ಜ.6ರೊಳಗೆ ನೀಟ್ ಕೌನ್ಸೆಲಿಂಗ್: ಕೇಂದ್ರ
Team Udayavani, Jan 1, 2022, 6:15 AM IST
ಹೊಸದಿಲ್ಲಿ: ನೀಟ್-ಪಿಜಿ ಕೌನ್ಸೆಲಿಂಗ್ ಅನ್ನು ಜ.6ರೊಳಗೆ ನಡೆಸುವುದಾಗಿ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಭರವಸೆ ಕೊಟ್ಟಿದ್ದಾರೆ.
ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಆ ಹಿನ್ನೆಲೆಯಲ್ಲಿ ಸತತ ಎರಡು ವಾರಗಳ ಕಾಲ ನಡೆದ ವಸತಿ ವೈದ್ಯರ ಹೋರಾಟವನ್ನು ಕೈಬಿಡಲಾಗಿದೆ. “ನೀಟ್-ಪಿಜಿ ಕೌನ್ಸೆಲಿಂಗ್‌ನ್ನು ಜ.6ರೊಳಗೆ ನಡೆಸಲಾಗುವುದು.
ಪ್ರತಿಭಟಿಸಿದ ವೈದ್ಯರ ಮೇಲೆ ಎಫ್ಐಆರ್ ಹಾಕಲಾಗುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಐಎಂಎ ಅಧ್ಯಕ್ಷ ಸಹಜಾನಂದ ಪ್ರಸಾದ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರವಾಹ ಪರಿಹಾರ ತಕ್ಷಣ ಬಿಡುಗಡೆ: ಕಾರಜೋಳ
ಇದಕ್ಕೂ ಮೊದಲು, ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್‌ನ (ಎಫ್ಒಆರ್‌ಡಿಎ) ಸದಸ್ಯರು ದಿಲ್ಲಿ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ, ಚರ್ಚಿಸಿದ್ದಾರೆ. ಹೋರಾಟನಿರತ ವೈದ್ಯರ ಮೇಲೆ ಎಫ್ಐಆರ್ ದಾಖಲಿಸಿದ್ದನ್ನು ಹಿಂಪಡೆಯುವ ವಿಚಾರದಲ್ಲಿ ಚರ್ಚೆ ನಡೆಸಲಾಯಿತು. ಬಳಿಕ ಹೋರಾಟ ಕೈಬಿಡುವ ನಿರ್ಧಾರ ಪ್ರಕಟಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…