ಮದುವೆಯಾದ ನಾಲ್ಕೇ ದಿನಕ್ಕೆ ಗಂಡನ ಮನೆಯಿಂದ ಹಣ, ಒಡವೆ ಕದ್ದು ಪರಾರಿಯಾದ ಯುವತಿ
ನವವಿವಾಹಿತೆ ಬಡಿಸಿದ ಮೃಷ್ಟಾನ್ನ ತಿಂದು ಪ್ರಜ್ಞೆ ತಪ್ಪಿದ ಗಂಡನ ಮನೆಯವರು
Team Udayavani, Dec 15, 2019, 2:53 PM IST
ಉತ್ತರಪ್ರದೇಶ: ನವವಿವಾಹಿತೆಯೊಬ್ಬಳು ಗಂಡನ ಮನೆಯವರಿಗೆ ಮತ್ತುಬರಿಸುವ ಊಟವನ್ನು ಉಣಬಡಿಸಿ ಆ ಬಳಿಕ ಹಣ ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾದ ವಿಚಿತ್ರ ಘಟನೆ ಬದೌನ್ ಜಿಲ್ಲೆಯ ಚೋಟಾ ಗ್ರಾಮದಲ್ಲಿ ನಡೆದಿದೆ.
ಮನೆಯವರು ನಿದ್ದೆಯಿಂದ ಎಚ್ಚೆತ್ತ ಬಳಿಕ ನವವಿವಾಹತೆ ಕಾಣೆಯಾಗಿದ್ದನ್ನು ಕಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾತ್ರವಲ್ಲದೆ ಚಿನ್ನಾಭರಣ ಮತ್ತು ನಗದು ಕೂಡ ಜೊತೆಗೆ ಕೊಂಡೊಯ್ದಿರುವುದನ್ನು ಕಂಡು ದಂಗಾಗಿದ್ದಾರೆ.
ಗಂಡನ ಮನೆಯಿಂದ ನಾಪತ್ತೆಯಾದವಳ ಹೆಸರನ್ನು ರಿಯಾ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 9 ರಂದು ಅಜಂಗಢದ ರಿಯಾ, ಬದೌನ್ ಗ್ರಾಮದ ಪ್ರವೀಣ್ ಅವರನ್ನು ಮದುವೆಯಾಗಿದ್ದಳು. ಶುಕ್ರವಾರ ಸಂಜೆ ಮನೆಯವರಿಗೆಲ್ಲ ಪ್ರಜ್ಞೆ ತಪ್ಪುವ ಔಷಧವನ್ನು ಊಟದಲ್ಲಿ ಬೆರೆಸಿ ನೀಡಿದ್ದಾಳೆ. ಆ ಬಳಿಕ 70,000 ನಗದು ಮತ್ತು 3 ಲಕ್ಷ ಬೆಲೆಬಾಳುವ ಚಿನ್ನಾಭರಣದ ಜೊತೆ ಪರಾರಿಯಾಗಿದ್ದಾಳೆ. ವಿವಾಹ ನಡೆಯಲು ಕಾರಣವಾದ ಮದುವೆ ಏಜೆಂಟ್ ಟಿಂಕು ಎಂಬಾತನು ಕೂಡ ನಾಪತ್ತೆಯಾಗಿದ್ದಾನೆ.
ಈ ಕುರಿತು ಪ್ರವೀಣ್ ಮನೆಯವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮದುವೆಗಾಗಿ 4 ಲಕ್ಷ ರೂ ಖರ್ಚು ಮಾಡಿದ್ದು, ರಿಯಾ ಕುಟುಂಬಸ್ಥರು ಬಹಳ ಬಡವರಾಗಿದ್ದರಿಂದ ಚಿನ್ನಾಭರಣ ಕೊಳ್ಳಲು ಕೂಡ ಹಣವನ್ನು ನೀಡಿದ್ದೇವು. ಮದುವೆಗೆ ಟಿಂಕು ಎಂಬಾತ ಮಧ್ಯಸ್ಥಿಕೆ ವಹಿಸಿದ್ದು ಈತನೇ ಖರ್ಚು ವೆಚ್ಚಗಳನ್ನು ನೋಡಿಕೊಂಡಿದ್ದರಿಂದ ಸಂಪೂರ್ಣ ಜವಬ್ದಾರಿಯನ್ನು ಆತನಿಗೆ ನೀಡಿದ್ದೇವು, ಆದರೆ ನಮಗೀಗ ಮೋಸ ಮಾಡಿದ್ದಾರೆ ಎಂದು ಪ್ರವೀಣ್ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.