ಹೊಸ ಸಮವಸ್ತ್ರದಲ್ಲೇ ಕಮಾಂಡೋಗಳ ಪರೇಡ್
ಸೇನಾ ದಿನದ ಪರೇಡ್‌ನಲ್ಲಿ ಯೋಧರ ನೂತನ ಯೂನಿಫಾರ್ಮ್ ಅನಾವರಣ
Team Udayavani, Jan 16, 2022, 6:45 AM IST
ಹೊಸದಿಲ್ಲಿ: ಬಹಳ ಕಾಲದ ಬಳಿಕ ದೇಶದ ಸೇನಾಪಡೆಗೆ ಹೊಸ ಮಾದರಿಯ ಸಮವಸ್ತ್ರ ಸಿಕ್ಕಿದೆ. ಶನಿವಾರ ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಸೇನಾ ದಿನಾಚರಣೆಯ ಪರೇಡ್‌ನಲ್ಲಿ ಸಶಸ್ತ್ರ ಪಡೆಗಳ ಯೋಧರು, ಈ ಸಮವಸ್ತ್ರವನ್ನೇ ಧರಿಸಿ ಹೆಜ್ಜೆ ಹಾಕಿದ್ದಾರೆ.
ಪುರುಷ ಮತ್ತು ಮಹಿಳಾ ಸಿಬಂದಿಗೆ ಧರಿಸಲು ಅನುಕೂಲವಾಗುವಂತೆ ಮತ್ತು ಹವಾಮಾನಕ್ಕೆ ತಕ್ಕಂತೆ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ಶನಿವಾರ ರಕ್ಷಣ ಪಡೆಗಳ 74ನೇ ಸ್ಥಾಪನ ದಿನದ ನಿಮಿತ್ತ ದಿಲ್ಲಿಯಲ್ಲಿ ನಡೆದ ಪರೇಡ್‌ನಲ್ಲಿ ಪ್ಯಾರಾಚೂಟ್ ರೆಜಿಮೆಂಟ್‌ನ ಯೋಧರು ಹೊಸ ಸಮವಸ್ತ್ರವನ್ನು ಧರಿಸಿ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ.
ಗಡಿ ಬದಲಿಗೆ ಅವಕಾಶ ಇಲ್ಲ
ಸೇನಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಭೂಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ, ದೇಶದ ಗಡಿ ಪ್ರದೇಶವನ್ನು ಬದಲಾವಣೆ ಮಾಡುವ ಯಾವುದೇ ಪ್ರಯತ್ನವನ್ನೂ ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಸಾರಿದ್ದಾರೆ. ಕಳೆದ ವರ್ಷ ಉತ್ತರ ಭಾಗದ ಗಡಿ ಪ್ರದೇಶಗಳ ಪರಿಸ್ಥಿತಿ ನಿರ್ವಹಣೆ ಅತ್ಯಂತ ಸವಾಲಿನ ದ್ದಾಗಿತ್ತು ಎಂದ ಅವರು, ಈಗ ಪೂರ್ವ ಲಡಾಖ್‌ನಲ್ಲಿ ಪರಿಸ್ಥಿತಿ ನಿಯಂತ್ರ ಣದಲ್ಲಿದೆ ಎಂದಿದ್ದಾರೆ.
