Arvind Kejriwal ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು
ಕೇಂದ್ರ ಸರಕಾರಕ್ಕೆ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಪತ್ರ; ಖಲಿಸ್ಥಾನಿ ಗುಂಪಿನಿಂದ ಆಪ್ ಹಣ ಪಡೆದಿರುವ ಆರೋಪ
Team Udayavani, May 7, 2024, 6:55 AM IST
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಎನ್‌ಐಎ ತನಿಖೆ ನಡೆಸಬೇಕು ಎಂದು ಕೋರಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.
“ಸಿಕ್ಖ್ ಫಾರ್ ಜಸ್ಟೀಸ್’ ಉಗ್ರ ಸಂಘಟನೆಯಿಂದ ಕೇಜ್ರಿವಾಲ್ ಹಣಕಾಸು ನೆರವು ಪಡೆದಿದ್ದಾರೆ ಎಂದು ಸಕ್ಸೇನಾ ಆರೋಪಿಸಿದ್ದಾರೆ.
ಈ ಕುರಿತಾಗಿ ಕೇಂದ್ರ ಸರಕಾರಕ್ಕೆ ವಿವರಣಾತ್ಮಕ ಪತ್ರ ಬರೆದಿರುವ ಸಕ್ಸೇನಾ, ಸಿಕ್ಖ್ ಫಾರ್ ಜಸ್ಟೀಸ್ ಸಂಘಟನೆಯಿಂದ ಆಪ್ 130 ಕೋಟಿ ರೂ. ಹಣ ಪಡೆದುಕೊಂಡಿದೆ. ಉಗ್ರ ದೇವೇಂದ್ರ ಭುಲ್ಲರ್ ಬಿಡುಗಡೆಗಾಗಿ ಈ ಹಣವನ್ನು ಪಡೆದುಕೊಳ್ಳಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಖಲಿಸ್ಥಾನಿ ಗುಂಪುಗಳಿಂದ ದೇಣಿಗೆಯಾಗಿ ಆಮ್ ಆದ್ಮಿ ಪಕ್ಷವು 130 ಕೋಟಿ ರೂ. ಪಡೆದಿತ್ತು ಎಂದು ಉಗ್ರ ಪನ್ನು ಹೇಳಿದ್ದಾನೆ ಎನ್ನಲಾದ ವೀಡಿಯೋ ಒಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈ ವೀಡಿಯೋವನ್ನೂ ಪತ್ರದ ಜತೆಗೆ ಲಗತ್ತಿಸಿರುವುದಾಗಿ ಸಕ್ಸೇನಾ ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಲೋಕಸಭೆ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಸಕ್ಸೇನಾ ಬಿಜೆಪಿ ಏಜೆಂಟ್
ರಾಜ್ಯಪಾಲ ಸಕ್ಸೇನಾ ಆರೋಪದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಆಪ್ ನಾಯಕರು ಸಕ್ಸೇನಾ ಅವರನ್ನು ಬಿಜೆಪಿಯ ಏಜೆಂಟ್ ಎಂದು ಕರೆದಿದ್ದಾರೆ. ಇದು ಕೇಜ್ರಿವಾಲ್ ವಿರುದ್ಧ ಕೇಂದ್ರ ಸರಕಾರ ಕೈಗೊಂಡಿರುವ ಪಿತೂರಿ. ಬಿಜೆಪಿಯ ಭಾಗವಾಗಿ ರಾಜ್ಯಪಾಲರು ಈ ಪಿತೂರಿ ಭಾಗವಾಗಿದ್ದಾರೆ ಎಂದು ಆಪ್ ನಾಯಕ ಸೌರಭ್ ಭಾರಧ್ವಾಜ್ ಆರೋಪಿಸಿದ್ದಾರೆ. ಅರವಿಂದ ಕೇಜ್ರಿವಾಲ್ ದಿಲ್ಲಿ ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಜೈಲು ಪಾಲಾಗಿದ್ದು, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆ ಎದುರಿಸುತ್ತಿದ್ದಾರೆ.
ಯಾರೀ ಭುಲ್ಲರ್?
1993ರ ದಿಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಮಾಜಿ ಪ್ರೊಫೆಸರ್. 2001ರಲ್ಲಿ ದೇವೇಂದ್ರ ಭುಲ್ಲರ್‌ಗೆ ಮರಣದಂಡನೆ ನೀಡಿ ಕೋರ್ಟ್ ತೀರ್ಪು ನೀಡಿತ್ತು. ಅನಂತರ ಅದನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.