ನೀರವ್ ಮೋದಿ ಆಪ್ತ ಸುಭಾಷ್ ಗಡಿಪಾರು
Team Udayavani, Apr 13, 2022, 6:50 AM IST
ನವದೆಹಲಿ: ವಂಚಕ ನೀರವ್ ಮೋದಿಯ ನಿಕಟವರ್ತಿ ಸುಭಾಷ್ ಶಂಕರ್ ಪರಬ್ (50) ಎಂಬಾತನನ್ನು ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಬಂಧಿಸಿ, ಭಾರತಕ್ಕೆ ಗಡಿಪಾರು ಮಾಡಲಾಗಿದೆ.
ಸಿಬಿಐನ ಹಿರಿಯ ಅಧಿಕಾರಿಗಳ ತಂಡ ಕೆಲದಿನಗಳ ಹಿಂದೆ ಕೈರೋಕ್ಕೆ ತೆರಳಿತ್ತು. ರಾಜತಾಂತ್ರಿಕ ಮತ್ತು ಕಾನೂನಾತ್ಮಕ ಪ್ರಕ್ರಿಯೆ ಪೂರೈಸಿ ಆತನನ್ನು ದೇಶಕ್ಕೆ ಕರೆತರಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚಿಸಿದ ನೀರವ್ ಮೋದಿ ಶಂಕರ್ ಪರಬ್‌ನನ್ನು ಕೈರೋದ ಉಪನಗರದಲ್ಲಿ ಅಕ್ರಮವಾಗಿ ಬಂಧನದಲ್ಲಿ ಇರಿಸಿದ್ದ.
ಇದನ್ನೂ ಓದಿ:ಬಾಲಿವುಡ್‌ನ ಆಲಿಯಾ ಭಟ್ -ರಣಬೀರ್ ಕಪೂರ್ ಮದುವೆ ಮುಂದೂಡಿಕೆ?
ಸುಭಾಷ್ ಶಂಕರ್ ಪರಬ್, ನೀರವ್ ಮೋದಿ ಮಾಲೀಕತ್ವದಲ್ಲಿದ್ದ ಫೈರ್‌ಸ್ಟಾರ್ ಡೈಮಂಡ್ ಸಂಸ್ಥೆ ಹಣಕಾಸು ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 7 ಸಾವಿರ ಕೋಟಿ ರೂ. ಮೊತ್ತ ವಂಚನೆ ಮಾಡುವ ನಿಟ್ಟಿನಲ್ಲಿ ದಾಖಲೆಗಳನ್ನು ನೀಡಿದ್ದಕ್ಕೆ ಆತನೇ ಪ್ರಮುಖ ಸಾಕ್ಷಿ.
2018ರಲ್ಲಿ ಹಗರಣ ಬೆಳಕಿಗೆ ಬರುತ್ತಲೇ, ನಾಪತ್ತೆಯಾಗಿದ್ದ ಪ್ರಧಾನ ವ್ಯಕ್ತಿಗಳಲ್ಲಿ ಈತನೂ ಒಬ್ಬನಾಗಿದ್ದ. ಆತನ ವಿರುದ್ಧ ಕೇಂದ್ರ ಸರ್ಕಾರ ಇಂಟರ್‌ಪೋಲ್ ನೆರವಿನಿಂದ ರೆಡ್‌ಕಾರ್ನರ್ ನೋಟಿಸ್ ಹೊರಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.