ದೆಹಲಿ ಸಮೀಪದ ಹೆದ್ದಾರಿ ಮೇಲೆಯೇ ಲ್ಯಾಂಡ್ ಆದ ಎನ್ ಸಿಸಿ ತರಬೇತಿ ವಿಮಾನ
ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಲಘು ವಿಮಾನವನ್ನು ದೆಹಲಿ ಸಮೀಪದ ಹೆದ್ದಾರಿ ಮೇಲೆಯೇ ತುರ್ತು ಲ್ಯಾಂಡ್ ಮಾಡಲಾಗಿದೆ
Team Udayavani, Jan 23, 2020, 3:08 PM IST
ನವದೆಹಲಿ: ಎನ್ ಸಿಸಿಯ ಲಘು ತರಬೇತಿ ವಿಮಾನವೊಂದು ಗಾಜಿಯಾಬಾದ್ ನ ಸದಾರ್ಪುರ್ ಗ್ರಾಮದ ಸಮೀಪದ ಪೆರಿಫೆರಲ್ ಎಕ್ಸ್ ಪ್ರೆಸ್ ರಸ್ತೆ ಬಳಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಗುರುವಾರ ನಡೆದಿದೆ ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಲಘು ವಿಮಾನವನ್ನು ದೆಹಲಿ ಸಮೀಪದ ಹೆದ್ದಾರಿ ಮೇಲೆಯೇ ತುರ್ತು ಲ್ಯಾಂಡ್ ಮಾಡಲಾಗಿದೆ ಎಂದು ಹೇಳಿದೆ.
ಲಘು ವಿಮಾನದ ಮುಂಭಾಗದಲ್ಲಿ ಎನ್ ಸಿಸಿ(ನ್ಯಾಷನಲ್ ಕೆಡೆಟ್ ಕಾರ್ಪ್ಸ್)ಯ ಚಿಹ್ನೆ ಇದ್ದಿರುವುದಾಗಿ ತಿಳಿಸಿದೆ. ಲಘು ವಿಮಾನದ ಒಂದು ರೆಕ್ಕೆ ಜಖಂಗೊಂಡಿರುವುದಾಗಿ ವರದಿ ಹೇಳಿದೆ. ವಿಮಾನದಲ್ಲಿದ್ದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವರದಿ ವಿವರಿಸಿದೆ.
Ghaziabad: An aircraft made an emergency landing at Eastern Peripheral Expressway near Sadarpur village today, after it faced a technical problem. pic.twitter.com/ALRTCquHGA
— ANI UP (@ANINewsUP) January 23, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.