ನೀರವ್ ಮೋದಿಯ 4 ಸ್ವಿಸ್ ಖಾತೆ ನಿಷ್ಕ್ರಿಯ
Team Udayavani, Jun 28, 2019, 5:37 AM IST
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13 ಸಾವಿರ ಕೋಟಿ ರೂ. ಮೋಸ ಮಾಡಿರುವ ಉದ್ಯಮಿ ನೀರವ್ ಮೋದಿಯ ನಾಲ್ಕು ಸ್ವಿಸ್ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ನೀರವ್ ಹಾಗೂ ಆತನ ಸೋದರಿ ಪೂರ್ವಿ ಮೋದಿಯ ಖಾತೆಗಳಾಗಿದ್ದು, ಇವುಗಳಲ್ಲಿ ಒಟ್ಟು 280 ಕೋಟಿ ರೂ. ಇತ್ತು. ಜಾರಿ ನಿರ್ದೇಶನಾಲಯದ ಸೂಚನೆಯ ಮೇರೆಗೆ ಸ್ವಿಸ್ ಬ್ಯಾಂಕ್ ಈ ಖಾತೆಗಳಲ್ಲಿರುವ ಹಣವನ್ನು ಅಕ್ರಮದ ಹಣ ಎಂದು ಪರಿಗಣಿಸಿದ್ದು, ಖಾತೆಯನ್ನು ನಿಷ್ಕ್ರಿಯಗೊಳಿಸಿದೆ. ಇದರಿಂದ ನೀರವ್ ಈ ಖಾತೆಗಳಿಂದ ಹಣ ಹಿಂಪಡೆಯುವುದು ಅಸಾಧ್ಯ.
ಜುಲೈ 25ರವರೆಗೆ ಜೈಲು: ಪಿಎನ್ಬಿ ಪ್ರಕರಣದಲ್ಲಿ ಲಂಡನ್ನ ವ್ಯಾಂಡ್ಸ್ವರ್ತ್ ಜೈಲಿನಲ್ಲಿರುವ ನೀರವ್ ಮೋದಿ, ಜುಲೈ 25ರವರೆಗೂ ಜೈಲು ವಾಸ ಅನುಭವಿಸಬೇಕಿದೆ. ಇಂಗ್ಲೆಂಡ್ ಕೋರ್ಟ್ ಈ ಸಂಬಂಧ ಜೈಲು ವಾಸದ ಅವಧಿಯನ್ನು ವಿಸ್ತರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.