಗಿ ಬಂದರು.ಅವರಿಗೆ ಗೆಲುವು ಸಿಗಲಿಲ್ಲ, ನಾವು ಪಂಜಾಬ್‌ಗಾಗಿ ಹೋರಾಟ ಮಾಡಿದೆವು ಉಳಿದುಕೊಂಡೆವು’ ಎಂದರು.
ಅಮೃತಸರ ಪೂರ್ವ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ ಸಿಧು ‘ನಾನು ರಾಹುಲ್ ಗಾಂಧಿ ಅವರ ಸೈನಿಕ. ನನ್ನ, ಪತ್ನಿಯ ಸ್ಥಾನಮಾನದ ಬಗ್ಗೆ ಚಿಂತಿಸಿಲ್ಲ’ ಎಂದರು.
117 ಸ್ಥಾನಗಳ ಪೈಕಿ 73 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡು ಪ್ರಚಂಡ ಬಹುಮತದತ್ತ ಕಾಂಗ್ರೆಸ್ ಮುನ್ನುಗ್ಗುತ್ತಿದ್ದು, ಈ ಹಿಂದೆ ಬಿಂಬಿತವಾಗಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಗೇರಲಿದ್ದಾರೆ.
ಬಿಜೆಪಿ ತೊರೆದಿದ್ದ ಸಿಧು ಸ್ವಂತ ಪಕ್ಷವೊಂದನ್ನು ಕಟ್ಟಿ ಚುನಾವಣೆ ಘೋಷಣೆಯಾಗುವ 2 ತಿಂಗಳ ಮುಂಚೆ ಬಿಜೆಪಿ ಸೇರ್ಪಡೆಯಾಗಿದ್ದರು.
ಸಿಧುಗೆ ಅಮರೀಂದರ್ ಸಿಂಗ್ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಅಧಿಕಾರಕ್ಕೇರಲು ಶತಪ್ರಯತ್ನ ನಡೆಸಿದ್ದ ಆಪ್ 2 ನೇ ಸ್ಥಾನ ಪಡೆದುಕೊಂಡಿದ್ದು, ಶಿರೋಮಣಿ ಅಕಾಲಿದಳ -ಬಿಜೆಪಿ ಮೈತ್ರಿಕೂಟ ಕೇವಲ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಪ್ 25 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.