ಬಿಹಾರ ಎನ್‌ಡಿಎ ಸೀಟು ಹಂಚಿಕೆ ಫೈನಲ್:40 ರಲ್ಲಿ ಬಿಜೆಪಿಗೆ 20 ಮಾತ್ರ
Team Udayavani, Aug 30, 2018, 3:25 PM IST
ಪಾಟ್ನಾ: ಲೋಕಸಭಾ ಚುನಾವಣೆಗಾಗಿ ಬಿಹಾರ ಎನ್‌ಡಿಎ ಮೈತ್ರಿ ಕೂಟದ ನಾಲ್ಕು ಪಕ್ಷಗಳ ನಡುವೆ ಸೀಟು ಹಂಚಿಕೆ ಅಂತ್ಯವಾಗಿದ್ದು ,40 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಜೆಡಿಯು ನಾಯಕ,ಬಿಹಾರ ಸಿಎಂ ನಿತಿಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸೀಟು ಹಂಚಿಕೆ ಅಂತ್ಯಗೊಳಿಸಲಾಗಿದ್ದು, ಅಭ್ಯರ್ಥಿಗಳ ಆಯ್ಕೆ ಇನ್ನಷ್ಟೇ ನಡೆಯಬೇಕಾಗಿದೆ ಎಂದು ತಿಳಿದು ಬಂದಿದೆ.
ಸಂಘಟಿತ ಶಕ್ತಿಯಿಂದ ಎಲ್ಲಾ 40 ಸ್ಥಾನಗಳನ್ನೂ ಗೆಲ್ಲಲು ರಣತಂತ್ರ ಹೂಡಿರುವ ಅಮಿತ್ ಶಾ ಅವರು ಜೆಡಿಯುಗೆ 12 ಸ್ಥಾನಗಳು ,ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್‌ಜೆಪಿಗೆ 6 ಸ್ಥಾನಗಳು ಮತ್ತು ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಸ್‌ಪಿಗೆ 2 ಸ್ಥಾನಗಳನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
2014 ರಲ್ಲಿ 22 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 2 ಸ್ಥಾನಗಳನ್ನು ಮೈತ್ರಿ ಧರ್ಮಕ್ಕೆ ಸರಿಯಾಗಿ ಕಳೆದುಕೊಳ್ಳಬೇಕಾಗಿದೆ. ಕೆಲ ಹಾಲಿ ಸಂಸದರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಗುವ ಅನುಮಾನಗಳಿವೆ ಎಂದು ವರದಿಯಾಗಿದೆ.
ಇನ್ನೊಂದೆಡೆ ಆರ್‌ಜೆಡಿ -ಕಾಂಗ್ರೆಸ್ ಮೈತ್ರಿಕೂಟ ಎನ್‌ಡಿಎ ಮೈತ್ರಿಕೂಟಕ್ಕೆ ಸೆಡ್ಡು ಹೊಡೆಯಲು ರಣತಂತ್ರ ಹೂಡಿದೆ.
ಬಿಜೆಪಿ 2014 ರಲ್ಲಿ 22 ಸ್ಥಾನಗಳು,ಮೈತ್ರಿ ಪಕ್ಷಗಳಾದ ಎಲ್‌ಜೆಪಿ 6 , ಆರ್‌ಎಲ್‌ಎಸ್‌ಪಿ 3 ಸೇರಿ 31 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಬಿಜೆಪಿಯಿಂದ ದೂರ ಉಳಿದು ಭಾರೀ ಹೊಡೆತಕ್ಕೆ ಗುರಿಯಾಗಿದ್ದ ಜೆಡಿಯು ಕೇವಲ 2 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಆರ್‌ಜೆಡಿ 4, ಎನ್‌ಸಿಪಿ 1, ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದಿತ್ತು.
ಮೈತ್ರಿ ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲೂ ಮುಂದುವರಿಯಲಿದ್ದು, ಬಿಜೆಪಿ ತಲಾ 1 ಲೋಕಸಭಾ ಸ್ಥಾನವನ್ನು ಜೆಡಿಯುಗೆ ಬಿಟ್ಟು ಕೊಡುವ ಬಗ್ಗೆ ಮಾತುಕತೆಗಳು ನಡೆದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indore; ಭಿಕ್ಷುಕರ ಬಗ್ಗೆ ಮಾಹಿತಿ ಹಂಚಿಕೊಂಡರೆ ನಾಗರಿಕರಿಗೆ 1,000 ರೂ. ಬಹುಮಾನ!
Anmol Bishnoi; ಅಪರಾಧ ಜಾಲದ ಪ್ರಾಬಲ್ಯ ಸ್ಥಾಪಿಸಲು ಬಾಬಾ ಸಿದ್ದಿಕ್ ಹ*ತ್ಯೆ!
Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್
Mahakumbh Mela: ಪ್ರಯಾಗ್ ರಾಜ್ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು ಬೆದರಿಕೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Indore; ಭಿಕ್ಷುಕರ ಬಗ್ಗೆ ಮಾಹಿತಿ ಹಂಚಿಕೊಂಡರೆ ನಾಗರಿಕರಿಗೆ 1,000 ರೂ. ಬಹುಮಾನ!
Anmol Bishnoi; ಅಪರಾಧ ಜಾಲದ ಪ್ರಾಬಲ್ಯ ಸ್ಥಾಪಿಸಲು ಬಾಬಾ ಸಿದ್ದಿಕ್ ಹ*ತ್ಯೆ!
Ullala: ಲಾರಿ-ಬೈಕ್ ಅಪಘಾತ: ಮೆಡಿಕಲ್ ಅಂಗಡಿ ಮಾಲೀಕ ದಾರುಣ ಮೃತ್ಯು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.