Election Result: NDA “ಉಳಿಯಿತು’, INDIA “ಬೆಳೆಯಿತು’! ಬಿಜೆಪಿ ಸ್ಥಾನ ಕುಸಿತ

ಮೋದಿ 3ನೇ ಬಾರಿ ಪ್ರಧಾನಿಯಾಗಲು ಮಿತ್ರಪಕ್ಷಗಳ ಬೆಂಬಲ ಅನಿವಾರ್ಯ

Team Udayavani, Jun 5, 2024, 6:30 AM IST

Election Result: NDA “ಉಳಿಯಿತು’, INDIA “ಬೆಳೆಯಿತು’! ಬಿಜೆಪಿ ಸ್ಥಾನ ಕುಸಿತ

ನವದೆಹಲಿ: ಬರೋಬ್ಬರಿ 82 ದಿನಗಳ ಕಾಲ ನಡೆದ 2024ರ ಲೋಕಸಭಾ ಚುನಾವಣಾ ಫ‌ಲಿತಾಂಶದ ಕುತೂಹಲಕ್ಕೆ ಮಂಗಳವಾರ ತೆರೆಬಿದ್ದಿದೆ. ಎನ್‌ಡಿಎ ಕೂಟ ನಿರೀಕ್ಷೆಯಂತೆಯೇ ಬಹುಮತ ಪಡೆದು ಅಧಿಕಾರಕ್ಕೇರುವ ಅವಕಾಶ ಪಡೆದಿದೆ. ಆದರೆ ಅದು ಆರಂಭದಲ್ಲಿ ಹೇಳಿಕೊಂಡಿದ್ದಂತೆ 400 ಸ್ಥಾನಗಳಿರಲಿ, 300 ಸ್ಥಾನಗಳನ್ನೂ ದಾಟಲಿಲ್ಲ. ಎಲ್ಲ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ಇಂಡಿಯಾ ಮೈತ್ರಿಕೂಟ ಭರ್ಜರಿ ಸಾಧನೆ ಮಾಡಿದೆ. ಆದರೆ ಅದು ಹೇಳಿಕೊಂಡಿದ್ದಂತೆ 295 ಸ್ಥಾನ ಪಡೆಯಲು ವಿಫ‌ಲವಾಗಿದೆ. ಪ್ರಧಾನಿ ಮೋದಿ 3ನೇ ಬಾರಿಗೆ ಪ್ರಧಾನಿಯಾಗುವ ಸಿದ್ಧತೆಯಲ್ಲಿದ್ದರೂ, ಹಿಂದಿನೆರಡು ಅವಧಿಗಳಂತೆ ಈ ಬಾರಿ ಬಿಜೆಪಿಗೆ ಸ್ವತಂತ್ರ ಬಹುಮತ ಲಭಿಸಿಲ್ಲ. ಹೀಗಾಗಿ ಮಿತ್ರಪಕ್ಷಗಳನ್ನು ಅವಲಂಬಿಸಬೇಕಾಗಿದೆ. ಕಡೆಯ ಹಂತದಲ್ಲಿ ಲೆಕ್ಕಾಚಾರಗಳು ಹೇಗೆ ಬೇಕಾದರೂ ಬದಲಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಕುಸಿದ ಎನ್‌ಡಿಎ, ಪುಟಿದೆದ್ದ ಇಂಡಿಯಾ ಕೂಟ:
ಎನ್‌ಡಿಎ ಬಹುಮತ ಪಡೆದಿದ್ದರೂ, ಸಾಮಾನ್ಯ ಸಾಧನೆ ಮಾಡಿದೆ. ಆರಂಭದಲ್ಲಿ ಅಭಿವೃದ್ಧಿಯನ್ನೇ ಪ್ರಧಾನವಾಗಿ ಪ್ರಸ್ತಾಪಿಸುತ್ತಿದ್ದ ಮೋದಿ, ಇದ್ದಕ್ಕಿದ್ದಂತೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು. ಇದರಿಂದ ಮುಸ್ಲಿಮ್‌ ಮತಗಳು ಸಂಪೂರ್ಣವಾಗಿ ಇಂಡಿಯಾ ಕೂಟದ ಪರ ವಾಲಿದವು ಎನ್ನಲಾಗಿದೆ. ಇನ್ನು ಸ್ಥಾನ ಹಂಚಿಕೆಯ ವಿಚಾರದಲ್ಲಿ ಇಂಡಿಯಾ ಮಿತ್ರಕೂಟ ಪಕ್ಕಾ ಲೆಕ್ಕಾಚಾರ ಮಾಡಿ, ಸ್ಥಳೀಯವಾಗಿ ಪ್ರಬಲವಾಗಿದ್ದ ಪಕ್ಷಗಳಿಗೆ ಆದ್ಯತೆ ನೀಡಿದ್ದು ವರವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಮಾದರಿಯಲ್ಲೇ ಕಾಂಗ್ರೆಸ್‌ ಘೋಷಿಸಿದ್ದ ನ್ಯಾಯಯೋಜನೆಗಳು ಅದಕ್ಕೆ ನೆರವಾದವು. ಇದರ ಪರಿಣಾಮ ಎನ್‌ಡಿಎ ಸ್ಥಾನ ಕುಸಿದರೆ, ಇಂಡಿಯಾ ಕೂಟದ ಸ್ಥಾನಗಳು ದೊಡ್ಡ ಪ್ರಮಾಣದಲ್ಲಿ ಏರಿದವು.

