New Delhi: ಕೆನಡಾ ವಲಸಿಗರಲ್ಲಿ ಗುಜರಾತಿ ಭಾಷಿಗರಿಗೆ ಮೂರನೇ ಸ್ಥಾನ
ಮೊದಲಿಗೆ ಪಂಜಾಬಿ ಹಾಗೂ 2ನೇ ಸ್ಥಾನದಲ್ಲಿ ಹಿಂದಿ
Team Udayavani, Nov 1, 2024, 12:02 PM IST
ಮಲಯಾಳ ಭಾಷಿಕರಿಗೆ 4ನೇ ಸ್ಥಾನ
ಹೊಸದಿಲ್ಲಿ: ಕೆನಡಾದಲ್ಲಿ ಭಾರತೀಯ ವಲಸಿಗರು ಮಾತನಾಡುವ ಭಾಷೆಗಳಲ್ಲಿ ಗುಜರಾತಿ ಭಾಷೆ 3ನೇ ಸ್ಥಾನ ಪಡೆದುಕೊಂಡಿದೆ. ಪಂಜಾಬಿ ಹಾಗೂ ಹಿಂದಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿವೆ.
‘ಸ್ಟಾಟಿಸ್ಟಿಕ್ಸ್ ಕೆನಡಾ’ ನೀಡಿರುವ ದಾಖಲೆಗಳ ಪ್ರಕಾರ ಆ ದೇಶದಲ್ಲಿ 1980ರ ಬಳಿಕ 87,900 ಮಂದಿ ಗುಜರಾತಿಗಳು ನೆಲೆಸಿದ್ದಾರೆ. 2016ರಿಂದ 2021ರ ವೇಳೆಯಲ್ಲಿ ವಲಸೆ ಬಂದೆ ಗುಜರಾತಿಗಳ ಪ್ರಮಾಣದಲ್ಲಿ ಶೇ.26ರಷ್ಟು ಏರಿಕೆಯಾಗಿದೆ. ಇದೇ ವೇಳೆ ಹಿಂದಿ ಮಾತನಾಡುವವರ ಸಂಖ್ಯೆ ಗಣನೀಯವಾಗಿ ಶೇ.114ರಷ್ಟು ಏರಿಕೆ ಕಂಡರೆ, ಪಂಜಾಬಿ ಮಾತನಾಡುವವರ ಸಂಖ್ಯೆ ಶೇ.22ರಷ್ಟು ಏರಿಕೆ ಆಗಿದೆ.
2011ರಿಂದ ವಲಸೆ ಹೋದವರಲ್ಲಿ 75,475 ಮಂದಿ ಪಂಜಾಬಿ ಮಾತನಾಡು ವ ವರು ಮೊದಲ ಸ್ಥಾನದಲ್ಲಿ 35,170 ಮಂದಿ ಹಿಂದಿ ಮಾತನಾಡುವವರು 2ನೇ ಸ್ಥಾನದಲ್ಲಿ, ಹಾಗೂ 22,935 ಮಂದಿ ಗುಜರಾತಿ ಮಾತನಾಡುವವರು 3ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಗುಜರಾತಿ ಬಳಿಕ 15440 ಮಂದಿ ಯೊಂದಿಗೆ 4ನೇ ಸ್ಥಾನದಲ್ಲಿ ಮಲಯಾಳ ಹಾಗೂ ಬಂಗಾಲಿ ಭಾಷೆ ಮಾತನಾಡು ವರರ ಸಂಖ್ಯೆ 13,835 ಇದ್ದು, 5ನೇ ಸ್ಥಾನ ಪಡೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur: ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!
Udupi: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
25 ಬಿಲಿಯನ್ ಕಿ.ಮೀ ದೂರದ ಅಂತರತಾರಾ ಬಾಹ್ಯಾಕಾಶದಲ್ಲಿ ಸಮಸ್ಯೆಗೆ ಸಿಲುಕಿದ ವೊಯೇಜರ್ 1
Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್’
Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.