ನೀರವ್ ಮೋದಿ ನೀಡಿದ್ದ ನಕಲಿ ಉಂಗುರ ತಂದಿಟ್ಟ ಅವಾಂತರ
Team Udayavani, Oct 9, 2018, 8:10 AM IST
ಹೊಸದಿಲ್ಲಿ: ಪಿಎನ್ಬಿ ಹಗರಣದ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿಯಿಂದಾಗಿ ನಿಶ್ಚಿತಾರ್ಥ ಮುರಿದುಬಿದ್ದಿದೆ! ಕೆನಡಾದ ಆರ್ಥಿಕ ವ್ಯವಹಾರಗಳ ಕಂಪೆನಿಯೊಂದರ ಮುಖ್ಯಸ್ಥರಾದ ಆಲ್ಫೋನ್ಸೊ ಎಂಬುವರಿಗೆ ನೀರವ್ ಮೋದಿ ನಕಲಿ ವಜ್ರದ ಉಂಗುರಗಳನ್ನು ನೀಡಿ 1.50 ಕೋಟಿ ರೂ.ಗಳಷ್ಟು ಟೋಪಿ ಹಾಕಿದ್ದಾರೆ. ನಿಶ್ಚಿತಾರ್ಥದ ವೇಳೆ ಅಲ್ಫೋನ್ಸೋ ತಮ್ಮ ಭಾವೀ ಪತ್ನಿಗೆ ನೀಡಿದ್ದ ಈ ವಜ್ರದ ಉಂಗುರ ನಕಲಿ ಎಂದು ಗೊತ್ತಾದ ಮರುಕ್ಷಣವೇ ಸಂಬಂಧ ಮುರಿದುಬಿದ್ದಿದೆ. ಈಗ ಅಲ್ಫೋನ್ಸೋಗೆ ಅತ್ತ ಹುಡುಗಿಯೂ ಇಲ್ಲ, ಇತ್ತ ಹಣವೂ ಇಲ್ಲ ಎಂಬಂತಾಗಿದೆ.
ಹೇಗಾಯ್ತು ಮೋಸ?: 2012ರಲ್ಲಿ ನೀರವ್ ಮೋದಿ ಹಾಗೂ ಆಲ್ಫೋನ್ಸೊಗೂ ಪರಿಚಯವಾಗಿ, ಕ್ರಮೇಣ ಆತ್ಮೀಯತೆ ಬೆಳೆದಿತ್ತು. ಏಪ್ರಿಲ್ ತಿಂಗಳಲ್ಲಿ, ತಮ್ಮ ಪ್ರೇಯಸಿಗಾಗಿ ಎಂಗೇಜ್ಮೆಂಟ್ ಉಂಗುರಗಳನ್ನು ಕೊಳ್ಳಲು ಮುಂದಾಗಿದ್ದ ಆಲ್ಫೋನ್ಸೊಗೆ ನೀರವ್ ನೆನಪಾಗಿದ್ದಾರೆ. ತತ್ಕ್ಷಣ ನೀರವ್ಗೆ ಇ-ಮೇಲ್ ಕಳುಹಿಸಿದ್ದಾರೆ. ಆಗ, ಸರ್ವೋಚ್ಛ ಉಂಗುರಗಳೆಂದು ಹೇಳಿ 3.2 ಕ್ಯಾರಟ್ನ ಬ್ರಿಲಿಯಂಟ್ ಡೈಮಂಡ್ ಕಟ್ ಉಳ್ಳ, 2 ಉಂಗುರಗಳನ್ನು ಕಳಿಸಿದ ನೀರವ್, ಒಂದೂವರೆ ಕೋಟಿ ರೂ.ಗಳನ್ನು ಆನ್ಲೈನ್ ಮೂಲಕ ಪಡೆದಿದ್ದಾನೆ. ಆದರೆ, ಗುಣಮಟ್ಟದ ಸರ್ಟಿಫಿಕೇಟ್ಗಳನ್ನು ತಿಂಗಳುಗಳಾದರೂ ಕಳಿಸಿರಲಿಲ್ಲ. ಅನುಮಾನಗೊಂಡ ಆಲ್ಫೋನ್ಸೊ ಪ್ರೇಯಸಿ ಉಂಗುರಗಳನ್ನು ಪರೀಕ್ಷಿಸಿದಾಗ ಅವು ನಕಲಿಯೆಂದು ಗೊತ್ತಾಗಿದೆ. ಅಲ್ಫೋನ್ಸೋ ಮೇಲೆ ಕೋಪಗೊಂಡ ಆಕೆ ತಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.