ಎನ್‌ಡಿಎಗೆ ಅದರಲ್ಲೂ ಬಿಜೆಪಿಗೆ ಹೊಡೆತ ನೀಡಿದ್ದು ಉತ್ತರಪ್ರದೇಶ, ಮಹಾರಾಷ್ಟ್ರ, ಪ.ಬಂಗಾಳಗಳು. ಗರಿಷ್ಠ ಲೋಕಸಭಾ ಸ್ಥಾನಗಳಿರುವ ಈ ರಾಜ್ಯಗಳಲ್ಲಿ ಬಿಜೆಪಿ ಈ ಬಾರಿ ಕಳಪೆ ಸಾಧನೆ ಮಾಡಿದೆ. 2019ರಲ್ಲಿ ಎನ್‌ಡಿಎ ಉತ್ತರಪ್ರದೇಶದಲ್ಲಿ 62, ಮಹಾರಾಷ óದಲ್ಲಿ 23, ಪ.ಬಂಗಾಳದಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು. ಉ.ಪ್ರ.ದಲ್ಲಿ ಕೇಂದ್ರದ ಅಗ್ನಿವೀರ್‌ ಯೋಜನೆಯ ವಿರುದ್ಧವಾಗಿ ರಾಹುಲ್‌ ಪ್ರಚಾರ ನಡೆಸಿದ್ದು ಇಂಡಿಯಾ ಕೂಟದ ಕೈಹಿಡಿದಿದೆ ಎನ್ನಲಾಗಿದೆ.

ಮೋದಿ ಕೈಹಿಡಿಯಬೇಕು ಮಿತ್ರಪಕ್ಷಗಳು:
ಎನ್‌ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 3ನೇ ಬಾರಿ ಪಟ್ಟಕ್ಕೇರುವುದು ಬಹುತೇಕ ಖಾತ್ರಿ. ಆದರೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಬಿಹಾರದಲ್ಲಿ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಎನ್‌ಡಿಎಗೆ ಕೈಕೊಟ್ಟರೆ ಎಲ್ಲವೂ ತಲೆ ಕೆಳಗಾಗಲಿದೆ. ಈಗಾಗಲೇ ಇಂಡಿಯಾ ಒಕ್ಕೂಟದ ನಾಯಕರೂ ಈ ಇಬ್ಬರೂ ನಾಯಕರನ್ನು ಸಂಪರ್ಕಿಸಿ, ಭಾರೀ ಆಮಿಷಗಳನ್ನು ನೀಡಿದ್ದಾರೆಂದು ಹೇಳಲಾಗಿದೆ. ಮೋದಿ ಪ್ರಧಾನಿಯಾದರೂ ಅವರಿಗೆ ಮಿತ್ರಪಕ್ಷಗಳ ಪೂರ್ಣ ನೆರವು ಅನಿವಾರ್ಯ.

