ಮನೆಯ ಕೀಲಿಕೈ ಸಿಗುತ್ತಲೇ ಕಣ್ಣೀರಿಟ್ಟ ಶಾಸಕ!

ಬಿಹಾರದ ಬಡ ಶಾಸಕನಿಗೆ 3 ಮಹಡಿಯ ಮನೆ ಹಂಚಿಕೆ; ನಾನಿದನ್ನು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ ಎಂದ ಶಾಸಕ

Team Udayavani, Oct 30, 2022, 7:30 AM IST

ಮನೆಯ ಕೀಲಿಕೈ ಸಿಗುತ್ತಲೇ ಕಣ್ಣೀರಿಟ್ಟ ಶಾಸಕ!

ಪಾಟ್ನಾ: ಬಿಹಾರ ವಿಧಾನಸಭೆಯ ಅತ್ಯಂತ ಬಡ ಶಾಸಕ ಎಂದೇ ಹೆಸರಾಗಿರುವ ಆರ್‌ಜೆಡಿ ಶಾಸಕ ರಾಮ್‌ವೃಕ್ಷ್ ಸದಾ ಅವರಿಗೆ ಪಾಟ್ನಾದಲ್ಲಿ ಸರ್ಕಾರಿ ನಿವಾಸವೊಂದನ್ನು ನೀಡಲಾಯಿತು.

ಮನೆಯ ಕೀಲಿಕೈಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಹಸ್ತಾಂತರ ಮಾಡುತ್ತಿದ್ದಂತೆ, ಶಾಸಕ ರಾಮ್‌ವೃಕ್ಷ್ ಭಾವುಕರಾಗಿದ್ದು, “ನಾನಿದನ್ನು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ’ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪುಟ್ಟ ಮನೆಯಲ್ಲಿ 12 ಮಂದಿ ವಾಸ:
ಅಲೌಲಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವ ರಾಮ್‌ವೃಕ್ಷ್  ಅವರು ಈವರೆಗೆ ತಮ್ಮ ಗ್ರಾಮವಾದ ರೌನ್‌ನಲ್ಲಿ 2004ರಲ್ಲಿ ಇಂದಿರಾ ಆವಾಸ ಯೋಜನೆಯಡಿ ನಿರ್ಮಿಸಲಾಗಿದ್ದ 2 ಕೊಠಡಿಯಿರುವ ಪುಟ್ಟ ಮನೆಯಲ್ಲಿ ವಾಸವಿದ್ದರು. ವಿಶೇಷವೆಂದರೆ, ಅವರದ್ದು ಅವಿಭಕ್ತ ಕುಟುಂಬವಾಗಿದ್ದ ಕಾರಣ, ಇಷ್ಟು ಚಿಕ್ಕ ಮನೆಯಲ್ಲಿ 12 ಮಂದಿ ನೆಲೆಸಿದ್ದರು. ಪರಿಶಿಷ್ಟ ಜಾತಿಗೆ ಸೇರಿರುವ ರಾಮ್‌ವೃಕ್ಷ್ ಅವರಿಗೆ ಈಗ ಸರ್ಕಾರವು ಪಾಟ್ನಾದ ಬೀರ್‌ ಚಾಂದ್‌ ಪಟೇಲ್‌ ಪಥದಲ್ಲಿ ಮೂರು ಮಹಡಿಯ ದೊಡ್ಡ ಮನೆಯನ್ನು ಹಂಚಿಕೆ ಮಾಡಿದೆ. ಒಟ್ಟು 8 ಶಾಸಕರಿಗೆ ಈ ರೀತಿ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಆ ಪೈಕಿ ರಾಮ್‌ವೃಕ್ಷ್ ಕೂಡ ಒಬ್ಬರು.

“ಲಾಲು ಪ್ರಸಾದ್‌ ಯಾದವ್‌ ಅವರು ನನ್ನನ್ನು ನಾಯಕನ್ನಾಗಿ ಮತ್ತು ಶಾಸಕನನ್ನಾಗಿ ಮಾಡಿದರು. ನಾನು ಬಿಹಾರದ ಬಡ ಶಾಸಕ. ಬಡವನಿಗೆ ಏನು ಸಿಕ್ಕಿದರೂ ಅವನಿಗೆ ಅದುವೇ ದೀಪಾವಳಿ. ಇವತ್ತು ಸಿಎಂ ನಿತೀಶ್‌ ಕುಮಾರ್‌ ಅವರು ಮನೆಯ ಬೀಗದ ಕೀಯನ್ನು ನನಗೆ ಕೊಟ್ಟಿದ್ದಾರೆ. ಇಂಥ ಮನೆಯಲ್ಲಿ ವಾಸವಿರುತ್ತೇನೆ ಎಂದು ನಾನೆಂದೂ ಭಾವಿಸಿರಲಿಲ್ಲ’ ಎಂದಿದ್ದಾರೆ ರಾಮ್‌ವೃಕ್ಷ್.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.