ನಿಗಾದಲ್ಲಿ ತಬ್ಲೀ ಯ 9 ಸಾವಿರ ನಿಷ್ಠರು ; ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ
ದಿಲ್ಲಿಯಲ್ಲಿಯೇ ಇದ್ದಾರೆ 2,000 ಮಂದಿ ; 400 ಜನರಲ್ಲಿ ಸೋಂಕು ಪತ್ತೆ
Team Udayavani, Apr 3, 2020, 7:48 AM IST
ನಿಗಾದಲ್ಲಿ ತಬ್ಲೀ ಯ 9 ಸಾವಿರ ನಿಷ್ಠರು ; ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ನಿಜಾಮುದ್ದೀನ್‌ನಲ್ಲಿರುವ ತಬ್ಲೀ -ಎ-ಜಮಾತ್ ಸಂಘಟನೆಯ ಧಾರ್ಮಿಕ ಸಮಾವೇಶದಲ್ಲಿ ಭಾಗಿಯಾಗಿದ್ದ ಎಲ್ಲ 9,000 ಜನರನ್ನು ಪತ್ತೆ ಹಚ್ಚಲಾಗಿದೆ. ಅವರೆಲ್ಲರನ್ನೂ ನಿಗಾ ವಲಯದಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.
ಹೊಸದಿಲ್ಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ, ‘ಸಮಾವೇಶದಲ್ಲಿ ಭಾಗಿಯಾಗಿದ್ದವರಲ್ಲಿ 2,000 ಜನ ದೆಹಲಿಯಲ್ಲೇ ಇದ್ದಾರೆ. ಇವರಲ್ಲಿ 1,804ರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ.
400 ಜನರಲ್ಲಿ: ತಬ್ಲೀ ಸಮಾವೇಶದಲ್ಲಿ ಭಾಗಿಯಾಗಿದ್ದವರಲ್ಲಿ ಈವರೆಗೆ 400 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗ ರ್ವಾಲ್ ಹೇಳಿದ್ದಾರೆ.
ಗುರುವಾರ ಮಾತನಾಡಿದ ಅವರು, “ಸಮಾವೇಶದಲ್ಲಿ ಭಾಗಿಯಾಗಿದ್ದವರಲ್ಲಿ 400 ಜನರಲ್ಲಿ ಸೋಂಕು ದೃಢಪಟ್ಟಿದೆ. ತಮಿಳುನಾಡಿನಲ್ಲಿ 173, ರಾಜಸ್ಥಾನದಲ್ಲಿ 11, ಅಂಡಮಾನ್ ನಿಕೋಬಾರ್‌ನಲ್ಲಿ 9, ದೆಹಲಿಯಲ್ಲಿ 47, ಪುದುಚೇರಿ ಯಲ್ಲಿ 2, ಜಮ್ಮು ಮತ್ತು ಕಾಶ್ಮೀರದಲ್ಲಿ 2, ತೆಲಂಗಾಣದಲ್ಲಿ 33, ಆಂಧ್ರಪ್ರದೇಶದಲ್ಲಿ 67, ಅಸ್ಸಾಂನಲ್ಲಿ 16 ಪ್ರಕರಣಗಳು ವರದಿಯಾಗಿವೆ. ಅವರೆಲ್ಲರನ್ನೂ ನಿಗಾ ವಲಯದಲ್ಲಿ ಇರಿಸಲಾಗಿದೆ” ಎಂದು ತಿಳಿಸಿದ್ದಾರೆ.
ಮೌಲಾನಾ ಸಾದ್ “ಅಜ್ಞಾತ’ ಆಡಿಯೋ
ದೆಹಲಿಯ ನಿಜಾಮುದ್ದೀನ್‌ನಲ್ಲಿ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಸಮಾವೇಶ ನಡೆಸಿದ ಅನಂತರ ನಾಪತ್ತೆಯಾಗಿರುವ ತಬ್ಲೀ -ಎ-ಜಮಾತ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಸಾದ್ ಕಾಂಧಲವಿ, ತಾವಿರುವ ಅಜ್ಞಾತ ಸ್ಥಳದಿಂದಲೇ ಎರಡು ಧ್ವನಿಮುದ್ರಿತ ಸಂದೇಶಗಳನ್ನು ರವಾನಿಸಿದ್ದಾರೆ.
“ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಸರಕಾರ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು. ಎಲ್ಲೂ, ಯಾರೂ ಒಟ್ಟಿಗೆ ಸೇರಬೇಡಿ. ಎಲ್ಲರೂ ಅಂತರ ಕಾಪಾಡಿಕೊಳ್ಳಬೇಕು’ ಎಂದು ಮುಸ್ಲಿಂ ಸಮುದಾಯಕ್ಕೆ ಆಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ. “ನಮ್ಮನ್ನು ನಾವು ನಿಗ್ರಹಿಸುವುದು ಇಸ್ಲಾಂ ಅಥವಾ ಶೆರಿಯಾ ಕಾನೂನಿಗೆ ವಿರುದ್ಧವೇನಲ್ಲ’ ಎಂದೂ ಹೇಳಿದ್ದಾರೆ. ಪೊಲೀಸರು ಈಗ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇಬ್ಬರು ಸಾವು: ಕೇಜ್ರಿವಾಲ್
ಮಸೀದಿಯಿಂದ ಇತ್ತೀಚೆಗೆ ತೆರವುಗೊಳಿಸಿದ್ದ ತಬ್ಲೀ ಬೆಂಬಲಿಗರಲ್ಲಿ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ದೆಹಲಿ ಸಿಎಂಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. 2,346 ಬೆಂಬಲಿಗರನ್ನು ತೆರವುಗೊಳಿಸಲಾಗಿತ್ತು. ಹೊಸದಿಲ್ಲಿಯಲ್ಲಿ 182 ಪ್ರಕರಣಗಳು ದೃಢಪಡುವುದರ ಜತೆಗೆ ಸೋಂಕು ಪೀಡಿತರ ಒಟ್ಟು ಸಂಖ್ಯೆ ಸದ್ಯ 293ಕ್ಕೆ ಏರಿದಂತಾಗಿದೆ ಎಂದಿದ್ದಾರೆ.
ಸೋಂಕು ನಿವಾರಣೆ ಚುರುಕು
ನಿಜಾಮುದ್ದೀನ್ ಪ್ರಾಂತ್ಯದಲ್ಲಿ ಸೋಂಕು ನಿವಾರಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಇದಕ್ಕೆ ದೆಹಲಿಯ ಅಗ್ನಿಶಾಮಕ ದಳದ ಸಿಬಂದಿಯನ್ನು ಬಳಸಿಕೊಳ್ಳಲಾಗಿದೆ. ಮಾಹಿತಿ ಕೊಟ್ಟವನ ಮೇಲೆ
ಹಲ್ಲೆ: ದೆಹಲಿಯಲ್ಲಿ ನಡೆದ ತಬ್ಲೀ ಸಮಾವೇಶಕ್ಕೆ ಹೋಗಿ ಬಂದಿದ್ದ ತನ್ನ ಹಳ್ಳಿಯ ಏಳು ಜನರ ಬಗ್ಗೆ ಗ್ರಾ.ಪಂ.ಗೆ ಮಾಹಿತಿ ನೀಡಿದ್ದ ವ್ಯಕ್ತಿಯ ಮೇಲೆ ಆ ಏಳು ಜನರು ಹಲ್ಲೆ ನಡೆಸಿರುವ ಪ್ರಕರಣ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಿಂಪಿ ಎಂಬ ಹಳ್ಳಿಯಲ್ಲಿ ನಡೆದಿದೆ.
ವೈದ್ಯರನ್ನು ನಿಂದಿಸಿ, ಉಗಿದರು!
ನೈರುತ್ಯ ದೆಹಲಿಯ ರೈಲ್ವೆ ಇಲಾಖೆಯ ಪ್ರದೇಶವೊಂದರಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ವೈದ್ಯಕೀಯ ನಿಗಾ ಘಟಕದಲ್ಲಿ ದಾಖಲಾಗಿರುವ ತಬ್ಲೀ ಬೆಂಬಲಿಗರು, ಅಲ್ಲಿ ತಮ್ಮನ್ನು ಪರೀಕ್ಷಿಸಲು ಅಥವಾ ಶುಶ್ರೂಷೆ ಮಾಡಲು ಬಂದ ವೈದ್ಯರು ಹಾಗೂ ವೈದ್ಯಕೀಯ ಸಿಬಂದಿಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ.
ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿ ಬಂದಿದ್ದರಿಂದಾಗಿ ಅವರನ್ನು ಇಲ್ಲಿನ ತಾತ್ಕಾಲಿಕ ನಿಗಾ ಘಟಕದಲ್ಲಿ ಇರಿಸಲಾಗಿದೆ. ಗುರುವಾರ, ಈ ನಿಗಾ ಘಟಕದ ಎಲ್ಲೆಂದರಲ್ಲಿ ಓಡಾಡಿಕೊಂಡಿದ್ದನ್ನು ವೈದ್ಯಕೀಯ ಸಿಬಂದಿ ಆಕ್ಷೇಪಿಸಿದ್ದರು. ಆಗ, ಸೋಂಕು ಶಂಕಿತರು ಹಾಗೂ ಸಿಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.
ಆನಂತರ, ತಮಗೆ ನೀಡಲಾದ ಆಹಾರದ ಬಗ್ಗೆ ತಗಾದೆ ತೆಗೆದ ಶಂಕಿತರು, ವೈದ್ಯರನ್ನು ವಿನಾಕಾರಣ ನಿಂದಿಸಲಾರಂಭಿಸಿದರು. ಕೆಲವರು, ತಮ್ಮನ್ನು ಸಮಾಧಾನ ಪಡಿಸಲು ಬಂದ ವೈದ್ಯಕೀಯ ಸಿಬಂದಿಯ ಕಡೆಗೆ ಉಗಿದರು ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.
ಪಾಕ್‌ನ ರೈವಿಂದ್ ನಗರ ಲಾಕ್‌ಡೌನ್
ಲಾಹೋರ್‌ನಿಂದ 50 ಕಿ.ಮೀ. ದೂರವಿರುವ ಪಾಕಿಸ್ತಾನದ ರೈವಿಂದ್ ನಗರದಲ್ಲಿರುವ ತಬ್ಲೀ ಸಂಘಟನೆಯ 50 ಸದಸ್ಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ಏಳು ಮಹಿಳಾ ಕಾರ್ಯಕರ್ತೆಯರಿದ್ದು ಅವರು ನೈಜೀರಿಯಾದವರು. ಸೋಂಕಿನ ಹಿನ್ನೆಲೆಯಲ್ಲಿ ರೈವಿಂದ್ ನಗರವನ್ನು ಪಾಕಿಸ್ತಾನ ಸರಕಾರ ಲಾಕ್‌ಡೌನ್ ಮಾಡಿದೆ.
ಎಲ್ಲ ಅಂಗಡಿಗಳು, ವ್ಯಾಪಾರ- ವಹಿವಾಟನ್ನು ನಿಲ್ಲಿಸಲಾಗಿದ್ದು ಮೆಡಿಕಲ್ ಶಾಪ್‌ಗ್ಳನ್ನೂ ಮುಚ್ಚಿಸಲಾಗಿದೆ. ಮತ್ತೂಂದೆಡೆ ಸಿಂಧ್ ಪ್ರಾಂತ್ಯದ ಪ್ರಮುಖ ನಗರವಾದ ಹೈದರಾಬಾದ್‌ನಲ್ಲೂ ತಬ್ಲಿಘ…ನ 30 ಸದಸ್ಯರಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಪಾಕ್‌ನಲ್ಲಿ ಸೋಂಕಿತರ ಸಂಖ್ಯೆ 2,300ಕ್ಕೇರಿದೆ.
ಸನ್ನದ್ಧ ಸ್ಥಿತಿಯಲ್ಲಿ ಯುದ್ಧನೌಕೆ, ವಿಮಾನಗಳು
ಭಾರತದಲ್ಲಿ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ದೇಶವು ಸಾಮುದಾಯಿಕ ವ್ಯಾಪಿಸುವಿಕೆಯ ಹಂತಕ್ಕೆ ಕಾಲಿಡುವ ಸಾಧ್ಯತೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಐಎಎಫ್, ನೌಕಾಪಡೆ ಸಿದ್ಧವಾಗಿದೆ.
ಅದರಂತೆ, ಅಗತ್ಯ ಸಲಕರಣೆಗಳು, ವೈದ್ಯಕೀಯ ಪರಿಕರಗಳು, ಔಷಧಗಳ ಸಾಗಣೆಗೆ ನೆರವಾಗುವ ಸಲುವಾಗಿ ವಿಮಾನಗಳು ಸಜ್ಜಾಗಿವೆ. ಪರಿಸ್ಥಿತಿ ನಿಯಂತ್ರಣ ತಪ್ಪಿದಲ್ಲಿ ಸ್ಥಳೀಯಾಡಳಿತಗಳಿಗೆ ನೆರವಾಗಲು ಸಿದ್ಧರಾಗಿರಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೂಚಿಸಿ¨ªಾರೆ. ಈಗಾಗಲೇ ಸಶಸ್ತ್ರ ಪಡೆಗಳು ದೇಶಾದ್ಯಂತ ನಿಗಾ ಕೇಂದ್ರಗಳನ್ನು ನಿರ್ಮಿಸುತ್ತಿದ್ದರೆ, ರಕ್ಷಣಾ ಇಲಾಖೆಯ ಸರ್ಕಾರಿ ಸ್ವಾಮ್ಯದ ಘಟಕಗಳು ಅವಶ್ಯಕ ವೈದ್ಯಕೀಯ ಪರಿಕರಗಳ ತಯಾರಿಯಲ್ಲಿ ತೊಡಗಿವೆ.