ತಲೆಕೆಳಗಾದ ಸಮೀಕ್ಷೆಗಳು:
ಜೂ.1ರಂದು 7ನೇ ಮತ್ತು ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದವು. ಎಲ್ಲ ಸಮೀಕ್ಷೆಗಳ ಸರಾಸರಿ ಲೆಕ್ಕಾಚಾರದ ಪ್ರಕಾರ ಎನ್‌ಡಿಎಗೆ 358, ಇಂಡಿಯಾ ಕೂಟಕ್ಕೆ 142 ಸ್ಥಾನಗಳ ಬರಬಹುದೆಂದು ಹೇಳಲಾಗಿತ್ತು. ಇಂಡಿಯಾ ಕೂಟ ಹೇಳಿದ್ದಂತೆಯೇ ಈ ಲೆಕ್ಕಾಚಾರಗಳೆಲ್ಲ ಉಲ್ಟಾ ಆಗಿವೆ. ಇಂಡಿಯಾ ಕೂಟ ಸಲೀಸಾಗಿ 230 ಸ್ಥಾನಗಳನ್ನು ದಾಟಿದೆ! ಎನ್‌ಡಿಎ ನಿರೀಕ್ಷೆ ಮೀರಿ ಕುಸಿತ ಅನುಭವಿಸಿದೆ.

ಇಂಡಿಯಾ ಕೂಟಕ್ಕೆ ದೊಡ್ಡ ಸವಾಲು:
ಈ ಬಾರಿ ಇಂಡಿಯಾ ಮೈತ್ರಿಕೂಟ ಸ್ಥಾನಗಳೂ ಭಾರೀ ಪ್ರಮಾಣದಲ್ಲಿ ಏರಿದ್ದರೂ, ಬಹುಮತದಿಂದ ದೂರವೇ ಇದೆ. ಆದ್ದರಿಂದ ಅದು ಅಧಿಕಾರಕ್ಕೆ ಬರಲು ವಿಪರೀತ ಕಸರತ್ತು ನಡೆಸಬೇಕಾಗಿದೆ. ಎನ್‌ಡಿಎ ಮಿತ್ರಪಕ್ಷಗಳನ್ನು ಸೆಳೆದುಕೊಂಡು, ತನ್ನ ಮಿತ್ರಪಕ್ಷಗಳನ್ನು ಉಳಿಸಿಕೊಳ್ಳಬೇಕು. ಅಲ್ಲದೇ ಪ್ರಧಾನಿ ಅಭ್ಯರ್ಥಿ ಯಾರೆಂದು ಖಚಿತವಾಗಬೇಕು. ಈಗಾಗಲೇ ಕೆಲವರು ರಾಹುಲ್‌ ಗಾಂಧಿ ಪರ ಧ್ವನಿಯೆತ್ತಿದ್ದಾರೆ. ಇನ್ನು ಕೆಲವರು ಬೇರೆ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. ಈ ಸವಾಲುಗಳನ್ನು ಅದು ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕು.

ಟಾಪ್ ನ್ಯೂಸ್

7-belthangady

Belthangady: ಬಸ್-ಬೈಕ್ ಢಿಕ್ಕಿ; ನಡ ಗ್ರಾಮದ ಗ್ರಾಮ ಕರಣಿಕರ ಕಚೇರಿ ಸಹಾಯಕ ಸಾವು

Rohit Sharma backs Virat kohli in T20 World Cup

T20 World Cup; ವಿರಾಟ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ…: ಕ್ಯಾಪ್ಟನ್ ಶರ್ಮಾ ಹೀಗಂದಿದ್ಯಾಕೆ?

