![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Apr 23, 2023, 8:20 AM IST
ಮುಂಬಯಿ: “ನಾನು ನೂರು ಪ್ರತಿಶತ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಲು ಬಯಸುತ್ತೇನೆ. ಅದಕ್ಕಾಗಿ 2024ರ ವಿಧಾನಸಣೆ ಚುನಾವಣೆವರೆಗೂ ಕಾಯಬೇಕಿಲ್ಲ, ಈಗಲೂ ಸಿಎಂ ಆಗಬಹುದು’ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಪ್ರಮುಖ ನಾಯಕ ಅಜಿತ್ ಪವಾರ್ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಅಜಿತ್ ಪವಾರ್ ನೇತೃತ್ವದ ಬಣ ಎನ್‌ಸಿಪಿ ತೊರೆದು ಬಿಜೆಪಿ ಸೇರ್ಪಡೆ ಗೊಳ್ಳುತ್ತದೆ ಎನ್ನುವ ಮಾತು ಕೇಳಿಬಂದಿದೆ. ಹೀಗಿರುವಾಗಲೇ ಅಜಿತ್ ನೀಡಿರುವ ಹೇಳಿಕೆ ಎನ್‌ಸಿಪಿ ಒಡಕಿಗೆ ಪುಷ್ಟಿ ನೀಡುವಂತಿದೆ. ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಪವಾರ್‌ಗೆ ಪತ್ರಕರ್ತರು, ಮುಂದಿನ ಚುನಾವಣೆಯಲ್ಲಾದರೂ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೇರುವ ಸಾಧ್ಯತೆಗಳಿವೆಯೇ ಎಂದು ಪ್ರಶ್ನಿಸಿದರು. ಈ ವೇಳೆ ಅಜಿತ್ ಮೇಲ್ಕಂಡ ಹೇಳಿಕೆ ನೀಡಿದ್ದಾರೆ. ಹಾಗಂತ ಈ ಹೇಳಿಕೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಅವರು ಯಾವುದೇ ವಿವರಣೆ ನೀಡಿಲ್ಲ.
ಮತ್ತೂಂದೆಡೆ ಶಿವಸೇನೆ (ಉದ್ಧವ್ ಠಾಕ್ರೆ ಬಣದ) ಸಂಜಯ್ ರಾವುತ್ ಕೂಡ ಅಜಿತ್ ಹೇಳಿಕೆ ಸಮರ್ಥಿಸಿದ್ದು, ಸಿಎಂ ಆಗಲು ಯಾರಿಗೆ ತಾನೇ ಒಲವಿರುವುದಿಲ್ಲ? ಈಗ ಅರ್ಹತೆ ಇಲ್ಲದವರೇ ಸಿಎಂ ಆಗಿರುವಾಗ ಅಜಿತ್ ಅವರು ಆ ಸ್ಥಾನಕ್ಕೇರುವ ಆಶಯ ವ್ಯಕ್ತ ಪಡಿಸಿದ್ದು ತಪ್ಪಲ್ಲ. ಅವರಿಗೆ ರಾಜಕೀಯ ಅನುಭವಗಳೂ ಇದ್ದು, ಅವರು ಸಿಎಂ ಆಗಲು ಯೋಗ್ಯ ವ್ಯಕ್ತಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಏತನ್ಮಧ್ಯೆ ಕರ್ನಾಟಕದಲ್ಲಿ ಎನ್‌ಸಿಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದಕ್ಕೂ ಮಿಗಿಲಾಗಿ ಅದರ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಜಿತ್ ಅವರನ್ನು ಹೊರಗಿಡಲಾಗಿದೆ.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
You seem to have an Ad Blocker on.
To continue reading, please turn it off or whitelist Udayavani.