ಉಗ್ರ ಸಂಚು ಭೇದಿಸಿದ ಎನ್‌ಐಎ
Team Udayavani, Jul 14, 2019, 5:00 AM IST
ತಮಿಳುನಾಡಿನಲ್ಲಿ ಮತ್ತೂಂದು ಮಹತ್ವದ ಕಾರ್ಯಾಚರಣೆ
ಹೊಸದಿಲ್ಲಿ: ಇತ್ತೀಚೆಗಷ್ಟೇ ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದಂದು ಸ್ಫೋಟ ನಡೆಸಿದ ಉಗ್ರರ ಜೊತೆ ಸಂಪರ್ಕ ಹೊಂದಿದ ತಮಿಳುನಾಡಿನ ಶಂಕಿತ ಉಗ್ರರ ಜಾಲ ಭೇದಿಸಿ ಮೂವರನ್ನು ಬಂಧಿಸಿದ್ದ ರಾಷ್ಟ್ರೀಯ ತನಿಖಾ ದಳ ಇದೀಗ ಮತ್ತೂಂದು ಜಾಲವನ್ನು ಭೇದಿಸಿದೆ. ಮೂವರು ಶಂಕಿತರು ಭಾರೀ ಪ್ರಮಾಣದ ಹಣ ಸಂಗ್ರಹಿಸಿದ್ದು, ಅನ್ಸರುಲ್ಲಾ ಎಂಬ ಉಗ್ರ ಸಂಘಟನೆ ಸ್ಥಾಪಿಸಿ ಆ ಮೂಲಕ ದುಷ್ಕೃತ್ಯ ನಡೆಸುವ ಸಂಚು ರೂಪಿಸಿದ್ದರು.
ಚೆನ್ನೈ, ನಾಗಪಟ್ಟಿಣಂನಲ್ಲಿರುವ ಮೂವರು ಶಂಕಿತರ ಮನೆಗಳ ಮೇಲೆ ಶನಿವಾರ ಎನ್‌ಐಎ ನಡೆಸಿದ ದಾಳಿ ವೇಳೆ ಈ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಚೆನ್ನೈನ ಸೈಯದ್ ಮೊಹಮದ್ ಬುಖಾರಿ, ನಾಗಪಟ್ಟಿಣಂನ ಹಸನ್ ಅಲಿ ಯೂನಸ್‌ಮರಿಕರ್, ಮೊಹಮದ್ ಯೂಸುಫುದ್ದೀನ್ ಹ್ಯಾರಿಸ್ ಮೊಹಮದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. 9 ಮೊಬೈಲ್, 15 ಸಿಮ್ ಕಾರ್ಡ್, 7 ಮೆಮೊರಿ ಕಾರ್ಡ್, 3 ಲ್ಯಾಪ್‌ಟಾಪ್, 5 ಹಾರ್ಡ್ ಡಿಸ್ಕ್, 6 ಪೆನ್ ಡ್ರೈವ್, 2 ಟ್ಯಾಬ್ಲೆಟ್, 3 ಡಿವಿಡಿ ವಶಪಡಿಸಿಕೊಳ್ಳಲಾಗಿದೆ. ಮೂಲಗಳ ಪ್ರಕಾರ ಶೀಘ್ರದಲ್ಲೇ ಇವರನ್ನು ಬಂಧಿಸಲಾಗುತ್ತದೆ. ಇವರೊಂದಿಗೆ ಇತರ ಮೂವರೂ ಈ ಸಂಚಿನಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಇವರ ಮೂಲ ಉದ್ದೇಶವೇ ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಜಾರಿಗೊಳಿ ಸುವುದು ಎಂದು ಎನ್‌ಐಎ ಆರೋಪಿಸಿದೆ.
ವಹಾªತೆ ಮೇಲೂ ದಾಳಿ: ಚೆನ್ನೈನ ಇಸ್ಲಾಮಿಕ್ ತೀವ್ರಗಾಮಿ ಸಂಘಟನೆ ವಹಾªತೆ ಇಸ್ಲಾಮಿ ಹಿಂದ್ ಸಂಸ್ಥೆಯ ಕಚೇರಿಗಳ ಮೇಲೂ ಎನ್‌ಐಎ ದಾಳಿ ನಡೆಸಿದೆ. ನಿಷೇಧಿತ ಸಿಮಿ ಸಂಘಟನೆಗೆ ಪರ್ಯಾಯವಾಗಿ ಉತ್ತರ ಪ್ರದೇಶ ಮೂಲದ ಈ ಸಂಘಟನೆ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ತಮಿಳುನಾಡು ಹಾಗೂ ಕೇರಳದಲ್ಲಿ ಇದು ತನ್ನ ಕಚೇರಿಗಳನ್ನು ಹೊಂದಿದ್ದು, ಉಪನ್ಯಾಸ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಈ ಸಂಘಟನೆಗಳು ಇತರ ನಿಷೇಧಿತ ಸಂಘಟನೆಗಳ ಜೊತೆಗೆ ಕೆಲಸ ಮಾಡುತ್ತಿವೆಯೇ, ಶ್ರೀಲಂಕಾ ಸ್ಫೋಟದ ಸಂಚುಕೋರರಿಗೂ ಈ ಸಂಘಟನೆಗೂ ಸಂಬಂಧವಿದೆಯೇ ಎಂಬುದನ್ನು ಎನ್‌ಐಎ ತನಿಖೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.