ಮಕ್ಕಳಿಗಿನ್ನು ಗದ್ದೆ , ತೋಟಗಳಲ್ಲೂ ಶಿಕ್ಷಣ
Team Udayavani, Jun 17, 2018, 6:00 AM IST
ಹೊಸದಿಲ್ಲಿ: ಇನ್ನು ಮುಂದೆ ಶಾಲಾ ಪಠ್ಯಕ್ರಮದಲ್ಲಿ ಏಕತಾನತೆ ಇರುವುದಿಲ್ಲ. ವಿವರಣೆಯ ಜತೆಗೆ ಪ್ರಾಯೋಗಿಕವಾಗಿ ಅದರ ಅನುಭೂತಿ ಪಡೆಯುವಂಥ ವಿಚಾರವನ್ನು ಸೇರ್ಪಡೆ ಮಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಮಾನವ ಸಂಪದ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಚಿಂತನೆ ನಡೆಸಿದೆ.
ಒಂದರಿಂದ ಎಂಟನೇ ತರಗತಿಯ ವರೆಗಿನ ಪಠ್ಯಕ್ರಮದಲ್ಲಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆದಿದೆ. ಇದರ ಜತೆಗೆ ವೃತ್ತಿಪರ ಶಿಕ್ಷಣಗಳಲ್ಲಿ ಇರುವ ಇಂಟರ್ನ್ಶಿಪ್ ವ್ಯವಸ್ಥೆಯನ್ನೂ ಪಠ್ಯಕ್ರಮದಲ್ಲಿ ಅಳವಡಿಸುವ ಇರಾದೆ ಸರಕಾರದ್ದು. ತರಗತಿಯಲ್ಲಿ ನಿಗದಿತ ಅವಧಿಯಲ್ಲಿ ಪಾಠವನ್ನು ಆಲಿಸುವುದರ ಜತೆಗೆ ಇತರ ಅವಧಿಯಲ್ಲಿ ಗದ್ದೆ, ತೋಟ, ಅಂಚೆ ಕಚೇರಿ, ಕಾರ್ಖಾನೆ, ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡಬೇಕು. ಈ ಮೂಲಕ ಆಯಾ ಕ್ಷೇತ್ರದ ಅಲ್ಲಿನ ಕಾರ್ಯಚಟುವಟಿಕೆಗಳನ್ನು ಅರಿಯುವ ಅವ ಕಾಶ ನೀಡಲು ಯೋಚಿಸಲಾಗಿದೆ. ಇದಲ್ಲದೆ ವರ್ಷದಲ್ಲಿ ಕೆಲವು ದಿನ ಸಂಸ್ಥೆ ಅಥವಾ ಸರಕಾರಿ ಕಚೇರಿಗಳಲ್ಲಿ ಪ್ರಾಯೋಗಿಕ ತರಬೇತಿ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ. ಉದಾಹರಣೆಗೆ ಅಂಚೆ ಕಚೇರಿಗೆ ಸಂಬಂಧಿಸಿದ ಪಾಠದಲ್ಲಿ ಅಲ್ಲಿ ಅಂಚೆ ಚೀಟಿ, ಉಳಿತಾಯ ಖಾತೆ ಸಹಿತ ಹಲವು ವಹಿವಾಟುಗಳ ಬಗ್ಗೆ ವಿವರಣೆ ಇರುತ್ತದೆ.
ಶಾಲೆಯ ವೇಳೆ ಬದಲು ಸಾಧ್ಯತೆ
ಪ್ರಾಯೋಗಿಕ ಕಲಿಕೆಯ ಭರದಲ್ಲಿ ಮಕ್ಕಳ ಮೇಲೆ ಪಠ್ಯ ಹಾಗೂ ಪಠ್ಯಕ್ರಮಗಳ ಒತ್ತಡ ಬೀಳದಂತೆ ಮಾಡಲು ಪಠ್ಯ ಕ್ರಮದಲ್ಲಿ ಇಳಿಕೆಗಾಗಿ ಶಾಲಾ ಸಮಯ ಬದಲಿಗೂ ಉದ್ದೇಶಿಸಲಾಗಿದೆ. ಚರ್ಚೆ, ಭಾಷಣ, ಜವಾಬ್ದಾರಿ, ಸಾಮರ್ಥ್ಯ, ನಡೆ-ನುಡಿಗಳನ್ನು ಸಕಾರಾತ್ಮಕವಾಗಿ ರೂಪಿಸುವ ಬಗ್ಗೆ ಆದ್ಯತೆಗೆ ಪ್ರಮುಖ ಸಾಧಕರ ಭಾಷಣಗಳ ವೀಡಿಯೋಗಳನ್ನು ನೋಡಲು, ವೈಜ್ಞಾನಿಕ- ಗಣಿತ ಮಾದರಿಗಳನ್ನು ತಯಾರಿಸಲು ಉತ್ತೇಜನ ನೀಡಲು ತೀರ್ಮಾನಿಸಲಾಗಿದೆ.
1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಹೊಸ ಕಲಿಕಾ ಕ್ರಮ
ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಇಂಟರ್ನ್ ಶಿಪ್ ಕಡ್ಡಾಯಗೊಳಿಸಲು ಚಿಂತನೆ
ಪಠ್ಯಕ್ರಮ ಹೊರೆಯಾಗದಿರಲು ಶಾಲಾ ವೇಳಾ ಪಟ್ಟಿ ಬದಲಿಗೆ ಆಲೋಚನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚೆನ್ನೈ ಲೈಂಗಿಕ ಕಿರುಕುಳ ಕೇಸ್: ಎಸ್‌ಐಟಿ ತನಿಖೆಗೆ ಹೈಕೋರ್ಟ್ ಆದೇಶ
Pinarayi Vijayan: ಸಿಂಗ್ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.