ಆಗಸ್ಟ್‌ನಲ್ಲಿ ರಕ್ಷಣಾ ನೀತಿ
Team Udayavani, Jul 30, 2018, 9:30 AM IST
ಹೊಸದಿಲ್ಲಿ: ದೇಶವನ್ನು ರಕ್ಷಣಾ ಉತ್ಪಾದನಾ ವಲಯವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಆಗಸ್ಟ್‌ನಲ್ಲಿ ಪ್ರಮುಖ ನೀತಿಯೊಂದನ್ನು ಹೊರತರಲಿದೆ. ಮುಂದಿನ 10 ವರ್ಷಗಳಲ್ಲಿ ಮಿಲಿಟರಿ ಸಲಕರಣೆಗಳ ಉತ್ಪಾದನೆಯ ಟಾಪ್ 5 ರಾಷ್ಟ್ರಗಳಲ್ಲೊಂದಾಗಿಸಲು ರಕ್ಷಣಾ ಉತ್ಪಾದನಾ ಕೈಗಾರಿಕೆಗೆ ಪ್ರೋತ್ಸಾಹ ನೀಡಲು ನೀಲನಕ್ಷೆ ಸಿದ್ಧಪಡಿಸಲು ಸರಕಾರ ಉದ್ದೇಶಿಸಿದೆ. ರಕ್ಷಣಾ ಉತ್ಪಾದನಾ ನೀತಿಗೆ (ಡಿಪಿಪಿ) ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಅನುಮೋದನೆಗಾಗಿ ಕೇಂದ್ರ ಸಂಪುಟ ಸಭೆಗೆ ಕಡತ ಹೋಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕರಡು ನೀತಿಯಲ್ಲಿ, 2025ರ ವೇಳೆಗೆ ಸೇನಾ ಸರಕು ಮತ್ತು ಸೇವೆಯ ವಹಿವಾಟು 1.7 ಲಕ್ಷ ಕೋಟಿ ರೂ. ಸಾಧಿಸುವ ಗುರಿ ಹಾಕಿಕೊಳ್ಳಲಾಗಿದೆ. ಕಳೆದ 6 ದಶಕಗಳಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಬಹುತೇಕ ಎಲ್ಲಾ ಸೇನಾ ಸಾಮಗ್ರಿಗಳನ್ನು ದೇಶದಲ್ಲೇ ಉತ್ಪಾದಿಸಲು ಯೋಜಿಸಲಾಗಿದೆ. ಜತೆಗೆ ಖರೀದಿ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗುತ್ತಿರುವ ಅನೇಕ ಹಂತದ ಅನುಮೋದನೆಗಳನ್ನೂ ಈ ನೀತಿ ಸರಳಗೊಳಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.