ಇದೇ ವೇಳೆ, ದೇಶದ ಹಿತಾಸಕ್ತಿ ಕಾಪಾಡುವಲ್ಲಿ ಸೇನೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಅದು ನಮ್ಮ ಪ್ರಜೆಗಳ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಅದರ ಸೇವೆ ಅನನ್ಯವಾದದ್ದು ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಸಶಸ್ತ್ರ ಪಡೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಚಾಲಕನಿಗೆ ಪೀಡ್ಸ್ ; ಬರೋಬ್ಬರಿ 10ಕಿ.ಮೀ. ಬಸ್ ಚಲಾಯಿಸಿದ ಪ್ರಯಾಣಿಕ ಮಹಿಳೆ! ವಿಡಿಯೋ ವೈರಲ್
ಹಲವು ಬಣ್ಣಗಳ ಬಳಕೆ
ಹೊಸ ಸಮವಸ್ತ್ರದಲ್ಲಿ ಆಲಿವ್ ಗ್ರೀನ್, ವಿವಿಧ ರೀತಿಯ ಭೂ ಪ್ರದೇಶ ಗಳನ್ನು ಹೊಂದಿಕೊಂಡು ಬಣ್ಣಗಳನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ. ಹೊಸ ಸಮವಸ್ತ್ರವನ್ನು ಟಕ್ ಇನ್ ಮಾಡುವ ಕ್ರಮವಿಲ್ಲ. ಮಹಿಳಾ ಅಧಿಕಾರಿಗಳಿಗೆ ಮತ್ತು ಸಿಬಂದಿಗೆ ಕೊಂಚ ವ್ಯತ್ಯಾಸ ಇರುವ ಸಮವಸ್ತ್ರ ಇದೆ.
ಯಾವ ರೀತಿಯ ಬಟ್ಟೆ?
ಹತ್ತಿ ಮತ್ತು ಪಾಲಿಸ್ಟರ್ ಅನ್ನು 70:30ರ ಅನುಪಾತದಲ್ಲಿ ಬಳಸಲಾಗಿದೆ. ಸುಲಭದಲ್ಲಿ ಒಣಗಿಸಲೂ ಸಾಧ್ಯ.
ವಿನ್ಯಾಸಗೊಳಿಸಿದ್ದು ಯಾರು?
ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವಿನ್ಯಾಸ ತಂಡದ ಸಹಯೋಗದೊಂದಿಗೆ ಹೊಸ ಸಮವಸ್ತ್ರ ವಿನ್ಯಾಸಗೊಳಿಸಲಾಗಿದೆ.
ಹೊಸತೇನಿದೆ?
-ಯೋಧರಿಗೆ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ವಿನ್ಯಾಸ
-ವಿವಿಧ ಭೌಗೋಳಿಕ ಪ್ರದೇಶಗಳಿಗೆ ಅನ್ವಯವಾಗುವಂತೆ ತಯಾರು
-ಕಠಿನ ಚಳಿ, ಅತಿಯಾದ ಬಿಸಿ ಹೀಗೆ ಅತ್ಯಂತ ಪ್ರತಿಕೂಲ ಹವಾಮಾನ ತಡೆಯುವ ನಿಟ್ಟಿನಲ್ಲಿ ಅನುಕೂಲ
-ದೀರ್ಘಕಾಲ ಬಾಳಿಕೆ ಬರುವಂಥ ಬಟ್ಟೆಯ ಬಳಕೆ
ಲೋಂಗೇವಾಲಾದಲ್ಲಿ ರಾರಾಜಿಸಿದ ಖಾದಿ ರಾಷ್ಟ್ರಧ್ವಜ
ಸೇನಾ ದಿನದ ಪ್ರಯುಕ್ತ ರಾಜಸ್ಥಾನಕ್ಕೆ ಹೊಂದಿಕೊಂಡಿರುವ ಭಾರತ- ಪಾಕಿಸ್ಥಾನ ಗಡಿಯಿರುವ ಲೋಂಗೇವಾಲಾದಲ್ಲಿ ಜಗತ್ತಿನ ಅತೀದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾಗಿದೆ. 2021 ಅ.2ರ ಬಳಿಕ 5ನೇ ಬಾರಿಗೆ ಇದನ್ನು ಹಾರಿಸಲಾಗಿದೆ.
ಈ ಹಿಂದೆ ಎಲ್ಲಿ ಅಳವಡಿಸಲಾಗಿತ್ತು?
2021 ಅ.8: ಹಿಂಡನ್ ವಾಯುನೆಲೆಯಲ್ಲಿ
2021 ಅ.21: ಹೊಸದಿಲ್ಲಿಯ ಕೆಂಪುಕೋಟೆಯಲ್ಲಿ
2021 ಡಿ.4: ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ ಬಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.