NEET Scam; ಆರೋಪಿಗಳ ಬಂಧನಕ್ಕೆ ನೆರವಾಯಿತು ಆ ಕರೆ!
ಮಾಸ್ಟರ್‌ವೆುçಂಡ್, ಸಾಲ್ವರ್ ಗ್ಯಾಂಗ್‌ನ ರವಿ ಅತ್ರಿ ಅರೆಸ್ಟ್
Team Udayavani, Jun 23, 2024, 6:46 AM IST
ಪಟ್ನಾ/ಹೊಸದಿಲ್ಲಿ: ನೀಟ್ ಮತ್ತು ಯುಜಿ ನೆಟ್‌ಪರೀಕ್ಷೆಯಲ್ಲಾದ ಅಕ್ರಮವು ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವಂತೆಯೇ, ಪ್ರಕರಣದ ತನಿಖೆಯೂ ಚುರುಕುಗೊಂಡಿದೆ. ಒಂದೆಡೆ, ಉತ್ತರ ಪ್ರದೇಶ ಸರಕಾರ ರಚಿಸಿರುವ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಮಾಸ್ಟರ್‌ವೆುçಂಡ್ ಎನ್ನಲಾದ “ಸಾಲ್ವರ್ ಗ್ಯಾಂಗ್’ನ ರವಿ ಅತ್ರಿ ಎಂಬಾತನನ್ನು ಬಂಧಿಸಿದರೆ, ಮತ್ತೂಂದೆಡೆ ಶುಕ್ರವಾರ ತಡರಾತ್ರಿ ಬಿಹಾರ ಪೊಲೀಸರು ಝಾರ್ಖಂಡ್ ರಾಜ್ಯದ ದೇವಗಢ ಜಿಲ್ಲೆಯಿಂದ 6 ಮಂದಿಯನ್ನು ಬಂಧಿಸಿದ್ದಾರೆ.
ರವಿ ಅತ್ರಿ ಹಲವಾರು ರಾಜ್ಯಗಳಲ್ಲಿ ಈ ಹಿಂದೆಯೂ ಹಲವು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿ ಯಾಗಿದ್ದ ಆರೋಪಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಉತ್ತರವನ್ನು ಸಿದ್ಧಪಡಿಸಿ, ಅದನ್ನು ತನ್ನ ನೆಟ್‌ವರ್ಕ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಕೆಲಸವನ್ನು ಈ ಸಾಲ್ವರ್ ಗ್ಯಾಂಗ್ ನಡೆಸುತ್ತಿತ್ತು. ವೈದ್ಯಕೀಯ ಪ್ರವೇಶಪ್ರಶ್ನೆಪತ್ರಿಕೆ ಸೋರಿಕೆ ಆರೋಪದಲ್ಲಿ 2012ರಲ್ಲಿ ಈತನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಈಗ ನೀಟ್ ಅಕ್ರಮ ದಲ್ಲೂ ಆತನ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಉ.ಪ್ರ. ಪೊಲೀಸರು ಅವನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ನೀಟ್ ಮತ್ತು ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆಯು ವಿದ್ಯಾರ್ಥಿಗಳ ಭಾರೀ ಪ್ರತಿಭಟನೆ ಮಾತ್ರವಲ್ಲದೇ, ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಆರೋಪಿಗಳ ಬಂಧನಕ್ಕೆ ನೆರವಾಯಿತು ಆ ಕರೆ!
