ಶೇ.90 ಭರ್ತಿಯಾದರೆ ಟ್ರೈನ್ ಯಾನ ; ರೈಲ್ವೇ ಸಚಿವಾಲಯದಿಂದ ಹೊಸ ನಿಯಮ ಪ್ರಕಟ
Team Udayavani, May 4, 2020, 5:59 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಿಕರನ್ನು ಹೊತ್ತೂಯ್ಯುವ ಶ್ರಮಿಕ ವಿಶೇಷ ರೈಲುಗಳಿಗೆ ಸಂಬಂಧಿಸಿ ರವಿವಾರ ರೈಲ್ವೆ ಇಲಾಖೆಯು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕನಿಷ್ಠ ಶೇ.90ರಷ್ಟು ಆಸನಗಳು ಭರ್ತಿಯಾಗುವುದಿದ್ದರೆ ಮಾತ್ರ ಶ್ರಮಿಕ ರೈಲು ಸಂಚರಿಸಬಹುದು ಎಂದು ತನ್ನ ವಲಯಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ಇಲಾಖೆ ಸೂಚಿಸಿದೆ.
ರೈಲು ಹೊರಡುವ ಪ್ರದೇಶದ ರಾಜ್ಯ ಸರಕಾರವು ಆಯಾ ನಿಲ್ದಾಣಗಳಲ್ಲಿ ಸೂಕ್ತ ಭದ್ರತೆ ಒದಗಿಸಬೇಕು. ಅನುಮತಿ ಇರುವ ಪ್ರಯಾಣಿಕರಷ್ಟೇ ರೈಲಲ್ಲಿ ಪ್ರಯಾಣ ಬೆಳೆಸುವಂತೆ ನೋಡಿಕೊಳ್ಳಬೇಕು ಎಂದೂ ಹೇಳಿದೆ.
ಮಾರ್ಗಸೂಚಿಯಲ್ಲಿ ಏನಿದೆ?
– ಸಾಮಾಜಿಕ ಅಂತರ ಕಾಪಾಡಿಕೊಂಡು(ಮಧ್ಯದ ಬರ್ತ್ ಅನ್ನು ಲೆಕ್ಕಕ್ಕೆ ಪರಿಗಣಿಸದೆ) ಸುಮಾರು 1200 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಪ್ರತಿ ರೈಲು ಹೊಂದಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ರಾಜ್ಯ ಸರಕಾರಗಳು ಪ್ರಯಾಣಿಕರ ಸಂಚಾರಕ್ಕೆ ಯೋಜನೆ ರೂಪಿಸಬೇಕು.
– ರಾಜ್ಯಗಳು ಸೂಚಿಸಿರುವ ಸಂಖ್ಯೆಯ ಆಧಾರದಲ್ಲಿ ರೈಲ್ವೆ ಇಲಾಖೆಯೇ ಟಿಕೆಟ್ ಅನ್ನು ಮುದ್ರಿಸುತ್ತದೆ. ನಂತರ ಅವುಗಳನ್ನು ಸ್ಥಳೀಯ ಸರಕಾರದ ಅಧಿಕಾರಿಗಳಿಗೆ ನೀಡುತ್ತದೆ.
– ಸ್ಥಳೀಯ ಸರಕಾರದ ಅಧಿಕಾರಿಗಳು ತಾವು ಅನುಮತಿ ನೀಡಿದ ಪ್ರಯಾಣಿಕರಿಂದ ರೈಲ್ವೆ ಪ್ರಯಾಣ ದರವನ್ನು ಪಡೆದು, ಅವರಿಗೆ ಟಿಕೆಟ್ ವಿತರಿಸಬೇಕು. ಟಿಕೆಟ್ ಮೊತ್ತ ಸಂಗ್ರಹವಾದ ಬಳಿಕ ಒಟ್ಟು ಮೊತ್ತವನ್ನು ರೈಲ್ವೆಗೆ ಪಾವತಿಸಬೇಕು
– ಎಲ್ಲ ಪ್ರಯಾಣಿಕರೂ ಮಾಸ್ಕ್ ಧರಿಸುವುದು ಕಡ್ಡಾಯ. ಜತೆಗೆ, ಎಲ್ಲರೂ ಆರೋಗ್ಯಸೇತು ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡಿರಬೇಕು
– ಯಾವುದೇ ಹಂತದಲ್ಲಾದರೂ ಸುರಕ್ಷತೆ, ಭದ್ರತೆ ಮತ್ತು ನೈರ್ಮಲ್ಯದ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದೆನಿಸಿದರೆ ವಿಶೇಷ ರೈಲಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಸಂಪೂರ್ಣ ಅಧಿಕಾರ ರೈಲ್ವೆಗಿರುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.