bizarre:ಅದೇನಾಯ್ತೋ..ಹನಿಮೂನ್ಗೆಂದು ಬಂದು ಪತಿಯನ್ನೇ ಹೋಟೆಲ್ ನಲ್ಲಿ ಬಿಟ್ಟು ಹೋದ ಪತ್ನಿ!
Team Udayavani, Aug 10, 2023, 12:37 PM IST
ಜೈಪುರ : ಆಗಷ್ಟೇ ಮದುವೆಯಾಗಿ ಪತಿಯೊಂದಿಗೆ ಹನಿಮೂನ್ಗೆಂದು ಭೋಪಾಲ್ನಿಂದ ಜೈಪುರಕ್ಕೆ ಬಂದಿದ್ದ ಜೋಡಿಯ ನಡುವೆ ಅದೇನಾಯಿತೋ ಏನೋ ಪತಿಯನ್ನು ಹೋಟೆಲ್ನಲ್ಲಿ ಬಿಟ್ಟು ಏಕಾಏಕಿ ನಾಪತ್ತೆಯಾಗಿರುವ ಘಟನೆಯೊಂದು ಜೈಪುರದಲ್ಲಿ ನಡೆದಿದೆ.
ಭೋಪಾಲ್ ನ ಜೋಡಿಯೊಂದು ಜುಲೈ 29 ರಂದು ಮದುವೆಯಾಗಿದ್ದು ಆಗಸ್ಟ್ ೫ ರಂದು ಹನಿಮೂನ್ ಗೆಂದು ಜೈಪುರಕ್ಕೆ ಬಂದು ಚೌಮು ಪುಲಿಯಾ ಸಮೀಪದ ಹೋಟೆಲ್ ನಲ್ಲಿ ತಂಗಿದ್ದಾರೆ ಒಂದು ದಿನ ಜೈಪುರದ ಸುತ್ತಮುತ್ತಲಿನ ಎಲ್ಲ ಪ್ರದೇಶಗಳನ್ನು ಸುತ್ತಾಡಿದ ಜೋಡಿ ಮರುದಿನ ಜೈಪುರದ ರಿಂಗಾಸ್ನಲ್ಲಿರುವ ಬಾಬಾ ಖತುಶ್ಯಾಮ್ ಜಿ ದೇವಸ್ಥಾನಕ್ಕೆ ಭೇಟಿ ನೀಡುವ ಯೋಚನೆಯಲ್ಲಿದ್ದರು ಅದಕ್ಕಾಗಿ ಪತಿ ಕಾರು ಬುಕ್ ಮಾಡಲು ತೆರಳಿದ್ದಾನೆ ಕಾರು ಬುಕ್ ಮಾಡಿ ಹೋಟೆಲಿಗೆ ಬರುವಷ್ಟರಲ್ಲಿ ಪತ್ನಿ ರೂಮ್ ನಲ್ಲಿ ಇರಲಿಲ್ಲ,ಇಲ್ಲೇ ಎಲ್ಲೋ ಇರಬೇಕು ಎಂದು ಅತ್ತ ಇತ್ತ ಹುಡುಕಾಡಿದ್ದಾನೆ ಎಲ್ಲೂ ಪತ್ತೆಯಾಗಲಿಲ್ಲ, ಬಳಿಕ ಆಕೆಯ ಮೊಬೈಲ್ ಗೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸಲಿಲ್ಲ, ಬಳಿಕ ಹೋಟೆಲ್ ನವರ ಬಳಿ ಕೇಳಿದಾಗ ಅವರು ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಬಳಿಕ ಹೋಟೆಲ್ ನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪತ್ನಿ ತನ್ನ ಸೂಟ್ ಕೇಸ್ ಹಿಡಿದುಕೊಂಡು ಹೋಟೆಲ್ ನಿಂದ ಹೊರ ಹೋಗಿರುವುದು ಕಂಡು ಬಂದಿದೆ.
ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಕಂಡು ಮನೆಗೆ ಕರೆ ಮಾಡಿದರೆ ಮನೆಗೂ ಬಂದಿಲ್ಲ ಎಂಬ ಉತ್ತರ ಬಂದಿದ್ದು ಅತ್ತೆ ಮನೆಗೆ ಕರೆ ಮಾಡಿದರೆ ಅಲ್ಲೂ ಅದೇ ಉತ್ತರ ಬಂದಿದೆ ಬಳಿಕ ಗಾಬರಿಗೊಂಡ ಪತಿ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ತನ್ನ ಪತ್ನಿ ಕಾಣೆಯಾಗಿರುವುದಾಗಿ ದೂರು ನೀಡಿದ್ದಾನೆ, ದೂರು ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾದ ಮಹಿಳೆಯ ಹುಡುಕಾಟ ನಡೆಸಲು ಆರಂಭಿಸಿದ್ದಾರೆ.
ಇದನ್ನೂ ಓದಿ: Japanese couple: ʼಜೈಲರ್ʼ ನೋಡಲು ಜಪಾನ್ನಿಂದ ಚೆನ್ನೈಗೆ ಬಂದ ದಂಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.