ಮೇ 5ರಂದು ನೀಟ್ ಪರೀಕ್ಷೆ ಆರಂಭವಾಗುವು ದಕ್ಕೂ 3 ಗಂಟೆ ಮುಂಚಿತವಾಗಿ “ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳು ಎಸ್‌ಯುವಿ ಯೊಂದ ರಲ್ಲಿ ರಹಸ್ಯ ತಾಣವೊಂದರ ಕಡೆಗೆ ಹೋಗುತ್ತಿದ್ದಾರೆ’ ಎಂದು ಝಾರ್ಖಂಡ್‌ನಿಂದ ಬಿಹಾರ ಪೊಲೀಸರಿಗೆ ದೂರವಾಣಿ ಕರೆ ಬಂದಿತ್ತು. ತತ್‌ಕ್ಷಣವೇ ಅಲರ್ಟ್ ಆದ ಪೊಲೀ ಸರು ಆ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದರಿಂದ, ಇಡೀ ನೀಟ್ ಅಕ್ರಮದ ಜಾಲ ಬಹಿರಂಗವಾಗಲು ಸಾಧ್ಯವಾಯಿತು. ಈ ಒಂದು ಸಣ್ಣ ಸುಳಿವು ಇಷ್ಟು ದೊಡ್ಡ ಹೈಪ್ರೊಫೈಲ್ ಗ್ಯಾಂಗ್‌ನ ಸೆರೆಗೆ ಕಾರಣವಾಗು ತ್ತದೆಂದು ನಾವು ಊಹಿಸಿಯೇ ಇರಲಿಲ್ಲ ಎಂದು ಬಿಹಾರ ಪೊಲೀಸರು ಹೇಳಿದ್ದಾರೆ.
ಆಗಿದ್ದೇನು?: ಕರೆ ಬಂದೊಡನೆ ಪಟ್ನಾದ ಪೊಲೀಸರ ತಂಡವು ಶಂಕಿತರನ್ನು ಅಡ್ಡಗಟ್ಟಿ, ವಶಕ್ಕೆ ಪಡೆಯಿತು. ಅವರನ್ನು ತೀವ್ರ ವಿಚಾರ ಣೆಗೊಳಪಡಿಸಿದಾಗ, ತಾವು ಹೋಗುತ್ತಿರುವ ರಹಸ್ಯ ಸ್ಥಳದ ಬಗ್ಗೆ ಅವರು ಬಾಯಿಬಿಟ್ಟರು. ಅಲ್ಲದೇ, ಹಿಂದಿನ ದಿನವೇ ನಗರದ ಹೊರ ವಲಯದಲ್ಲಿ ಸುಮಾರು 30 ನೀಟ್ ಅಭ್ಯರ್ಥಿ ಗಳನ್ನು ಭೇಟಿಯಾಗಿ, ಅವರಿಗೆ ಪ್ರಶ್ನೆಪತ್ರಿಕೆ ಗಳನ್ನು ನೀಡಿ, ಅನಂತರ ಅವರೆಲ್ಲರನ್ನೂ ಡ್ರಾಪ್ ಮಾಡಿ ವಾಪಸ್ ಬರುತ್ತಿದ್ದುದಾಗಿಯೂ ತಿಳಿಸಿದರು. ಬಳಿಕ, ಆರೋಪಿಗಳು ನೀಡಿದ ಮಾಹಿತಿಯಂತೆ, ರಹಸ್ಯ ತಾಣಕ್ಕೆ ತೆರಳಿದಾಗ ಅಲ್ಲಿ 13 ರೋಲ್ ನಂಬರ್‌ಗಳು ಸಿಕ್ಕಿದವು. ಇದಾದ ಒಂದು ಗಂಟೆಯೊಳಗೆ ಪೊಲೀಸರ ವಿವಿಧ ತಂಡಗಳು ನೀಟ್ ಪರೀಕ್ಷಾ ಕೇಂದ್ರ ಗಳತ್ತ ಧಾವಿಸಿ, 4 ಅಭ್ಯರ್ಥಿಗಳನ್ನು ವಶಕ್ಕೆ ಪಡೆ ದಾಗ, ಅವರು ಇನ್ನೂ 9 ಮಂದಿಯ ಹೆಸರನ್ನು ಬಾಯಿ ಬಿಟ್ಟರು. ಮೇ 6ರಂದು ಆರೋಪಿ ಯೊಬ್ಬನ ಮನೆಯಿಂದ ಸುಟ್ಟು ಹೋಗಿದ್ದ ಪ್ರಶ್ನೆಪತ್ರಿಕೆ ಯನ್ನೂ ವಶಕ್ಕೆ ಪಡೆಯಲಾಯಿತು. ಮಾರನೇ ದಿನ 13 ಆರೋ ಪಿಗಳನ್ನು (ಅಭ್ಯ ರ್ಥಿ ಗಳು, ಪೋಷಕರು ಸೇರಿ) ಬಂಧಿಸ ಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.