ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ
Team Udayavani, Dec 4, 2018, 10:11 AM IST
ಹೊಸದಿಲ್ಲಿ: ಎರಡು ದಿನಗಳ ಹಿಂದಷ್ಟೇ 3,000 ಕೋಟಿ ರೂ.ಗಳ ಶಸ್ತ್ರಾಸ್ತ್ರ ಖರೀದಿ ಹಾಗೂ 7 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಷ್ಯಾದ ಎರಡು ಯುದ್ಧ ನೌಕೆಗಳನ್ನು ಖರೀದಿಸಲು ಸಮ್ಮತಿಸಿದ್ದ ಕೇಂದ್ರ ಸರಕಾರವು ನೌಕಾಪಡೆಯನ್ನು ಮತ್ತಷ್ಟು ಆಧುನೀಕರಣಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ 56 ಸಮರ ನೌಕೆಗಳು ಹಾಗೂ ಜಲಾಂತರ್ಗಾಮಿಗಳು ನೌಕಾಪಡೆಗೆ ಶೀಘ್ರವೇ ಸೇರ್ಪಡೆಯಾಗಲಿವೆ. ಜತೆಗೆ ಈಗಾಗಲೇ ಯುದ್ಧ ವಿಮಾನ ಹೊತ್ತು ಸಾಗುವ ಸಾಮರ್ಥ್ಯವಿರುವ ನೌಕೆಗಳ ಜತೆಗೆ ಅದೇ ಮಾದರಿಯ ಮತ್ತೂಂದು ನೌಕೆಯನ್ನು ಖರೀದಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ, ‘ನೌಕಾಪಡೆಗಾಗಿ ಈಗಾಗಲೇ 32 ಯುದ್ಧ ನೌಕೆಗಳು ನಿರ್ಮಾಣವಾಗುತ್ತಿವೆ. ಹೊಸ 56 ಯುದ್ಧ ನೌಕೆಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಭಾರತದ ಸಾಗರ ಗಡಿಯೊಳಗೆ ಅಂದಾಜು 2.5 ಲಕ್ಷ ಮೀನುಗಾರರ ದೋಣಿಗಳನ್ನು ಸ್ವಯಂಚಾಲಿತವಾಗಿ ಗುರುತಿಸಬಲ್ಲ ಟ್ರಾನ್ಸ್‌ಪಾಂಡರ್‌ಗಳನ್ನು ಅಳವಡಿಸುವ ಕಾರ್ಯ ಶುರುವಾಗಿದೆ ಎಂದಿದ್ದಾರೆ.
ವೈಫಲ್ಯವಲ್ಲ
ಅಂಡಮಾನ್ ಸಮೀಪದ ಸೆಂಟಿನೆಲ್ ದ್ವೀಪದ ಆದಿವಾಸಿಗಳಿಂದ ಇತ್ತೀಚೆಗೆ ಜಾನ್ ಅಲೆನ್ ಚೌ ಎಂಬ ಅಮೆರಿಕದ ಪ್ರಜೆ ಹತ್ಯೆಗೀಡಾದ ಪ್ರಕರಣಕ್ಕೆ ನೌಕಾ ಭದ್ರತೆಯಲ್ಲಾದ ವೈಫಲ್ಯ ಕಾರಣವಲ್ಲ ಎಂದು ಲಾಂಬಾ ಸ್ಪಷ್ಟನೆ ನೀಡಿದ್ದಾರೆ.
ಗಂಭೀರ ಕಾರ್ಯಕ್ರಮಕ್ಕೆ ಐಎನ್‌ಎಸ್ ವಿರಾಟ್
59 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತಗೊಂಡಿರುವ ಐಎನ್‌ಎಸ್ ವಿರಾಟ್ ಯುದ್ಧನೌಕೆಯನ್ನು ಮುಂದೆ ಘನತೆಯ ಕಾರ್ಯಕ್ರಮಗಳಿಗಾಗಿ ಮಾತ್ರವೇ ಬಳಸಲು ತೀರ್ಮಾನಿಸಲಾಗಿದೆ ಎಂದು ವೈಸ್ ಅಡ್ಮಿರಲ್ ಗಿರೀಶ್ ಲೂಥ್ರಾ ತಿಳಿಸಿದ್ದಾರೆ. ವಿರಾಟ್ ನಿವೃತ್ತಿ ಅನಂತರ ಅನೇಕ ರಾಜ್ಯಗಳು ಅದನ್ನು ತಮ್ಮ ಪ್ರವಾಸೋದ್ಯಮದ ಭಾಗವಾಗಿ ಅಥವಾ ಮ್ಯೂಸಿಯಂ ಆಗಿ ಪರಿವರ್ತಿಸಲು ಅವಕಾಶ ನೀಡುವಂತೆ ಕೋರಿವೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ ಘನತೆಯುಕ್ತ ಚಟುವಟಿಕೆಗಳನ್ನು ನಡೆಸುವುದಿದ್ದರೆ ಮಾತ್ರ ಅನುಮತಿ ನೀಡಲಾಗುತ್ತದೆ ಎಂದವರು ಹೇಳಿದರು.
ಹಿಂದೂ ಮಹಾಸಾಗರದಲ್ಲಿ ಚೀನದ ನೌಕಾಪಡೆ ಆಗಾಗ ಕಾಣಿಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಭಾರತೀಯ ನೌಕಾಪಡೆಗೆ ಈ ಬಗ್ಗೆ ಮಾಹಿತಿಯಿದ್ದು, ಅವರ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ.
– ಎನ್.ಎಂ. ಅಲೋಕ್ ಭಟ್ನಾಗರ್, ನೌಕಾಪಡೆಯ ರಿಯರ್ ಅಡ್ಮಿರಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.