![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 12, 2022, 2:03 PM IST
ಪಣಜಿ : ನೌಕಾಪಡೆಗೆ ಸೇರಿದ ಮಿಗ್-29ಕೆ ವಿಮಾನ ತಾಂತ್ರಿಕ ಅಡಚಣೆಯನ್ನು ಪಡೆದು ಸಮುದ್ರದಲ್ಲಿ ಪತಣ ಹೊಂದಿದ ಘಟನೆ ಬುಧವಾರ ನಡೆದಿದೆ. ಅದೃಷ್ಟವಷಾತ್ ಪೈಲಟ್ ಸುರಕ್ಷಿತವಾಗಿ ಹೊರಹಾರಿದ್ದು ಪಾರಾಗಿದ್ದಾರೆ.
ಗೋವಾದಿಂದ ಸಮುದ್ರದ ಮೇಲೆ ದಿನನಿತ್ಯದ ಹಾರಾಟ ನಡೆಸುತ್ತಿದ್ದ ವಿಮಾನವು ಬೇಸ್‌ಗೆ ಹಿಂದಿರುಗುವಾಗ ತಾಂತ್ರಿಕ ದೋಷವನ್ನು ಎದುರಿಸಿ ಅವಘಡ ವಾಗಿದೆ. ಪೈಲಟ್ ಸುರಕ್ಷಿತವಾಗಿ ಹೊರ ಹಾರಿದ್ದು, ತ್ವರಿತವಾಗಿ ಚೇತರಿಸಿಕೊಂಡಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ತೊಂದರೆಯನ್ನು ಗಮನಿಸಿದ ನಂತರ, ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲರ್ (ATC) ಗೆ ಸಮಸ್ಯೆಯನ್ನು ವರದಿ ಮಾಡಿದರು, ತತ್ ಕ್ಷಣ ನೌಕಾ ವಾಯುನೆಲೆಯಿಂದ ಮುಂಗಡ ಲಘು ಹೆಲಿಕಾಪ್ಟರ್ (ALH) ಅನ್ನು ರಕ್ಷಣೆಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಕಾರಣವೇನು ಎಂದು ತನಿಖೆ ಮಾಡಲು ನೌಕಾಪಡೆ ಆದೇಶಿಸಿದೆ.
MiG-29K ಯುದ್ಧ ವಿಮಾನಗಳು ಐಎನ್ ಎಸ್ ವಿಕ್ರಮಾದಿತ್ಯ ಮತ್ತು ಐಎನ್ ಎಸ್ ವಿಕ್ರಾಂತ್ ಮೂಲಕ ಹಾರಾಟ ನಡೆಸುತ್ತಿದ್ದು. ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಿಂದಲೂ ಕಾರ್ಯನಿರ್ವಹಿಸುತ್ತವೆ. ಭಾರತೀಯ ನೌಕಾಪಡೆಯು ಸುಮಾರು 40 MiG-29K ಜೆಟ್‌ಗಳನ್ನು ಹೊಂದಿದೆ.
You seem to have an Ad Blocker on.
To continue reading, please turn it off or whitelist Udayavani.