ಹೊಸ ಸಂಸತ್ ಭವನದಲ್ಲಿ ಅಕ್ಕಮಹಾದೇವಿ ವರ್ಣಚಿತ್ರ!
ಪಾರ್ಲಿಮೆಂಟ್ ಗೋಡೆಗಳಲ್ಲಿ 75 ಮಹಿಳೆಯರಿಗೆ ಸ್ಥಾನ; ಕೇಂದ್ರ ಸರ್ಕಾರ ಚಿಂತನೆ
Team Udayavani, May 30, 2022, 7:00 AM IST
ನವದೆಹಲಿ: ಸೆಂಟ್ರಲ್ ವಿಸ್ತಾ ಯೋಜನೆಯಡಿ ದೆಹಲಿಯಲ್ಲಿ ತಲೆಎತ್ತಲಿರುವ ದೇಶದ ನೂತನ ಸಂಸತ್ ಭವನದ ಗೋಡೆಯನ್ನು ಕನ್ನಡದ ಮೊದಲ ಕವಯಿತ್ರಿ, ಶಿವಶರಣೆ ಅಕ್ಕಮಹಾದೇವಿಯ ವರ್ಣಚಿತ್ರವು ಅಲಂಕರಿಸಲಿದೆ.
ಅಕ್ಕಮಹಾದೇವಿಯವರು ಮಾತ್ರವಲ್ಲದೇ ಭಾರತದ ಇತಿಹಾಸ ಹಾಗೂ ಪುರಾಣಗಳಲ್ಲಿ ಸ್ಥಾನ ಪಡೆದಿರುವಂಥ ದ್ರೌಪದಿ, ಸೀತೆ, ರಜಿಯಾ ಸುಲ್ತಾನಾ, ಅಹಿಲ್ಯಾ ಹೋಳ್ಕರ್ ಮತ್ತು ಇತರೆ ಮಹಿಳಾಮಣಿಗಳ ವರ್ಣಚಿತ್ರಗಳನ್ನೂ ಸಂಸತ್ ಭವನದ ಗೋಡೆಗಳಲ್ಲಿ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ.
75 ಮಹಿಳೆಯರಿಗೆ ಗೌರವ:
ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ವೇದಕಾಲದಿಂದ 1947ರವರೆಗಿನ 75 ಮಹಿಳೆಯರ ಚಿತ್ರಗಳನ್ನು ಸಂಸತ್ ಭವನದಲ್ಲಿ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ. ಅವರ ವರ್ಣಚಿತ್ರಗಳು ಮಾತ್ರವಲ್ಲದೇ, ಅವರ ಕುರಿತಾದ ಮಾಹಿತಿ, ದೇಶದ ಇತಿಹಾಸದಲ್ಲಿ ಅವರ ಪಾತ್ರದ ಕುರಿತ ಸಂಕ್ಷಿಪ್ತ ವಿವರಣೆಯೂ ಇಲ್ಲಿರಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ ವೇಳೆಗೆ ಸಂಸತ್ ಭವನದ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದ್ದು, ಸೆಂಟ್ರಲ್ ಅವೆನ್ಯೂ ನವೀಕರಣ ಕಾರ್ಯ ಜೂನ್ ಅಂತ್ಯದಲ್ಲಿ ಮುಗಿಯಲಿದೆ. ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿ, ಸರ್ಕಾರವು ಹೊಸ ಸಂಸತ್ ಭವನ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗಾಗಿ ಹೊಸ ನಿವಾಸ, 51 ಸಚಿವಾಲಯಗಳುಳ್ಳ ಸೆಂಟ್ರಲ್ ಸೆಕ್ರೆಟರಿಯೇಟ್ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
ಯಾರ್ಯಾರ ಚಿತ್ರಗಳು ರಾರಾಜಿಸಲಿವೆ?
12ನೇ ಶತಮಾನದ ಕನ್ನಡ ಕವಯಿತ್ರಿ ಅಕ್ಕಮಹಾದೇವಿ, 18ನೇ ಶತಮಾನದ ಮರಾಠರ ರಾಣಿ ಅಹಿಲ್ಯಾ ಹೋಳ್ಕರ್, ಮಹಾಭಾರತದ ಪಂಚಪಾಂಡವರ ಪತ್ನಿಯಾದ ದ್ರೌಪದಿ, ಶ್ರೀರಾಮನ ಮಡದಿ ಸೀತೆ, ವೇದಕಾಲದ ಇತರೆ ಕವಯಿತ್ರಿಗಳಾದ ಅದಿತಿ, ಅಪ್ಪಳ ಮತ್ತು ಗಾರ್ಗಿ, ಕಾಶ್ಮೀರದ ಮಧ್ಯಕಾಲೀನ ಶೈವ ಕವಯಿತ್ರಿ ಲಲ್ಲೇಶ್ವರಿ, 16ನೇ ಶತಮಾನದ ಹಿಂದಿ ಕವಯಿತ್ರಿ ಹಾಗೂ ಕೃಷ್ಣನ ಭಕ್ತೆ ಮೀರಾಬಾಯಿ, 13ನೇ ಶತಮಾನದಲ್ಲಿ ದೆಹಲಿಯನ್ನು ಆಳಿದ ರಜಿಯಾ ಸುಲ್ತಾನಾ ಅವರ ವರ್ಣಚಿತ್ರಗಳು ಸಂಸತ್ ಭವನದ ಗೋಡೆಗಳಲ್ಲಿ ರಾರಾಜಿಸುವ ಸಾಧ್ಯತೆಯಿದೆ ಎಂದೂ ಮೂಲಗಳು ಹೇಳಿವೆ.
ಇದೇ ವೇಳೆ, ಮುಸ್ಲಿಮರ ಬುರ್ಖಾ ಪದ್ಧತಿಯ ವಿರುದ್ಧ ಹೋರಾಡಿದ್ದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಸುಗ್ರಾ ಮಿರ್ಜಾ ಅವರ ಚಿತ್ರವನ್ನೂ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.