ಶೀಘ್ರ ಭಾರತ-ಕಾಠ್ಮಂಡು ರೈಲ್ವೇ ಲೈನ್ ನಿರ್ಮಾಣ: ಪ್ರಧಾನಿ ಮೋದಿ
Team Udayavani, Apr 7, 2018, 4:17 PM IST
ಹೊಸದಿಲ್ಲಿ : ಭಾರತವನ್ನು ಕಾಠ್ಮಂಡು ಜತೆಗೆ ಜೋಡಿಸುವ ಹೊಸ ರೈಲ್ವೆ ಲೈನ್ ನಿರ್ಮಾಣಕ್ಕೆ ಭಾರತ- ನೇಪಾಲ ಒಪ್ಪಿಕೊಂಡಿದ್ದು ಶೀಘ್ರವೇ ಈ ಯೋಜನೆ ಅನುಷ್ಠಾನವಾಗಲಿದೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ಶನಿವಾರ ಹೇಳಿದ್ದಾರೆ.
ಅಲ್ಲದೇ ಉಭಯ ದೇಶಗಳ ನಡುವಿನ ಎಲ್ಲ ಸಂಪರ್ಕ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದಕ್ಕೆ ಉಭಯ ದೇಶಗಳು ಒಪ್ಪಿಕೊಂಡಿರುವಾಗಿ ಪ್ರಧಾನಿ ಮೋದಿ ಅವರು ನೇಪಾಲ ಪ್ರದಾನಿ ಕೆ ಪಿ ಓಲಿ ಅವರೊಂದಿಗೆ ನಡೆಸಿಕೊಟ್ಟ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.
“ನೇಪಾಲದೊಂದಿಗೆ ನಾವು ರೈಲು ಮತ್ತು ಜಲಮಾರ್ಗಗಳನ್ನು ಸುಧಾರಿಸುವ ಉದ್ದೇಶ ಹೊಂದಿದ್ದೇವೆ. ಭದ್ರತೆಯ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ನಡುವಿನ ಬಲವಾದ ಸಂಬಂಧಗಳಿವೆ. ಅಂತೆಯೇ ನಮ್ಮ ನಡುವಿನ ಮುಕ್ತ ಗಡಿಗಳ ದುರ್ಬಳಕೆಯನ್ನು ನಿಲ್ಲಿಸುವುದಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿದರು.
ನೇಪಾಲ ಪ್ರಧಾನಿ ಓಲಿ ಅವರು ಮಾತನಾಡುತ್ತಾ, ‘ಭಾರತದೊಂದಿಗೆ ಸಂಬಂಧಗಳಿಗೆ ನೇಪಾಲ ಅತ್ಯಧಿಕ ಮಹತ್ವವನ್ನು ಕೊಡುತ್ತದೆ; ನಮ್ಮ ನಡುವೆ ಐತಿಹಾಸಿಕ ಮತ್ತು ಪ್ರಾಕ್ತನ ಸಂಬಂಧಗಳಿವೆ. ಪರಸ್ಪರರು ಕೊಟ್ಟು ಪಡೆಯುವಂತಹ ಅನೇಕ ವಿಷಯಗಳು ಇವೆ. ಸಾಧ್ಯವಿರುವಷ್ಟು ಬೇಗನೆ ನೇಪಾಲಕ್ಕೆ ಬನ್ನಿ ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದೇನೆ. ಅಂತೆಯೇ ಅವರ ಭೇಟಿ ಶೀಘ್ರವೇ ಸಾಧ್ಯವಾಗಲೆಂದು ಹಾರೈಸುತ್ತೇನೆ’ ಎಂದು ಹೇಳಿದರು.
ಉಭಯ ನಾಯಕರು ಅನೇಕ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಸುಧಾರಿಸುವ ಮತ್ತು ಮೇಲ್ಮಟ್ಟಕ್ಕೆ ಒಯ್ಯುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರು. ಮೋದಿ ಅವರು ನಿನ್ನೆ ಶುಕ್ರವಾರ ನೇಪಾಲಿ ಪ್ರಧಾನಿ ಓಲಿ ಅವರನ್ನು ದಿಲ್ಲಿಯಲ್ಲಿನ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು.
ನೇಪಾಲ ಪ್ರಧಾನಿ ಇಂದು ಶನಿವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾದರು. ಓಲಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur; ಹಿಂಸಾಚಾರದ ಬಳಿಕ ಕೇಂದ್ರದಿಂದ 20 CAPF ತುಕಡಿಗಳ ರವಾನೆ
ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ
Supreme Court: ಆರೋಪಿ, ಅಪರಾಧಿ ಮನೆಯನ್ನು ಏಕಾಏಕಿ ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು
Ayodhya; ಖಲಿಸ್ಥಾನ್ ನಾಯಕನಿಂದ ಬೆದರಿಕೆ: ರಾಮ ಮಂದಿರದ ಭದ್ರತೆ ಇನ್ನಷ್ಟು ಹೆಚ್ಚಳ
By-election: ರಾಹುಲ್ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?
MUST WATCH
ಹೊಸ ಸೇರ್ಪಡೆ
Vitla: ಉದ್ಘಾಟನೆಯಾದ ನಾಡಕಚೇರಿ ತೆರೆದಿಲ್ಲ !
Manipur; ಹಿಂಸಾಚಾರದ ಬಳಿಕ ಕೇಂದ್ರದಿಂದ 20 CAPF ತುಕಡಿಗಳ ರವಾನೆ
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ
John Michael D’Cunh ಟೀಕೆ;ಜೋಶಿ ತತ್ ಕ್ಷಣ ರಾಜೀನಾಮೆ ನೀಡಲಿ: ಎಚ್.ಕೆ. ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.