ಅಲಹಾಬಾದ್ ಕಂಭಮೇಳ: ನೆಹರೂ ಪ್ರತಿಮೆ ತೆರವು; ಕಾಂಗ್ರೆಸ್ ಆಕ್ರೋಶ
Team Udayavani, Sep 14, 2018, 11:58 AM IST
ಅಲಹಾಬಾದ್ : 2019ರ ಜನವರಿಯಲ್ಲಿ ನಡೆಯುವ ಕುಂಭಮೇಳಕ್ಕಾಗಿ ನಗರವನ್ನು ಸುಂದರೀಕರಿಸುವ ನಿಟ್ಟಿನಲ್ಲಿ ನಗರದ ಬಲ್ಸಾನ್ ಚೌರಾಹಾ ದಲ್ಲಿದ್ದ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪ್ರತಿಮೆಯನ್ನು ನಿನ್ನೆ ಗುರುವಾರ ತೆರವುಗೊಳಿಸಲಾಗಿರುವುದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ.
ನೆಹರೂ ಪ್ರತಿಮೆಯನ್ನು ತೆರವುಗೊಳಿಸುವುದಾದರೆ ಇದೇ ರಸ್ತೆಯಲ್ಲಿ ಮುಂದೆ ಒಂದೆಡೆ ಇರುವ ಪಂಡಿತ್ ದೀನ ದಯಾಳ್ ಅವರ ಪ್ರತಿಮೆಯನ್ನು ಯಾಕೆ ಮುಟ್ಟಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ನೆಹರೂ ಪ್ರತಿಮೆಯ ಉದ್ದೇಶಪೂರ್ವಕ ತೆರವನ್ನು ಆರೋಪಿಸಿ ಸಮಾಜವಾದಿ, ಕಾಂಗ್ರೆಸ್ ಪಕ್ಷಗಳು ಪ್ರತಿಭಟನಾ ಪ್ರದರ್ಶನ ನಡೆಸಿವೆ. ಪ್ರತಿಮೆ ತೆರವಿನ ಕ್ರೇನ್ ಗೆ ತಡೆಯೊಡ್ಡಿರುವ ಈ ಪಕ್ಷಗಳ ಕಾರ್ಯಕರ್ತರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿದರು.
ನೆಹರೂ ಪ್ರತಿಮೆ ತೆರವಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ವಿವರ ಅಥವಾ ಹೇಳಿಕೆ ನೀಡಲು ಬಯಸುತ್ತಿಲ್ಲ. ರಸ್ತೆ ಅಗಲೀಕರಣಕ್ಕಾಗಿ ನಡುರಸ್ತೆಯಲ್ಲಿದ್ದ ನೆಹರೂ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ತತ್ಕಾಲಕ್ಕೆ ನೆಹರೂ ಪ್ರತಿಮೆಯನ್ನು ಸಮೀಪದ ಪಾರ್ಕ್ ನಲ್ಲಿ ಇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.