ಹೊಸ ರ್‍ಯಾಂಕಿಂಗ್ ವ್ಯವಸ್ಥೆ
ಆರ್‌ಎಸ್‌ಎಸ್ ಅಂಗಸಂಸ್ಥೆಯ ಹೊಸ ಪ್ರಸ್ತಾಪ
Team Udayavani, Jul 28, 2019, 5:18 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿನ ವಿಶ್ವವಿದ್ಯಾಲಯಗಳ ಗುಣಮಟ್ಟದ ಶ್ರೇಯಾಂಕಕ್ಕೆ ಹಲವು ಸಂಸ್ಥೆಗಳು ಸಮೀಕ್ಷೆ ನಡೆಸಿ ಆಗಾಗ ಫಲಿತಾಂಶ ಪ್ರಕಟಿಸುತ್ತದೆ. ಇದೀಗ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಂಗಸಂಸ್ಥೆ ಭಾರತೀಯ ಶಿಕ್ಷಣ ಮಂಡಲ (ಬಿಎಸ್‌ಎಂ) ದೇಶೀಯ ವ್ಯವಸ್ಥೆಯ ವಿವಿ ರ್‍ಯಾಂಕಿಂಗ್ ವ್ಯವಸ್ಥೆ ಜಾರಿಗೆ ಸಲಹೆ ಮಾಡಿದೆ.
ಇದು ಗುರು (ಗ್ಲೋಬಲ್ ಯುನಿವರ್ಸಿಟಿ ರ್‍ಯಾಂಕಿಂಗ್ ಯುಟಿಲಿಟಿ) ಎಂಬ ಶೀರ್ಷಿಕೆಯಲ್ಲಿ ಇರಬೇಕು ಎಂದು ಅದು ಪ್ರತಿಪಾದಿಸಿದೆ. 2020ರ ಏಪ್ರಿಲ್ನಿಂದ ಬಿಎಸ್‌ಎಂ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೊಳಿಸಲಿದೆ. ಅದೇ ಸಂದರ್ಭದಲ್ಲಿ ಸಂಘಟನೆ ಐವತ್ತು ವರ್ಷಗಳನ್ನೂ ಪೂರೈಸಲಿದೆ. ಬಿಎಸ್‌ಎಂ 2016ರಲ್ಲಿ ಶುರು ಮಾಡಿದ ‘ರಿಸರ್ಚ್ ಫಾರ್ ರಿಸರ್ಜೆನ್ಸ್ ಫೌಂಡೇಷನ್’ ಸಂಸ್ಥೆಯೇ ಹೊಸ ಮಾದರಿಯ ಶ್ರೇಯಾಂಕವನ್ನು ವಿನ್ಯಾಸ ಮಾಡಿದೆ. ಅದರ ಜತೆಗೆ ಒಪ್ಪಂದ ಮಾಡಿಕೊಂಡಿರುವ ಶಿಕ್ಷಣ ಸಂಸ್ಥೆಗಳ ಮೂಲಕ ಹೊಸ ವ್ಯವಸ್ಥೆಯ ಪ್ರಾಯೋಗಿಕ ಅಳವಡಿಕೆ ನಡೆಯಲಿದೆ.
ಈ ಬಗ್ಗೆ ಮಾತನಾಡಿದ ಬಿಎಸ್‌ಎಂನ ಸಂಘಟನಾ ಕಾರ್ಯದರ್ಶಿ ಮುಕುಲ್ ಕಾನಿಟ್ಕರ್ ಕ್ಯೂಎಸ್, ಶಾಂಘೈ ಬಳಕೆ ಮಾಡುವ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಧ್ಯಯನ ಮಾಡಿದ್ದೇವೆ. ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲಲಿರುವ ನಾವು ಹೊಸ ಮಾದರಿಯನ್ನು ಜಾರಿಗೊಳಿಸಲಿದ್ದೇವೆ ಎಂದಿದ್ದಾರೆ. ಹಲವು ಶಿಕ್ಷಣ ತಜ್ಞರು ಸೇರಿಕೊಂಡು ಹೊಸ ವ್ಯವಸ್ಥೆಯನ್ನು ರೂಪಿಸಿದ್ದಾರೆ ಎಂದು ರಿಸರ್ಚ್ ಫಾರ್ ರಿಸರ್ಜೆನ್ಸ್ ಫೌಂಡೇಷನ್‌ನಲ್ಲಿ ಸಂಶೋಧಕರಾಗಿರುವ ವಿಶ್ವಜಿತ್ ಪೆಂಡ್ಸೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.