ಸಂಸದರಿಗೆ ಹೊಸ ವಸತಿ ಸಮುಚ್ಚಯ
Team Udayavani, Aug 20, 2019, 5:30 AM IST
ಹೊಸದಿಲ್ಲಿ: ಲೋಕಸಭೆಗೆ ಇದೇ ಮೊದಲ ಬಾರಿಗೆ ಚುನಾಯಿತರಾಗಿರುವ ಸಂಸದರಿಗಾಗಿ ದಿಲ್ಲಿಯ ಲ್ಯೂಟೆನ್ಸ್ ಪ್ರಾಂತ್ಯದಲ್ಲಿ ನಿರ್ಮಿಸಲಾಗಿರುವ 36 ಅತ್ಯಾಧುನಿಕ ಸರಕಾರಿ ಫ್ಲ್ಯಾಟುಗಳನ್ನು ಪ್ರಧಾನಿ ನರೇಂದ್ರ ಮೋದಿ, ಸೋಮವಾರ ಲೋಕಾರ್ಪಣೆಗೊಳಿಸಿದರು.
ದಶಕಗಳಷ್ಟು ಹಳೆಯದಾದ ಸಂಸದರ ಸರಕಾರಿ ನಿವಾಸಗಳನ್ನು ಕೆಡವಿ, ಆಧುನಿಕ ಸೌಲಭ್ಯಗಳುಳ್ಳ ಹೊಸ ಫ್ಲ್ಯಾಟ್‌ಗಳನ್ನು ಕಟ್ಟುವ ಕಾಮಗಾರಿಗೆ 2017ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಕೇಂದ್ರ ಲೋಕೋಪ ಯೋಗಿ ಇಲಾಖೆಯಡಿ, ಮೊದಲ ಹಂತದಲ್ಲಿ 36 ನಿವಾಸಗಳನ್ನು ನಿರ್ಮಿಸಲು 92 ಕೋಟಿ ರೂ. ಮಂಜೂರು ಮಾಡಲಾಗಿತ್ತು. 80 ಕೋಟಿ ರೂ.ಗಳಲ್ಲೇ ಈ ಮನೆಗಳನ್ನು ನಿರ್ಮಿಸಲಾಗಿದೆ.
ರಾಷ್ಟ್ರಪತಿ ಭವನಕ್ಕೆ ಅಭಿಮುಖವಾಗಿರುವ ಈ ಫ್ಲ್ಯಾಟ್‌ಗಳಿರುವ ಪ್ರತಿ ಸಂಕೀರ್ಣದಲ್ಲಿ, ಸೋಲಾರ್ ಪ್ಯಾನೆಲ್‌ಗಳು, ಎಲ್‌ಇಡಿ ದೀಪ ಗಳು, ಪ್ರತಿ ಫ್ಲ್ಯಾಟ್‌ಗೆ ಎರಡು ಕಾರುಗಳ ಲೆಕ್ಕಾ ಚಾರದಲ್ಲಿ ಬೇಸ್‌ಮೆಂಟ್ ಪಾರ್ಕಿಂಗ್ ಸೇರಿ ದಂತೆ ಎಲ್ಲ ಆಧುನಿಕ ಸೌಲಭ್ಯಗಳಿವೆ.
ಮನೆ ತೊರೆಯದ ಮಾಜಿ ಎಂಪಿಗಳಿಗೆ ನೀರಿಲ್ಲ!: ಅವಧಿ ಮುಗಿದಿದ್ದರೂ ತಮಗೆ ನೀಡ ಲಾಗಿರುವ ಸರಕಾರಿ ಬಂಗಲೆಗಳನ್ನು ಬಿಡದಿ ರುವ 200ಕ್ಕೂ ಹೆಚ್ಚು ಮಾಜಿ ಸಂಸದರಿಗೆ ಚಾಟಿ ಬೀಸಿರುವ ಕೇಂದ್ರ ಸರಕಾರ, ಇನ್ನು 7 ದಿನಗಳ ಒಳಗಾಗಿ ಬಂಗಲೆಗಳನ್ನು ಖಾಲಿ ಮಾಡುವಂತೆ ತಾಕೀತು ಮಾಡಿದೆ. ಇಲ್ಲವಾದರೆ, ಬಂಗಲೆಗೆ ನೀಡಲಾಗಿ ರುವ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿ ಸಿದೆ. ನಿಯಮ ಗಳ ಪ್ರಕಾರ, 16ನೇ ಲೋಕಸಭೆ ವಿಸರ್ಜನೆಗೊಂಡ ಒಂದು ತಿಂಗಳೊಳಗೆ ಬಂಗಲೆ ಗಳನ್ನು ತೊರೆಯ ಬೇಕು. ಅದಕ್ಕೆ ಮಾಜಿ ಸಂಸ ದರು ಮನಸ್ಸು ಮಾಡಿಲ್ಲ. ಇದರಿಂದಾಗಿ, ಹೊಸ ಸಂಸದರಿಗೆ ನಿವಾಸ ನೀಡುವುದು ಕಷ್ಟ ವಾಗಿದೆ. ಹಾಗಾಗಿಯೇ, ಕೇಂದ್ರದ ಮಾಜಿ ಸಂಸದರನ್ನು ತೆರವುಗೊಳಿಸಲು ಕೇಂದ್ರ ಬಿಗಿಕ್ರಮ ಕೈಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.