ಪದ್ಮ ಶ್ರೀ ರಿತ್ವಿಕ್ ಘಾಟಕ್‌ರಿಗೆ ಸಂಬಂಧಿಸಿದ ಸಂಗ್ರಹಗಳು ಎನ್‌ಎಫ್‌ಐ ಸ್ವಾಧೀನ
Team Udayavani, May 3, 2019, 12:44 PM IST
ಪುಣೆ: ಭಾರತೀಯ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ, ಪದ್ಮಶ್ರೀ ರಿತ್ವಿಕ್ ಕುಮಾರ್ ಘಾಟಕ್ ಅವರ ನಿಕಟವರ್ತಿಯಾಗಿರುವ ಮಹೇಂದ್ರ ಕುಮಾರ್ ಸಂಗ್ರಹಣೆಯಿಂದ ಬಂದ ಹಳೆಯ ಕಾಲದ ಹೆಚ್ಚಿನ ಸಂಖ್ಯೆಯ ಚಲನಚಿತ್ರಗಳು, ಇತರ ಆಡಿಯೋ-ದೃಶ್ಯ ಮತ್ತು ವೈಯಕ್ತಿಕ ವಸ್ತುಗಳನ್ನು ನ್ಯಾಷನಲ್ ಫಿಲ್ಮ್ ಆರ್ಚೀವ್ ಆಫ್ ಇಂಡಿಯಾ (ಎನ್‌ಎಫ್‌ಐ) ಸ್ವಾಧೀನಪಡಿಸಿಕೊಂಡಿದೆ.
ಸಂಗ್ರಹದಲ್ಲಿ ಹಳೆಯ ಫಿಲ್ಮ್ ರೀಲ್‌ಗಳು, ಛಾಯಾಚಿತ್ರಗಳು, 35 ಎಂಎಂ ಬಣ್ಣದ ಧನಾತ್ಮಕ ಸ್ಲೆ$çಡ್‌ಗಳು, ಕಪ್ಪು ಮತ್ತು ಬಿಳಿ ಋಣಾತ್ಮಕ ಚಲನಚಿತ್ರ ಪಟ್ಟಿಗಳು, ಪೋಸ್ಟರ್‌ಗಳು, ಹಿಂದಿನ ಕಾಲದ ಲಿಪಿಗಳು, ಕ್ಯಾಮೆರಾಗಳು, ಮಸೂರಗಳು, ಫಿಲ್ಮ್ ರೋಲ್‌ಗಳು, ಸಿಡಿಗಳು, ಡಿವಿಡಿಗಳು, ಪುಸ್ತಕಗಳು, ನಿಯತಕಾಲಿಕಗಳು, ಸಂಶೋಧನಾ ಲೇಖನಗಳು, ಬರಹಗಳು, ಪತ್ರಗಳು, ನೋಟ್‌ಗಳು ಮತ್ತು ಮತ್ತು ರಿತ್ವಿಕ್ ಘಾಟಕ್ ಅವರಿಗೆ ಸಂಬಂಧಿಸಿದ ಇತರ ವಸ್ತುಗಳು ಒಳಗೊಂಡಿರುವುದು ವಿಶೇಷತೆಯಾಗಿದೆ.
ಫಿಲ್ಮ್ & ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಇದರ ನಿರ್ದೇಶಕರಾಗಿದ್ದ ರಿತ್ವಿಕ್ ಘಾಟಕ್ ಅವರು ಚಲನಚಿತ್ರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಈ ಸಂಗ್ರಹವು ರಿತ್ವಿಕ್ ಘಾಟಕ್ ಹತ್ತಿರದ ಸಹವರ್ತಿ ಮತ್ತು ಸಹಾಯಕ ಕ್ಯಾಮರಾಮನ್ ಮಹೇಂದ್ರ ಕುಮಾರ್ ಅವರ ವೈಯಕ್ತಿಕ ಸಂಗ್ರಹದಿಂದ ಬಂದಿದೆ. ನ್ಯಾಷನಲ್ ಫಿಲ್ಮ್ ಅರ್ಚಿವ್ ಆಫ್ ಇಂಡಿಯಾ (ಎನ್‌ಎಫ್‌ಎಐ) ಸಂಸ್ಥೆಯು ಸಮಾಜ ವಿಜ್ಞಾನದ ಅಧ್ಯಯನದ ಕೊಲ್ಕತ್ತಾ ಮೂಲದ ಕೇಂದ್ರವಾಗಿದೆ. ಈ ಕೇಂದ್ರಕ್ಕೆ ರಾತ್ರಿ ಹಗಲೆನ್ನದೆ ಸಮಾಜ ಮತ್ತು ವಿಜ್ಞಾನದ ಸಂಶೋಧನಾ ವಿದ್ಯಾಥಿಗಳು ಭೇಟಿ ನೀಡುತ್ತಿರುತ್ತಾರೆ. ಉತ್ತಮ ಸಂರಕ್ಷಣೆಗಾಗಿ ಈ ಎಲ್ಲಾ ಪ್ರಾಚೀನ ವಸ್ತುಗಳು ನಮ್ಮ ಸಂಸ್ಥೆಯ ಸಂಗ್ರಹದಲ್ಲಿರುತ್ತದೆ ಎಂದು ಎನ್‌ಎಫ್‌ಎಐ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಮ್ಯಾಗ್ಡಮ್ ತಿಳಿಸಿದ್ದಾರೆ.
