Rajya Sabha; ಇನ್ನೆರಡು ತಿಂಗಳಲ್ಲೇ ಎನ್ ಡಿಎಗೆ ಬಹುಮತ ಸಾಧ್ಯತೆ
Team Udayavani, Feb 29, 2024, 11:06 AM IST
ನವದೆಹಲಿ: ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಯ 56 ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆದ್ದುಕೊಂಡಿರುವ ಬಿಜೆಪಿ ಸಂಸತ್ತಿನ ಮೇಲ್ಮನೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜತೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ರಾಜ್ಯಸಭೆಯಲ್ಲಿ ಬಹುಮತದ ಸನಿಹಕ್ಕೆ ಬಂದು ನಿಂತಿದೆ. ರಾಜ್ಯಸಭೆಯ ಹಾಲಿ 240 ಬಲದ ಪೈಕಿ ಬಹುಮತಕ್ಕೆ 121 ಸ್ಥಾನಗಳು ಬೇಕಿದ್ದು ಎನ್‌ಡಿಎ ಮೈತ್ರಿ ಕೂಟ 117 ಸದಸ್ಯರನ್ನು ಹೊಂದಿದೆ.
ಬಹುಮತಕ್ಕೆ ಕೇವಲ 4 ಸದಸ್ಯರ ಬೆಂಬಲದ ಕೊರತೆ ಇದೆ. 6 ಸ್ಥಾನಗಳಿಗೆ ಏಪ್ರಿಲ್‌ನಲ್ಲಿ ನೇಮಕ ನಡೆಯಲಿದ್ದು, ಈ ನೇಮಕದ ಬಳಿಕ ಹಾಗೂ ಹೊಸದಾಗಿ ಆಯ್ಕೆಯಾದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದಾಗ ಎನ್‌ಡಿಎ ಬಹುಮತ ಪಡೆಯುವ ಸಾಧ್ಯತೆಯಿದೆ.
ಈಗ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಬಲಾಬಲ 29ಕ್ಕೆ ಕುಸಿದಿದ್ದು ಇತ್ತೀಚಿನ ದಶಕಗಳಲ್ಲಿ ಇದು ಅತಿ ಕನಿಷ್ಠವಾಗಿದೆ. ಟಿಎಂಸಿ 13, ಡಿಎಂಕೆ, ಆಪ್ ತಲಾ 10, ಬಿಜೆಡಿ, ವೈಎಸ್‌ಆರ್‌ಸಿಪಿ ತಲಾ 9, ಬಿಆರ್‌ಎಸ್ 7, ಆರ್‌ಜೆಡಿ 6, ಸಿಪಿಎಂ 5, ಎಐಎಡಿಎಂಕೆ ಮತ್ತು ಜೆಡಿಯು ತಲಾ 4, ಎಸ್‌ಪಿ, ಸಿಪಿಐ ತಲಾ 2, ಸಣ್ಣ ಪಕ್ಷಗಳು 24, ಪಕ್ಷೇತರರು 3 ಮತ್ತು ನಾಮನಿರ್ದೇಶನದ 6 ಸದಸ್ಯರು ಇದ್ದಾರೆ.
ರಾಜ್ಯಸಭೆಯ ಒಟ್ಟು ಬಲಾಬಲ 245 ಆಗಿದ್ದು ಜಮ್ಮು ಮತ್ತು ಕಾಶ್ಮೀರದ ನಾಲ್ಕು, ನಾಮ ನಿರ್ದೇಶನ ಕೋಟಾದ ಒಂದು ಸ್ಥಾನ ಖಾಲಿ ಇದೆ. ಹಾಗಾಗಿ ಸದ್ಯ ರಾಜ್ಯಸಭೆಯಲ್ಲಿ ಬಹುಮತಕ್ಕೆ 121 ಬಲ ಸಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…