ನೇತಾಜಿ ಸಾವಿಗೆ ಮತ್ತೂಂದು ಟ್ವಿಸ್ಟ್!
Team Udayavani, Jul 17, 2017, 4:50 AM IST
ಚೆನ್ನೈ: ನೇತಾಜಿ ಸುಭಾಸ್‌ಚಂದ್ರ ಬೋಸ್ ಹೇಗೆ ಮೃತಪಟ್ಟರು? ದೇಶ ಸ್ವಾತಂತ್ರ್ಯ ಪಡೆದ ದಿನದಿಂದಲೂ ಇದೊಂದು ಯಕ್ಷ ಪ್ರಶ್ನೆಯಾಗೇ ಉಳಿದಿದೆ. ಆದರೆ ಇದೀಗ ನೇತಾಜಿ ಸಾವಿಗೆ ಸಂಬಂಧಿಸಿದಂತೆ ಮತ್ತೂಂದು ಟ್ವಿಸ್ಟ್ ದೊರೆತಿದ್ದು, ‘ಸುಭಾಸ್‌ಚಂದ್ರ ಭೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ. ಅಲ್ಲದೆ 1947ರಲ್ಲಿ ಅವರಿನ್ನೂ ಜೀವಂತವಾಗಿದ್ದರು,’ ಎಂದು ಪ್ಯಾರಿಸ್ ಮೂಲದ ಇತಿಹಾಸಕಾರ ಜೆ.ಬಿ.ಪಿ. ಮೋರ್ ಹೇಳಿದ್ದಾರೆ. 1947ರ ಡಿಸೆಂಬರ್ 11ರಂದು ಸಲ್ಲಿಕೆಯಾಗಿದ್ದ ಫ್ರೆಂಚ್ ಸೀಕ್ರೆಟ್ ಸರ್ವಿಸ್‌ನ ಗುಪ್ತ ವರದಿಯೊಂದನ್ನು ಉಲ್ಲೇಖೀಸಿ ಈ ವಾದ ಮಂಡಿಸಿರುವ ಮೋರ್, ‘ತೈವಾನ್ ವಿಮಾನ ದುರಂತದಲ್ಲಿ ನೇತಾಜಿ ಅಸುನೀಗಿದ್ದರು ಎಂಬ ಬಗ್ಗೆ ವರದಿಯಲ್ಲಿ ಹೇಳಿಲ್ಲ. ಬದಲಿಗೆ 1947ರ ಡಿಸೆಂಬರ್ ಅಂತ್ಯದ ವೇಳೆ ಅವರಿನ್ನೂ ಜೀವಂತವಾಗಿದ್ದರು. ಇಂಡೋ ಚೈನಾದಿಂದ ಜೀವಂತವಾಗೇ ತಪ್ಪಿಸಿಕೊಂಡು ಹೋದ ಬೋಸ್, 1947ರ ಡಿ.11ರವರೆಗೆ ಅಪರಿಚಿತರಂತೆ ಅಲೆದಾಡುತ್ತಿದ್ದರು’ ಎಂದು ವರದಿಯಲ್ಲಿ ಉಲ್ಲೇಖವಿದೆ’ ಎಂದಿದ್ದಾರೆ.
ನೇತಾಜಿ ನಿಧನದ ಮರ್ಮ ತಿಳಿಯಲು ಕೇಂದ್ರ ಸರಕಾರ ಮೂರು ಸಮಿತಿಗಳನ್ನು ರಚಿಸಿತ್ತು. 1956ರಲ್ಲಿ ರಚನೆಯಾದ ಶಾನ ವಾಜ್ ಸಮಿತಿ, ‘ಜಪಾನ್ ಆಕ್ರಮಿತ ತೈಪೆಯಲ್ಲಿನ ಥೈಹೋಕು ವಿಮಾನ ನಿಲ್ದಾಣದಲ್ಲಿ 1945ರ ಆಗಸ್ಟ್ 18ರಂದು ಸಂಭವಿಸಿದ ವಿಮಾನ ದುರಂತದಲ್ಲಿ ನೇತಾಜಿ ನಿಧನರಾಗಿದ್ದರು,’ ಎಂದು ವರದಿ ನೀಡಿತ್ತು. ಆದರೆ ಸುಭಾಸ್‌ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂದು ಮುಖರ್ಜಿ ಸಮಿತಿ (1999) ತನ್ನ ವರದಿಯಲ್ಲಿ ಹೇಳಿತ್ತು. ಆದರೆ ಮುಖರ್ಜಿ ಸಮಿತಿ ವರದಿಯನ್ನು ಸರಕಾರವೇ ಅಲ್ಲಗಳೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
MUST WATCH
ಹೊಸ ಸೇರ್ಪಡೆ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.