ಇದು ಭಾರತೀಯ ಸಿನಿಮಾ ರಂಗದ ದಂತಕಥೆ ರಿತ್ವಿಕ್ ಘಾಟಕ್ ಅವರು ನಿಕಟ ಸಂಬಂಧ ಹೊಂದಿದ್ದ ಕಲಾವಿದನೋರ್ವನ ಗಣನೀಯ ಸಂಗ್ರಹವಾಗಿದೆ. ನಾವು ಕ್ಯಾನ್‌ಗಳ ವಿಷಯವನ್ನು ನೋಡಬೇಕಾದರೆ ಇಲ್ಲಿಗೆ ಬರಬೇಕು. ಮಹೇಂದ್ರ ಕುಮಾರ್ ಅವರ ಸಂಗ್ರಹವು ದೊಡ್ಡ ಮಟ್ಟದಿಂದ ಕೂಡಿದೆ. ಇಲ್ಲಿನ ತಾಪಮಾನಕ್ಕೆ ಸಂಬಂಧಿಸಿದಂತೆ ನಿಯಂತ್ರಿತ ಸ್ಥಿತಿಯಲ್ಲಿ ಸಂರಕ್ಷಿಸಿಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ವಸ್ತುಗಳ ಬಗ್ಗೆ ಒಂದು ಪ್ರಾಥಮಿಕ ಅಧ್ಯಯನ ಅಗತ್ಯವಾಗಿದೆ ಎಂದು ಪ್ರಕಾಶ್ ಮ್ಯಾಗ್ಡಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಗ್ರಹದಲ್ಲಿ ಕನಿಷ್ಠ 1,600 ಛಾಯಾಚಿತ್ರಗಳು, 2,300 ಬಣ್ಣದ ಸಕಾರಾತ್ಮಕ ಸ್ಲೆ$çಡ್‌ಗಳು, 350 ಸ್ಟ್ರಿಪ್ಸ್‌ಗಳ ನಕಾರಾತ್ಮಕ ಚಿತ್ರಗಳು ಮತ್ತು 30 ಕ್ಯಾನು ಗಳ ಫಿಲ್ಮ್ ರೀಲ್‌ಗಳು ಇವೆ ಎಂದು ಸೂಚಿಸುತ್ತದೆ. ಹಳೆಯ ಛಾಯಾಚಿತ್ರವು 1930 ರ ದಶಕದ ಹಿಂದಿನದು. ಪ್ರಸಿದ್ಧ ನರ್ತಕಿ ಉದಯ್ ಶಂಕರ್ ಮತ್ತು ಅವರ ನೃತ್ಯ ತಂಡಗಳ ಅಪರೂಪದ ಛಾಯಾಚಿತ್ರಗಳಿವೆ ಎಂದು ಮ್ಯಾಗ್ಡಮ್ ಹೇಳಿದ್ದಾರೆ.
ರಿತ್ವಿಕ್ ಕುಮಾರ್ ಘಾಟಕ್ ಅವರು ಭಾರತೀಯ ಚಿತ್ರರಂಗದ ನಿರ್ದೇಶಕರಾಗಿ, ಸ್ಕಿÅಪ್ಟ್ ರೈಟರ್ ಆಗಿ ಪ್ರಸಿದ್ಧರಾಗಿದ್ದು, ಅವರ ಭಾರತೀಯ ಚಲನಚಿತ್ರಕ್ಕೆ ಸಲ್ಲಿಸಿರುವ ವಿಶೇಷ ಕೊಡುಗೆಗೆ ಪದ್ಮಶ್ರೀ ಪುರಸ್ಕಾರದೊಂದಿಗೆ ನ್ಯಾಷನಲ್ ಫಿಲ್ಮ್ ಅವಾರ್ಡ್, ಬಾಂಗ್ಲಾದೇಶದ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಇನ್ನಿತರ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಅವರಿಗೆ ಜೀವನ ಮತ್ತು ಬದುಕಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಈ ಸಂಗ್ರಹದಲ್ಲಿ ಒಳಗೊಂಡಿದ್ದು, ಮುಂದಿನ ಪೀಳಿಗೆಗೆ ಬಹು ಉಪಯೋಗವಾಗಲಿದೆ.
– ಮಹೇಂದ್ರ ಕುಮಾರ್,
ರಿತ್ವಿಕ್ ಘಾಟಕ್ ಸಹವರ್ತಿ ಮತ್ತು ಸಹಾಯಕ ಕ್ಯಾಮರಾಮನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.