ಪ್ರೇಮ ಪ್ರಕರಣ: ಗೆಳತಿಯ ತಂದೆಯಿಂದ ಹುಡುಗನಿಗೆ ಗುಂಡೇಟು ..?
Team Udayavani, Jul 15, 2022, 12:01 PM IST
ಬಿಹಾರ : ಯುವಕನೊಬ್ಬನ ಮೇಲೆ ಆತನ ಗೆಳತಿಯ ತಂದೆ ಸೇರಿದಂತೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಬಿಹಾರದ ಪುರ್ನಿಯಾ ಎಂಬಲ್ಲಿ ನಡೆದಿದೆ. ಯುವಕನನ್ನು ಖುಷ್ಕಿಬಾಗ್ ಬಾಗೇಶ್ವರ ಕಾಲೋನಿ ನಿವಾಸಿ ಕುನಾಲ್ ಎಂದು ಗುರುತಿಸಲಾಗಿದೆ.
ಯುವಕ ತನ್ನ ಮನೆಗೆ ಬೈಕ್ನಲ್ಲಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಇಬ್ಬರು ಆರೋಪಿಗಳು ಹಿಂದಿನಿಂದ ಬಂದು ನಿಲ್ಲಿಸಿ ಆತನ ತೊಡೆಗೆ ಗುಂಡು ಹಾರಿಸಿದ್ದಾರೆ, ತಕ್ಷಣ ಆತ ನೆಲಕ್ಕೆ ಬಿದ್ದಿದ್ದಾನೆ.
ಗುಂಡಿನ ಸದ್ದು ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ಕುನಾಲ್ ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಗೊಟಬಯ ರಾಜೀನಾಮೆ ಅಂಗೀಕಾರ: ಏಳು ದಿನದಲ್ಲಿ ಲಂಕಾದ ನೂತನ ಅಧ್ಯಕ್ಷರ ಆಯ್ಕೆ: ಸ್ಪೀಕರ್
ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಗಳಲ್ಲಿ ಒಬ್ಬರು ತನ್ನ ಗೆಳತಿಯ ತಂದೆ ಮುನ್ನಾ ಪಾಸ್ವಾನ್ ಆಗಿದ್ದು, ಬೈಕ್ನಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ಗುರುತಿಸಲಾಗಲಿಲ್ಲ ಎಂದು ಕುನಾಲ್ ತನ್ನ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.
2021 ರ ಜನವರಿಯಲ್ಲಿ ಪಾಸ್ವಾನ್ ತನ್ನ ವಿರುದ್ಧ ಅಪಹರಣದ ದೂರು ದಾಖಲಿಸಿದ್ದರು ಮತ್ತು ಅದಕ್ಕಾಗಿ ಅವರನ್ನು ಜೈಲಿಗೆ ಕಳುಹಿಸಲಾಯಿತು ಎಂದು ಈತ ಪೊಲೀಸರಿಗೆ ತಿಳಿಸಿದ್ದಾನೆ. 20 ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದರು. ಅಂದಿನಿಂದ ಬಾಲಕಿಯ ತಂದೆ ಆತನಿಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಇದರ ಹಿಂದೆ ಪೊಲೀಸರಿಗೆ ಪ್ರೇಮ ಪ್ರಕರಣವೊಂದರ ಸಂಬಂಧವಿರುವ ಅನುಮಾನ ಮೂಡಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.