ನಕ್ಸಲರ ಬಳಿ ರ್‍ಯಾಂಬೋ ಆ್ಯರೋ
Team Udayavani, May 7, 2018, 9:00 AM IST
ಹೊಸದಿಲ್ಲಿ: ನಕ್ಸಲೀಯರು ತಮ್ಮ ಆಯುಧಗಳ ಕೋಠಿಗೆ ಸುಧಾರಿತ ಹಾಗೂ ಅಪಾಯಕಾರಿ ಅಸ್ತ್ರಗಳನ್ನು ಸೇರಿಸಿಕೊಂಡಿರುವ ಅಂಶ ಬಯಲಾಗಿದ್ದು, ಇದು ಭದ್ರತಾ ಪಡೆಗಳಿಗೆ ಹೊಸ ಸವಾಲಾಗಿ ಪರಿಣಮಿಸಿದೆ. ‘ರ್‍ಯಾಂಬೋ ಆ್ಯರೋಸ್’ ಮತ್ತು ರಾಕೆಟ್ ಬಾಂಬ್ ಗಳಂಥ ವಿನಾಶಕಾರಿ ಶಸ್ತ್ರಾಸ್ತ್ರಗಳು ಈಗ ನಕ್ಸಲರ ಬಳಿಯಿವೆ. ಅಷ್ಟೇ ಅಲ್ಲ, ಸುಧಾರಿತ ಸ್ಫೋಟಕಗಳು (ಐಇಡಿ), ಕಚ್ಚಾ ಬಾಂಬ್ ಗಳನ್ನು ಬಚ್ಚಿಡಲು ಹೊಸ ವಿಧಾನವನ್ನೂ ಕೆಂಪು ಉಗ್ರರು ಕಂಡುಕೊಂಡಿದ್ದಾರೆ. ಅದರಂತೆ, ಇವರು ಸ್ಫೋಟಕಗಳನ್ನು ಪ್ರಾಣಿಗಳ ಮಲದ ಅಡಿ ಅಡಗಿಸಿಡುತ್ತಾರೆ. ಇದರಿಂದಾಗಿ, ಭದ್ರತಾ ಸಿಬಂದಿಯ ಶ್ವಾನದಳಕ್ಕೂ ಅದನ್ನು ಪತ್ತೆ ಮಾಡಲು ಸಾಧ್ಯವಿಲ್ಲ.
ಸುಧಾರಿತ ಸ್ಫೋಟಕಗಳಿಗೆ ಸಂಬಂಧಿಸಿದ ಭದ್ರತಾ ಪಡೆಗಳ ಜಂಟಿ ಸಮಿತಿ ಸಿದ್ಧಪಡಿಸಿದ ವರದಿಯಲ್ಲಿ ಈ ಅಂಶಗಳು ಉಲ್ಲೇಖಗೊಂಡಿವೆ. 2017ರ ಮೊದಲ ಭಾಗದಲ್ಲಿ ಜಾರ್ಖಂಡ್ ಮತ್ತು ಛತ್ತೀಸ್‌ಗಢದಲ್ಲಿ ನಕ್ಸಲರು ಹುದುಗಿಸಿಟ್ಟ ಐಇಡಿ ಸ್ಫೋಟಗೊಂಡು ಸಿಆರ್‌ಪಿಎಫ್ನ ಶ್ವಾನಗಳು ಅಸುನೀಗಿದ್ದವು. ಪ್ರಾಣಿಗಳ ಮಲದ ಕೆಳಗೆ ಕಚ್ಚಾ ಬಾಂಬ್ ಇಟ್ಟಿದ್ದರಿಂದಾಗಿ ಶ್ವಾನಗಳಿಗೆ ಅವುಗಳನ್ನು ಪತ್ತೆಮಾಡಲು ಸಾಧ್ಯವಾಗಿರಲಿಲ್ಲ. ಮಲದ ವಾಸನೆ ಬಡಿಯುವುದರಿಂದಾಗಿ ಅಲ್ಲಿ ಬಾಂಬ್ ಇರುವುದು ಶ್ವಾನಗಳಿಗೆ ಅರಿವಾಗುವುದಿಲ್ಲ.
ಇದರ ಜತೆಗೆ ‘ರ್‍ಯಾಂಬೋ ಆ್ಯರೋ’ಗಳನ್ನೂ ನಕ್ಸಲರು ಹೊಂದಿದ್ದಾರೆ. ಈ ಬಾಣದ ತುದಿಗೆ ಅತ್ಯಂತ ಕಳಪೆ ದರ್ಜೆಯ ಪಟಾಕಿ ತಯಾರಿಸಲು ಬಳಸಲಾಗುವ ಪೌಡರ್ ಅನ್ನು ಉಪಯೋಗಿಸಲಾಗುತ್ತದೆ. ಬಾಣ ಗುರಿ ಮುಟ್ಟಿದ ಬಳಿಕ ಅದು ಸ್ಫೋಟಗೊಳ್ಳುತ್ತದೆ. ಮತ್ತೂಂದು ಪ್ರಭಾವಿ ಆಯುಧವೆಂದರೆ ರಾಕೆಟ್ ಬಾಂಬ್. ಶಂಕುವಿನಾಕಾರದ ಮೂಗಿನ ಭಾಗದಲ್ಲಿ ಸ್ಫೋಟಕಗಳು ತುಂಬಿರುತ್ತವೆ. ಕೊಳವೆಯಾಕಾರದ ಬಾಲದಿಂದಾಗಿ ನಿಗದಿತ ಸ್ಥಳದಿಂದ ಛಿಮ್ಮಿದ ಬಳಿಕ ಹೆಚ್ಚಿನ ವೇಗದಲ್ಲಿ ಗುರಿಯತ್ತ ಧಾವಿಸಲು ಸಾಧ್ಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.