ಮಹಿಳಾ ವೈದ್ಯರ ಮೇಲೆ ದಾಳಿ
ಕೋವಿಡ್ 19 ವೈರಸ್ ಶಂಕಿತರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲು ಬಂದಿದ್ದ ವೈದ್ಯರ ತಂಡದ ಮೇಲೆ ಸ್ಥಳೀಯರು ದಾಳಿ ನಡೆ ಸಿರುವ ಪ್ರಕರಣ ಇಂದೋರ್‌ನ ಟಾಟ್‌ಪಟ್ಟಿ ಪ್ರಾಂತ್ಯದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಹಿಳಾ ವೈದ್ಯರು ಗಾಯ ಗೊಂಡಿದ್ದಾರೆ. ಇಂದೋರ್‌ನ ಎರಡು ಕೊರೊನಾ ಹಾಟ್‌ಸ್ಪಾಟ್‌ಗಳಲ್ಲಿ ಟಾಟ್‌ಪಟ್ಟಿಯೂ ಒಂದು.
ಈ ಹಿನ್ನೆಲೆಯಲ್ಲಿ ಸ್ಕ್ರೀನಿಂಗ್‌ಗೆ ವೈದ್ಯರು ಆಗಮಿಸಿದಾಗ ರೊಚ್ಚಿಗೆದ್ದ ಸ್ಥಳೀಯರು, ವೈದ್ಯಕೀಯ ಸಿಬಂದಿಯನ್ನು ಹೊಡೆಯಲು ಮುಂದಾಗಿ ದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ. ಇದೇ ವೇಳೆ ಹೈದರಾಬಾದ್‌ನಲ್ಲಿ ಸೋಂಕಿತ ವ್ಯಕ್ತಿ ಅಸುನೀಗಿದ್ದನ್ನು ಪ್ರತಿಭಟಿಸಿ ಆತನ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಾಕ್‌ಡೌನ್‌ನಿಂದ ಸೋಂಕು ನಿಯಂತ್ರಣ
ದೇಶದಾದ್ಯಂತ ಪ್ರಸ್ತುತ ಜಾರಿಯಲ್ಲಿರುವ 21 ದಿನಗಳ ಲಾಕ್‌ಡೌನ್ ಕೋವಿಡ್ 19 ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು ಶೇ.83ರಷ್ಟು ತಗ್ಗಿಸುವಲ್ಲಿ ನೆರವಾಗಲಿದೆ. ಈ ಮೂಲಕ ಲಾಕ್‌ಡೌನ್‌ನ 20ನೇ ದಿನ ಹೊತ್ತಿಗೆ ಭಾರತದಲ್ಲಿ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಪ್ರದೇಶದ ಶಿವ ನಾದರ್ ವಿಶ್ವಿವಿದ್ಯಾಲಯದ ಸಂಶೋಧನಾರ್ಥಿಗಳು ಕೈಗೊಂಡ ಅಧ್ಯಯನದಿಂದ ಈ ಅಂಶ ತಿಳಿದುಬಂದಿದ್ದು, ಲಾಕ್‌ಡೌನ್ ಆದಾಗಿನಿಂದ ಈ ವರೆಗೆ ಯಾರಲ್ಲಾದರೂ ಸೋಂಕಿನ ಲಕ್ಷಣ ಕಂಡುಬಂದ ಒಂದು, ಹೆಚ್ಚೆಂದರೆ ಎರಡು ದಿನಗಳಲ್ಲಿ ಅವರನ್ನು ಐಸೋಲೇಟ್ ಮಾಡಲಾಗುತ್ತಿದೆ. ಶೇ.80ರಿಂದ 90 ಮಂದಿ ಪರಿಣಾಮಕಾರಿಯಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.