NCERT; ಪಠ್ಯ ಪುಸ್ತಕಗಳಲ್ಲಿ ಇಂಡಿಯಾ ಜತೆಗೆ ಭಾರತ ಪದ ಬಳಕೆ
ಇಂಡಿಯಾ ಬದಲಿಗೆ ಭಾರತ ಪದ ಬಳಕೆಗೆ ಶಿಫಾರಸು ಮಾಡಿದ್ದ ಸಮಿತಿ
Team Udayavani, Jun 18, 2024, 6:12 AM IST
ಹೊಸದಿಲ್ಲಿ: ಪಠ್ಯ ಪುಸ್ತಕಗಳಲ್ಲಿ ಇಂಡಿಯಾ ಮತ್ತು ಭಾರತ ಎರಡೂ ಪದಗಳನ್ನು ಬಳಸಲಾಗುತ್ತದೆ. ಸಂವಿಧಾನವು ಏನು ಹೇಳುತ್ತದೆಯೋ ಅದನ್ನು ಎತ್ತಿ ಹಿಡಿಯಲಾಗುತ್ತದೆ ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ) ಹೇಳಿದೆ.
ಪಠ್ಯ ಪುಸ್ತಕಗಳಲ್ಲಿ ಭಾರತ ಮತ್ತು ಇಂಡಿಯಾ ಪದಗಳನ್ನು ಪರಸ್ಪರ ಪರ್ಯಾಯವಾಗಿ ಬಳಸುತ್ತೇವೆ. ಯಾವ ಸಂದರ್ಭದಲ್ಲಿ ಯಾವ ಪದ ಸೂಕ್ತವಾಗುತ್ತದೆಯೋ ಆ ಪದವನ್ನು ಬಳಸುತ್ತೇವೆ. ಈಗಾಗಲೇ ಈ ರೀತಿಯ ಬಳಿಕ ಪಠ್ಯ ಪುಸ್ತಕಗಳಲ್ಲಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಹೇಳಿದ್ದಾರೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ನಾವು ಇಂಡಿಯಾ ಬಳಸಬಹುದು. ಅದರಲ್ಲೇನು ಸಮಸ್ಯೆ ಇದೆ? ಈ ಕುರಿತಾದ ಚರ್ಚೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ. ಇದೊಂದು ಉಪಯೋಗಕ್ಕೆ ಬಾರದ ಚರ್ಚೆ ಎಂದು ಹೇಳಿದರು.
ಎನ್‌ಸಿಇಆರ್‌ಟಿ ರಚಿಸಿದ್ದ ಸಾಮಾಜಿಕ ವಿಜ್ಞಾನಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಮಿತಿಯು ಇಂಡಿಯಾ ಬದಲಿಗೆ ಭಾರತ ಪದ ಬಳಕೆಗೆ ಕಳೆದ ವರ್ಷ ಶಿಫಾರಸು ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.