Udupi: ಜೂನ್‌ 29ರಂದು “ದೊಡ್ಡ ಸಾಮಗರ ನಾಲ್ಮೊಗ” ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ

Udupi: ಜೂನ್‌ 29ರಂದು “ದೊಡ್ಡ ಸಾಮಗರ ನಾಲ್ಮೊಗ” ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ

DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?

DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?

Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್

Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್

Kampli: ಅರಣ್ಯ ಇಲಾಖೆಯ ಬಲೆಗೆ ಬೀಳದ ಮೊಸಳೆ ಮಿನುಗಾರರ ಬಲೆಗೆ ಬಿತ್ತು… ನಿಟ್ಟುಸಿರು ಬಿಟ್ಟ ಜನ

Kampli: ಅರಣ್ಯ ಇಲಾಖೆಯ ಬಲೆಗೆ ಬೀಳದ ಮೊಸಳೆ ಮಿನುಗಾರರ ಬಲೆಗೆ ಬಿತ್ತು…

Heavy Rain: ಕಳಸ ತಾಲೂಕಿನ ಶಾಲೆಗಳಿಗೆ ರಜೆ… ಶಾಲೆಗೆ ಹೋಗಿ ವಾಪಸ್ಸಾದ ವಿದ್ಯಾರ್ಥಿಗಳು

Kalasa: ತಡವಾಗಿ ಘೋಷಣೆಯಾದ ರಜೆ… ಶಾಲೆಗೆ ಹೋಗಿ ವಾಪಸ್ಸಾದ ವಿದ್ಯಾರ್ಥಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?

DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?

Heavy Rain: ಮಳೆಗೆ ನಲುಗಿದ ದೆಹಲಿ… ಏರ್ಪೋರ್ಟ್ ಮೇಲ್ಛಾವಣಿ ಕುಸಿದು 6 ಮಂದಿಗೆ ಗಾಯ

Heavy Rain: ಮಳೆಗೆ ನಲುಗಿದ ದೆಹಲಿ… ಏರ್ಪೋರ್ಟ್ ಮೇಲ್ಛಾವಣಿ ಕುಸಿದು 6 ಮಂದಿಗೆ ಗಾಯ

1-eeweqewqewqewqe

45,000 ಜೀವಪ್ರಭೇದ ಅಳಿವಿನಂಚಿಗೆ: ಕಳೆದ ವರ್ಷಕ್ಕಿಂತ ಸಾವಿರ ಹೆಚ್ಚಳ

stalin

Bengaluru ಸನಿಹ ಏರ್‌ಪೋರ್ಟ್‌: ತಮಿಳುನಾಡು ಹೊಸ ಕ್ಯಾತೆ

1-amesen

India ಹಿಂದೂ ರಾಷ್ಟ್ರವಲ್ಲ ಇದಕ್ಕೆ ಫ‌ಲಿತಾಂಶ ಸಾಕ್ಷಿ:ಅಮರ್ತ್ಯ ಸೇನ್‌

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

Aranthodu; Man slipped and fell into the river

Aranthodu; ಕಾಲು ಜಾರಿ ಹೊಳೆಗೆ ಬಿದ್ದು ಸಾವು

7-belthangady

Belthangady: ಬಸ್-ಬೈಕ್ ಢಿಕ್ಕಿ; ನಡ ಗ್ರಾಮದ ಗ್ರಾಮ ಕರಣಿಕರ ಕಚೇರಿ ಸಹಾಯಕ ಸಾವು

Rohit Sharma backs Virat kohli in T20 World Cup

T20 World Cup; ವಿರಾಟ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ…: ಕ್ಯಾಪ್ಟನ್ ಶರ್ಮಾ ಹೀಗಂದಿದ್ಯಾಕೆ?

Udupi: ಜೂನ್‌ 29ರಂದು “ದೊಡ್ಡ ಸಾಮಗರ ನಾಲ್ಮೊಗ” ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ

Udupi: ಜೂನ್‌ 29ರಂದು “ದೊಡ್ಡ ಸಾಮಗರ ನಾಲ್ಮೊಗ” ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ

DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?

DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.