ಮದುವೆ ನಡೆಯುತ್ತಿದ್ದ ವೇಳೆಯೇ ಕುಸಿದು ಬಿದ್ದ ಮಂಟಪ : 9 ಸಾವು
Team Udayavani, Apr 29, 2017, 11:23 AM IST
ಜೈಪುರ : ಮದುವೆ ನಡೆಯುತ್ತಿದ್ದಂತೆಯೇ ಮದುವೆ ಮಂಟಪದ ಗೋಪುರ ಭಾಗ ಕುಸಿದು ಬಿದ್ದ ಅವಘಡದಲ್ಲಿ ಕನಿಷ್ಠ 9 ಮಂದಿ ಮೃತಪಟ್ಟು ಇತರ 15 ಮಂದಿ ಗಾಯಗೊಂಡ ಘಟನೆ ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ನಿನ್ನೆ ಶುಕ್ರವಾರ ತಡರಾತ್ರಿ ನಡೆದಿದೆ.
ಮದುವೆ ಮಂಟಪದಲ್ಲಿ ಭಾತ್ ವಿಧ್ಯುಕ್ತ ಕಾರ್ಯಕ್ರಮ ನಡೆಯುತ್ತಿದ್ದಾಗ ಮದುವೆ ಮಂಟಪದ ಗೋಪುರ ಕುಸಿಯಿತು. ಈ ದುರ್ಘಟನೆ ಭರತ್‌ಪುರ ಜಿಲ್ಲೆಯ ಪಿಢಿ ಗ್ರಾಮದ ಕುಮೆØàರ್ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ನಡೆಯಿತು.
ಘಟನೆ ನಡೆದಾಗ ಹಲವಾರು ಮಂದಿ ಮದುವೆ ಮಂಟಪದಲ್ಲಿ ಕುಳಿತಿದ್ದರು. ಇದ್ದಕ್ಕಿದ್ದಂತೆಯೇ ಮದುವೆ ಮಂಟಪದ ಗೋಪುರ ರಚನೆ ಕುಸಿದು ಬಿತ್ತು. ಹಲವರು ಅದರಡಿ ಸಿಲುಕಿದರು ಎಂದು ಭರತ್‌ಪುರ ಗ್ರಾಮಾಂತರ ಸಹಾಯಕ ಎಸ್‌ಪಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.
ಗಾಯಾಳುಗಳನ್ನು ಒಡನೆಯೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರಲ್ಲಿ ಕೆಲವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು. ಬದುಕುಳಿದ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟ 15 ಮಂದಿಯಲ್ಲಿ ಎಂಟು ಮಂದಿ ಮಹಿಳೆಯರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.